ಕರಾವಳಿ

ಪಡೀಲ್ ಬಳಿ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ..

Pinterest LinkedIn Tumblr

padil_gas_blast_1

ಮಂಗಳೂರು,ಜೂ .14: ನಗರದ ಪಡೀಲ್ ಬಳಿಯ ಅಳಪೆ ಮಂಜಲಿಕೆಯ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಸಿದ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಈ ಅವಘಡದಿಂದ ಸುಮಾರು 2 ಲಕ್ಷ ರೂ. ಗಳಷ್ಟು ಸೊತ್ತುಗಳು ಹಾನಿಗೊಂಡಿದೆ ಎನ್ನಲಾಗಿದೆ.

ಕ್ಯಾಂಪ್ಕೋ ಕ್ವಾರ್ಟಸ್‌ನಲ್ಲಿರುವ ಉಮೇಶ್ ಎಂಬವರ ಮನೆಯಲ್ಲಿ ಸೋಮವಾರ ರಾತ್ರಿ ಈ ಅವಘಡ ಸಂಭವಿಸಿದೆ. ಉಮೇಶ್ ಮನೆಯವರು ರಾತ್ರಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ ಎಂದು ತಿಳಿದು ಬಂದಿದೆ.

padil_gas_blast_2 padil_gas_blast_3

ಸ್ಪೋಟದ ತೀವ್ರತೆಗೆ ಗ್ಯಾಸ್ ಸಿಲಿಂಡರ್ ಸಂಪೂರ್ಣ ಸಿಡಿದು ಹೋಗಿದ್ದು ಅಡುಗೆ ಕೋಣೆಯಲ್ಲಿದ್ದ ಹೆಚ್ಚಿನ ವಸ್ತುಗಳು ಹಾನಿಗೊಂಡಿದೆ. ಮಿಕ್ಸಿ, ಗ್ರೈಂಡರ್‌ಗಳು ಜಖಂಗೊಂಡಿದೆ. ಮನೆಯ ಕಿಟಕಿಗಳ ಗಾಜುಗಳಿಗೂ ಹಾನಿಯಾಗಿದೆ.

ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಗಾಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಡೆಗಟ್ಟಿದ್ದಾರೆ.

Comments are closed.