ಅಂತರಾಷ್ಟ್ರೀಯ

ವಾಟ್ಸ್ ಆಪ್​ ಬಳಕೆದಾರರಿಗೊಂದು ಸಿಹಿ ಸುದ್ದಿ…!

Pinterest LinkedIn Tumblr

WhatsApp-1

ನವದೆಹಲಿ: ಜಗತ್ ಪ್ರಸಿದ್ಧ ಸಾಮಾಜಿಕ ಜಾಲತಾಣ ವಾಟ್ಸ್ ಆಪ್ನ ಬೀಟಾ ವರ್ಶಿನ್ನಲ್ಲಿ ಬೇರೆಯವರು ಮಾಡಿರುವ ಕೋಟ್(ಹೇಳಿಕೆ) ನಿಮಗೆ ಇಷ್ಟವಾದಲ್ಲಿ ಅದನ್ನು ನಿಮ್ಮದೇ ಖಾತೆ ಮೂಲಕ ನಿಮ್ಮ ನೆಚ್ಚಿನ ಗ್ರೂಪ್ ಅಥವಾ ಸದಸ್ಯರಿಗೆ ಅಪ್ಲೋಡ್ ಮಾಡುವುದು ಮತ್ತು ಅದಕ್ಕೆ ಮರುಉತ್ತರ ಕಳಿಸಬಹುದು.

ಬರಹ ಮತ್ತು ಚಿತ್ರದ ರೂಪದಲ್ಲಿರುವ ಕೋಟ್ಗಳನ್ನು ಅದರ ಮೇಲೆ ಒತ್ತಿ ಹಿಡಿದು ಮತ್ತೊಬ್ಬರಿಗೆ ಕಳುಹಿಸುವ ಮುಂಚೆ ನಿಮಗೆ ಬೇಕಾದಂತೆ ಎಡಿಟ್ ಮಾಡಬಹುದಾದ ವಿನೂತನ ಸೇವೆ ವಾಟ್ಸ್ ಆಪ್ನಲ್ಲಿ ಲಭ್ಯವಾಗಲಿದೆ. ನೀವು ಕಳುಹಿಸುವ ಎಡಿಟ್ ಮಾಡಿರುವ ಬರಹ ಅಥವಾ ಚಿತ್ರದಲ್ಲಿ ಮೂಲ ಪ್ರತಿಯೊಂದಿಗೆ ನೀವು ಮಾಡಿರುವ ಬದಲಾವಣೆ ಗೋಚರಿಸಲಿದೆ.

ಸದ್ಯ ಬೀಟಾ ವರ್ಷನ್ನಲ್ಲಿ ಪ್ರಾಯೋಗಕವಾಗಿ ಜಾರಿಯಲ್ಲಿರುವ ಸೇವೆ ಶೀಘ್ರದಲ್ಲೆ ಎಲ್ಲರಿಗೂ ಲಭ್ಯವಾಗಲಿದೆ. ಇದಲ್ಲದೇ ಜಿಐಎಫ್ ವಾಲ್ಪೇಪರ್ಗಳ ಬೆಂಬಲ ವಾಟ್ಸ್ ಆಪ್ನಲ್ಲಿ ದೊರಕಲಿದೆ. ವಿಡಿಯೋ ಕಾಲಿಂಗ್ ಸೇವೆ ಕೂಡ ಆದಷ್ಟು ಬೇಗ ವಾಟ್ಸ್ಆಪ್ನಲ್ಲಿ ಸಿಗಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

Comments are closed.