ಉಡುಪಿ: ಈ ಬಾರಿ ಸಚಿವ ಸಂಪುಟ ಪುನರ್ ರಚನೆ ಸಾಧ್ಯತೆ ಇದ್ದು . ಜೂನ್ 15ರಂದು ಸಿಎಂ ಸಚಿವ ಪರಿಷತ್ ಸಭೆ ಕರೆದಿದ್ದಾರೆ. ತಮ್ಮನ್ನು ಸಚಿವ ಸಂಪುಟದಿಂದ ಕೈ ಬಿಡುವ ವಿಚಾರ ತಿಳಿದಿಲ್ಲ , ಸಚಿವ ಸ್ಥಾನದಿಂದ ಕೈ ಬಿಟ್ಟರೆ ಪಕ್ಷದ ತೀರ್ಮಾನಕ್ಕೆ ಬದ್ದ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಸೊರಕೆ ಅನುಪಮಾ ಶೆಣೈ ರಾಜೀನಾಮೆ ಅಂಗೀಕಾರದಲ್ಲಿ ಸರಕಾರ ಅವಸರ ಮಾಡಿಲ್ಲ. ಪೊಲೀಸ್ ಮುಷ್ಕರದ ವೇಳೆ ಅನುಪಮಾ ರಾಜೀನಾಮೆ ನೀಡಿದ್ದಾರೆ. ಮುಷ್ಕರಕ್ಕೆ ಬೆಂಬಲ ಅನ್ನೋ ರೀತಿಯಲ್ಲಿ ಅನುಪಮಾ ರಾಜೀನಾಮೆ ನೀಡಿದ್ದಾರೆ. ಮುಷ್ಕರದಲ್ಲಿ ಭಾಗಿಯಾದವರ ಮೇಲೆ ಸಿಎಂ ಮೊದಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ರಾಜೀನಾಮೆ ಅಂಗೀಕಾರವಾಗಿದೆ.