ಮನೋರಂಜನೆ

ಮೊದಲ ಪಂದ್ಯದಲ್ಲಿ ಜಿಂಬಾಂಬ್ವೆ ವಿರುದ್ಧ ಭಾರತಕ್ಕೆ 9 ವಿಕೆಟ್ ಗಳ ಜಯ

Pinterest LinkedIn Tumblr

kl-rahul-ambati

ಹರಾರೆ: ಮೊದಲ ಪಂದ್ಯದಲ್ಲೇ ಕರ್ನಾಟಕ ಮೂಲದ ಭಾರತ ಕ್ರಿಕೆಟ್ ತಂಡದ ಆಟಗಾರ ಲೋಕೇಶ್ ರಾಹುಲ್ ಸಿಡಿಸಿದ ಶತಕದ ನೆರವಿನಿಂದ ಜಿಂಬಾಬ್ವೆ ತಂಡದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಜಯ ಗಳಿಸಿದೆ.

ಜಿಂಬಾಬ್ವೆ ತಂಡ ನೀಡಿದ 168 ಮೊತ್ತದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ಲೋಕೇಶ್ ರಾಹುಲ್ ಸಿಡಿಸಿದ ಶತಕ ಹಾಗೂ ಅಂಬಟಿ ರಾಯ್ಡು ಪೇರಿಸಿದ 88 ರನ್ ಗಳ ಮೂಲಕ ಜಿಂಬಾಂಬ್ವೆ ವಿರುದ್ಧ ಸುಲಭ ಜಯ ದಾಖಲಿಸಿ ಮೊದಲ ಪಂದ್ಯವನ್ನು ತನ್ನದಾಗಿಸಿಕೊಂಡಿದೆ.

rahul

jasprit-bumrah-bowling-action

ಟಾಸ್ ಗೆದ್ದು ಫೀಲ್ಡೀಂಗ್ ಆಯ್ದುಕೊಂಡ ಭಾರತ ತಂಡ ಪರ 4 ವಿಕೆಟ್ ಪಡೆದ ಬೌಲರ್ ಬೂಮ್ರಾ ಬೌಲಿಂಗ್ ದಾಳಿ ನೆರವಿನಿಂದ ಜಿಂಬಾಂಬ್ವೆ ತಂಡವನ್ನು 168 ರನ್ ಗಳಿಗೆ ಕಟ್ಟಿಹಾಕಲು ಯಶಸ್ವಿಯಾಯಿತು.

ಬೂಮ್ರಾ 28 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಧವಳ್ ಕುಲಕರ್ಣಿ 42 ರನ್ ನೀಡಿ 2 ವಿಕೆಟ್ ಹಾಗೂ ಬರೀಂದರ್ ಸ್ರಾನ್ 42 ರನ್ ನೀಡಿ 2 ಕಬಳಿಸಿ ಜಿಂಬಾಂಬ್ವೆ ಪಾಲಿಗೆ ಮಾರಕವಾದರು. ಆತಿಥೇಯ ತಂಡದ ಪರ ಎಲ್ಟಾನ್ ಚಿಗುಂಬರಾ ಅತಿ ಹೆಚ್ಚು (41 ) ರನ್ ಗಳಿಸಿದರೆ ಸಿಕಂದರ್ ರಾಜಾ 23 ರನ್ ಗಳಿಸಿ ಜಿಂಬಾಂಬ್ವೆ ತಂಡ 150 ರ ಗಡಿ ದಾಟಲು ನೆರವಾದರು, ಭಾರತದ ಪರ ಯುಜಾವೇಂದ್ರ ಚಾಚಾಲ್, ಕೆಎಲ್ ರಾಹುಲ್, ಕರುಣ್ ನಾಯರ್ ಈ ಪಂದ್ಯದ ಮೂಲಕ ಏಕ ದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು.

ಸ್ಕೋರು ವಿವರ:
ಜಿಂಬಾಬ್ವೆ 49.5 ಓವರ್ 168 ರನ್ ಆಲೌಟ್
(ಎಲ್ಟಾನ್ ಚಿಗುಂಬುರಾ 41, ಸಿಕಂದರ್ ರಾಜಾ 23, ಕ್ರೆಗ್ ಇರ್ವಿನ್ 21, ರಿಚ್ಮಂಡ್ ಮುಟುಂಬಾಮಿ 15, ಹ್ಯಾಮಿಲ್ಟನ್ ಮಸಾಕಾಜಾ 14 ರನ್ – ಜಸ್’ಪ್ರೀತ್ ಬುಮ್ರಾ 28/4, ಬರೀಂದರ್ ಸ್ರಾನ್ 42/2, ದವಳ್ ಕುಲಕರ್ಣಿ 42/2)
ಭಾರತ 42.3 ಓವರ್ 173/1
(ಕೆಎಲ್ ರಾಹುಲ್ ಅಜೇಯ 100, ಅಂಬಾಟಿ ರಾಯುಡು ಅಜೇಯ 62 ರನ್)

Comments are closed.