ಕರಾವಳಿ

ಜೆಡಿಎಸ್ ಗೆ ಮತ್ತೆ ಮುಖಭಂಗ ! ರಾಜ್ಯಸಭಾ ಚುನಾವಣೆಯಲ್ಲಿ ಸೋಲು; ಕಾಂಗ್ರೆಸ್ ನ 3 , ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು

Pinterest LinkedIn Tumblr

rajyasabha kar

ಬೆಂಗಳೂರು: ಜೂ.11 ರಂದು ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಫಲಿತಾಂಶ ಪ್ರಕಟಗೊಂಡಿದೆ.

ಕಾಂಗ್ರೆಸ್ ನ ಮೂರನೇ ಅಭ್ಯರ್ಥಿಯಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಕೆಸಿ ರಾಮಮೂರ್ತಿ ಜೆಡಿಎಸ್ ನ 8 ಶಾಸಕರ ಅಡ್ಡಮತದಾನದ ಪರಿಣಾಮ 52 ಮತಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಮತಗಳೊಂದಿಗೆ ರಾಜ್ಯಸಭೆಗೆ ಆಯ್ಕೆಗೊಂಡಿದ್ದಾರೆ. ಇನ್ನು ಉಳಿದಂತೆ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದ ಆಸ್ಕರ್ ಫರ್ನಾಂಡೀಸ್ ಹಾಗೂ ಜೈರಾಮ್ ರಮೇಶ್ ತಲಾ 46 ಮತಗಳ ಮೂಲಕ ರಾಜ್ಯಸಭೆಗೆ ಆಯ್ಕೆಗೊಂಡಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿದ್ದ ನಿರ್ಮಲಾ ಸೀತಾರಾಮನ್ ಗೆ 47 ಮತಗಳು ದೊರೆತಿದ್ದು ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಇನ್ನು ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಿಎಂ ಫಾರೂಕ್ ಕೇವಲ 33 ಮತಗಳನ್ನು ಪಡೆದಿದ್ದು ಜೆಡಿಎಸ್ ಗೆ ತೀವ್ರ ಮುಖಭಂಗ ಉಂಟಾಗಿದೆ. ಜೆಡಿಎಸ್ ನ 8 ಶಾಸಕರು ಕಾಂಗ್ರೆಸ್ ನ ಮೂರನೇ ಅಭ್ಯರ್ಥಿ ಕೆಸಿ ರಾಮಮೂರ್ತಿಗೆ ಮತಚಲಾಯಿಸಿದ್ದು, ಕೆಸಿ ರಾಮಮೂರ್ತಿ ಅತಿ ಹೆಚ್ಚು ಮತಗಳೊಂದಿಗೆ ರಾಜ್ಯಸಭೆಗೆ ಆಯ್ಕೆಯಾಗಲು ನೆರವಾಗಿದ್ದು ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಯಶಸ್ವಿಯಾಗಿದೆ.

Comments are closed.