ಕರಾವಳಿ

ದುಬೈಯಲ್ಲಿ ನಡೆಯಿತು ಬಿಸಿಎಫ್ ನ ಬೃಹತ್ ಇಫ್ತಾರ್ ಕೂಟ

Pinterest LinkedIn Tumblr

BCF Dubai007

ದುಬೈ:  ಯು.ಎ.ಇ ಬ್ಯಾರೀಸ್ ಕಲ್ಚರಲ್ ಫೋರಮ್(ಬಿಸಿಎಫ್) ವತಿಯಿಂದ ಬೃಹತ್ ಇಫ್ತಾರ್ ಕೂಟವನ್ನು ಶುಕ್ರವಾರದಂದು ನಗರದ ಹೂದ್ ಮೇತ ಮೆಟ್ರೋ ಸ್ಟೇಶನ್ ಬಳಿಯಿರುವ ಇರಾನಿಯನ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಬಿಸಿಎಫ್ ಅಧ್ಯಕ್ಷರಾದ ಡಾ.ಯೂಸುಫ್ ರ ಅಧ್ಯಕ್ಷತೆಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಇದೆ ವೇಳೆ ಬ್ಯಾರಿ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವರ್ಷಂಪ್ರತಿ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ದಾನಿಗಳಿಂದ ಧನ ಸಂಗ್ರಹವನ್ನು ಕೂಡ ಮಾಡಲಾಯಿತು.

BCF Dubai001

BCF Dubai002

BCF Dubai003

BCF Dubai004

BCF Dubai006

BCF Dubai008

BCF Dubai009

BCF Dubai010

BCF Dubai011

BCF Dubai012

ಇಫ್ತಾರ್ ಕೂಟದ ವೇಳೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದುಬೈ ಝೈನ್ ಗ್ರೂಪ್ ಹೋಟೆಲ್ ನ ಝಫರುಲ್ಲಾ ಖಾನ್, ಡಿ.ಕೆ.ಎಸ್.ಸಿ ಅಸ್ಕರ್ ಅಲಿ ತಂಙಳ್ ಕೋಲ್ಪೆ, ಶಾರ್ಜಾ ಕರ್ನಾಟಕ ಸಂಘಡಾ ಅಧ್ಯಕ್ಷ ಸುಗಂಧ್ ರಾಜ ಬೇಕಲ್, ಬಿ.ಡಬ್ಲು.ಎಫ್ ಅಬ್ದುಲ್ಲ ಮದುಮೋಲೆ, ಡಾ.ಶಮೀರ್, ಅಲ್ತಾಫ್ ಕುದ್ರೋಳಿ, ತೈಬ್ ದಿಬ್ಬ, ಅಬ್ದುಲ್ ರಝಾಕ್ ಜೆಲ್ಲಿ, ನೊವೆಲ್ ಡಿ ಅಲ್ಮೇಡ, ಕೆ.ಸಿ.ಎಫ್ ಮೂಸ ಬಸರ, ಬಿಲ್ಲವಾಸ್ ದುಬೈ ಅಧ್ಯಕ್ಷ ಸತೀಶ್ ಪೂಜಾರಿ, ಜಯಂತ್ ಶೆಟ್ಟಿ, ದುಬೈ ಕರ್ನಾಟಕ ಸಂಘದ ಕೃಷ್ಣ ರಾಜ್ ತಂತ್ರಿ, ದಾರುನ್ನೂರು ಅಲ್ತಾಫ್ ಫರಂಗಿಪೇಟೆ ಸೇರಿದಂತೆ ದುಬೈಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು-ಪದಾಧಿಕಾರಿಗಳು ಭಾಗವಹಿಸಿದ್ದರು.

BCF Dubai013

BCF Dubai014

BCF Dubai015

BCF Dubai016

BCF Dubai017

BCF Dubai018

BCF Dubai019

BCF Dubai020

BCF Dubai021

BCF Dubai022

ಬಿಸಿಎಫ್ ನ ಎಂ.ಇ ಮೂಳೂರು, ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮಹಮ್ಮದ್, ಫ್ತಾರ್ ಕೂಟದ ಚೇರ್ಮನ್ ಅಬ್ದುಲ್ ಲತೀಫ್ ಮುಲ್ಕಿ ವೇದಿಕೆಯಲ್ಲಿ ಹಾಜರಿದ್ದರು. ಮುಹಮ್ಮದ್ ಹಾದಿ ಅಬ್ದುಲ್ಲ ಕಿರಾಅತ್ ಪಠಿಸಿದರೆ, ಬಿ.ಸಿ.ಎಫ್ ಉಪಾಧ್ಯಕ್ಷ ಅಮೀರುದ್ದೀನ್ ಎಸ್.ಐ ಧನ್ಯವಾದ ಸಲ್ಲಿಸಿದರು.

Comments are closed.