ಕರಾವಳಿ

ಜೈಲಿನಲ್ಲಿ ಹತ್ಯೆ : ಮಾಡುರು ಇಸುಬು ಕೊಲೆ ಆರೋಪಿಗಳಲ್ಲಿ ಇಬ್ಬರಿಗೆ ಜಾಮೀನು ಮಂಜೂರು

Pinterest LinkedIn Tumblr

ಮಂಗಳೂರು : ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಂದಲೇ ಹತ್ಯೆಗೀಡಾದ ಕೈದಿ ಮಾಡೂರು ಇಸುಬು ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಮಾಡೂರು ಇಸುಬು ಕೊಲೆ ಪ್ರಕರಣದಲ್ಲಿ ಮಾರಕಾಸ್ತ್ರ ನೀಡಿ ಕೊಲೆಗೆ ಸಹಕಾರ ನೀಡಿದ್ದಾರೆಂಬ ಆರೋಪದಲ್ಲಿ ಮತ್ತೆ ಜೈಲು ಸೇರಿದ್ದ ಕಮಲಾಕ್ಷ ಪೂಜಾರಿ ಮತ್ತು ಸತೀಶ್ ಪೂಜಾರಿ ಎಂಬಿಬ್ಬರಿಗೆ ರಾಜ್ಯ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ತೀರ್ಪು ನೀಡಿದೆ.

ಕಳೆದ 2015ರ ಜೂನ್ 2ರಂದು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಕೈದಿಯಾಗಿ ಜೈಲಿನಲ್ಲಿದ್ದ ಮಾಡೂರು ಇಸುಬುನನ್ನು ಸಹಕೈದಿಗಳು ಹತ್ಯೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಕೈದಿ ಮಾಡುರೂ ಇಸುಬು ಸ್ನಾನಕ್ಕೆ ಹೋಗುವ ಸಂದರ್ಭದಲ್ಲಿ ಶೋಭರಾಜ್, ಪ್ರದೀಪ್, ಉಮೇಶ್ ಕುಂಬಾರ, ಲತೀಶ್, ಯುವರಾಜ್ ಇವರು ಮಾರಕಾಸ್ತ್ರಗಳಿಂದ ಇಸುಬು ಮೇಲೆ ಹಲ್ಲೆ ಎರಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 11 ಮಂದಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

ಈ ಪೈಕಿ ಆರೋಪಿ 8 ಕಮಲಾಕ್ಷ ಹಾಗೂ ಆರೋಪಿ 9 ಸತೀಶ್ ಆಚಾರಿ ಇತರ ಆರೋಪಿಗಳಿಗೆ ಮಾರಕಾಸ್ತ್ರ ನೀಡಿ ಕೊಲೆಗೆ ಸಹಕಾರ ನೀಡಿದ್ದಾರೆಂಬ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ಇಬ್ಬರು ಆರೋಪಿಗಳಾದ ಕಮಲಾಕ್ಷ ಪೂಜಾರಿ ಮತ್ತು ಸತೀಶ್ ಪೂಜಾರಿ ಎಂಬವರಿಗೆ ಹೈಕೋರ್ಟ್ ಜಾಮೀನು ನೀಡಿ ಆದೇಶಿಸಿದೆ.

Comments are closed.