ಕರ್ನಾಟಕ

ರೈತರ ಹಣವನ್ನು ನಗದು ಮಾಡಿಕೊಡುವುದಾಗಿ ನಂಬಿಸಿ ವಂಚಿಸಿದ್ದ ವಂಚಕ ದಂಪತಿ ಅರೆಸ್ಟ್

Pinterest LinkedIn Tumblr

21

ಬೆಂಗಳೂರು: ಜಮೀನು ಮಾರಾಟ ಮಾಡುವ ರೈತರ ಹಣವನ್ನು ನಗದು ಮಾಡಿಕೊಡುವುದಾಗಿ ನಂಬಿಸಿ ವಂಚಿಸಿದ್ದ ಇಬ್ಬರು ವಂಚಕ ದಂಪತಿಯನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿ 3.86 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶ್ವಸಿಯಾಗಿದ್ದಾರೆ.

ಜೆ.ಪಿ.ನಗರ 8ನೆ ಹಂತದ ನಿವಾಸಿ ರವೀಂದ್ರ ಚೌಧರಿ(52) ಮತ್ತು ಪತ್ನಿ ಪದ್ಮಾವತಿ(50) ಬಂಧಿತ ವಂಚಕರು ಘಟನೆ ವಿವರ : ಪ್ರಸಾದ್ ಕುಮಾರ್ ಎಂಬುವರು ಟೆಕ್‍ಮೇಟ್ ಇಂಟರ್‍ನ್ಯಾಷನಲ್ ಟೌನ್ ಶಿಪ್ ಎಂಬ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಕಂಪನಿ ಕಡೆಯಿಂದ ಜಮೀನು ಖರೀದಿಸಿ ರೆಸಿಡೆನ್ಸಿಯಲ್ ಲೇ ಔಟ್ ಮಾಡಲು ನಿರ್ಧರಿಸಿದ್ದರು.

ಜಮೀನು ಮಾರಾಟ ಮಾಡುವ ರೈತರು ಹಣವನ್ನು ನಗದಾಗಿ ನೀಡುವಂತೆ ಕೇಳಿದ್ದರಿಂದ ಕಂಪನಿಯ ಹಣವನ್ನು ನಗದು ಪಡೆಯಲು ಅವಕಾಶ ಇಲ್ಲದ್ದರಿಂದ ಪ್ರಸಾದ್ ಕುಮಾರ್ ರವರಿಗೆ ತನ್ನ ಸ್ನೇಹಿತರಾದ ಆಡಿಟರ್ ಚೆನ್ನಪ್ಪ ನ್ಯೂಲ್ವಿಮತ್ತು ನಿವೃತ್ತ ಪ್ರೊರಫೆಸರ್ ರಂಗಪ್ಪಅವರ ಮೂಲಕ ರವೀಂದ್ರ ಚೌಧರಿನನ್ನು ಭೇಟಿ ಮಾಡಿದ್ದರು. ಆ ವೇಳೆ ರವೀಂದ್ರ ಚೌಧರಿ ಕಂಪನಿಯ ಹಣವನ್ನು ನಗದು ಮಾಡಿಕೊಡುವುದಾಗಿ ನಂಬಿಸಿದ್ದನು. ಆರೋಪಿ ತನಗೆ ಪರಿಚಯ ಇರುವ ವೆಂಕಟೇಶ್ ಮುಪ್ಪಾಣಿ ರವರ ಹೈದರಾಬಾದ್‍ನಲ್ಲಿರುವ ಸಿಯಾನಂದ ಇನ್‍ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಹಣ ವರ್ಗಾವಣೆ ಮಾಡುವಂತೆ ತಿಳಿಸಿದ್ದಾನೆ. ಅದರಂತೆ ವರ್ಗಾವಣೆಯಾದ ನಂತರ ಹಣ ಡ್ರಾ ಮಾಡಿಕೊಂಡು ನಗದು ಮೂಲಕ ನೀಡುವುದಾಗಿ ನಂಬಿಸಿದ್ದರು.

ಪ್ರಸಾದ್ ಕುಮಾರ್ ರವರು ತಮ್ಮ ಕಂಪನಿಯ ಕೇರಳ ರಾಜ್ಯದ ತ್ರಿವೇಂಡ್ರಂನ ಎಸ್.ಬಿ.ಐ ಬ್ಯಾಂಕ್ ಶಾಖೆಯಿಂದ ರವೀಂದ್ರ ಚೌಧರಿ ರವರು ತಿಳಿಸಿದ್ದ ವೆಂಕಟೇಶ್ ಮುಪ್ಪಾಣಿ ರವರ ಕಂಪನಿಗೆ ಸೇರಿದ್ದ ಹೈದರಾಬಾದ್ ವಿಜಯಾ ಬ್ಯಾಂಕ್ ಖಾತೆಗೆ ರೂ.3.96 ಕೋಟಿ ಹಣವನ್ನು ವರ್ಗಾವಣೆ ಮಾಡಿದ್ದರು. ಆರೋಪಿ ರವೀಂದ್ರ ಚೌಧರಿ ವೆಂಕಟೇಶ್ ನಿಪ್ಪಾಣಿರವರ ಮೂಲಕ 3.68ಕೋಟಿ ಹಣವನ್ನು ನಗದಾಗಿ ಪಡೆದುಕೊಂಡು ನಂತರ ತಮ್ಮ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದನು. ಈ ಸಂಬಂಧ ಪ್ರಸಾದ್ ಕುಮಾರ್ ಮೇ 26ರಂದು ಜೆ.ಪಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿವಿಧ ಮಾಹಿತಿ ಕಲೆ ಹಾಕಿ ಮೇ 31ರಂದು ಆರೋಪಿ ರವೀಂದ್ರ ಚೌಧರಿ ಹಾಗೂ ಈತನ ಜೊತೆ ಕೃತ್ಯದಲ್ಲಿ ಭಾಗಿಯಾಗಿದ್ದ ಪತ್ನಿ ಪದ್ಮಾವತಿ ಬಂಧಿಸಿ 3.86 ಕೋಟಿ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೋಸ ಮಾಡಿದ್ದ ಹಣದಲ್ಲಿ 1.41 ಕೋಟಿ ಹಣವನ್ನು ಹಾಗೂ ಮೋಸದ ಹಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕಾರ್ಪೋರೇಶನ್ ಬ್ಯಾಂಕ್‍ಗಳಲ್ಲಿ ಫಿಕ್ಸೆಡ್ ಡಿಪಾಸಿಟ್ ಮಾಡಿದ್ದ 2.15ಕೋಟಿ ಹಣದ ಬಾಂಡ್‍ಗಳನ್ನು ಈತನ ಮನೆಯಲ್ಲಿ ಅಮಾನತ್ತು ಪಡಿಸಿದ್ದು ಹಾಗೂ ರವೀಂದ್ರ ಚೌಧರಿ ತನ್ನ ಖಾತೆಗೆ ಹಾಕಿದ್ದ ರೂ.2 ಲಕ್ಷ ಹಣವನ್ನು ಪ್ರೀಜ್ ಮಾಡಿಸಲಾಗಿದೆ. ವಂಚಕ ನೀಡಿದ್ದ ಮಾಹಿತಿ ಮೇರೆಗೆ ಜೂ.9ರಂದು ಹೈದರಾಬಾದ್‍ನ ನಿವಾಸಿಯಾದ ವೆಂಕಟೇಶ್ ಮುಪ್ಪನೇನಿ ರವರಿಂದ ರೂ.28 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದು, ಒಟ್ಟಾರೆ 3.86ಕೋಟಿ ರೂ. ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.

ನಗರ ದಕ್ಷಿಣ ವಿಭಾಗದ ಉಪ-ಪೊಲೀಸ್ ಕಮೀಷನರ್ ಡಾ..ಶರಣಪ್ಪಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಕಮೀಷನರ್, ಜಯನಗರ ಉಪವಿಭಾಗದ ಜಿ.ಎಂ.ಕಾಂತರಾಜ್ ನೇತೃತ್ವದಲ್ಲಿ ಜೆ.ಪಿ. ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಎಸ್.ಜೆ. ಮಹಾಜನ್ ಹಾಗೂ ಪಿಎಸ್‍ಐ ರಘುನಾಯ್ಕ್ ಮತ್ತು ಸಿಬ್ಬಂದಿಯವರ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಮೆಘರಿಕ್ ಶ್ಲಾಘಿಸಿದ್ದಾರೆ.

Comments are closed.