ಕರಾವಳಿ

ಮರಳುಗಾರಿಕೆ ನಿಷೇಧಿತ ಅವಧಿಯಲ್ಲಿ ಹೊರ ಜಿಲ್ಲೆಗೆ ಮರಳು ಸಾಗಾಟ ಸಂಪೂರ್ಣ ನಿಷೇಧ : ಜಿಲ್ಲಾಧಿಕಾರಿ ಸ್ಪಷ್ಠನೆ

Pinterest LinkedIn Tumblr

Dc_meet_photo_1

ಮಂಗಳೂರು, ಜೂ.9: ಜೂನ್ 16ರಿಂದ ಆಗಸ್ಟ್ 15ರವರೆಗೆ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ ಜಿಲ್ಲೆಯ ಸ್ಥಳೀಯ ಕಾಮಗಾರಿಗಳಿಗೆ ತೊಂದರೆಯಾಗ ಬಾರದು ಎಂಬ ದೃಷ್ಠಿಯಿಂದ ಮರಳು ದಕ್ಕೆಗಳಲ್ಲಿ ಮರಳು ಸಂಗ್ರಹಿಸಿ ಸ್ಥಳೀಯವಾಗಿ ಸಾಗಾಟ ಮಾಡಲು ಸಂಪೂರ್ಣ ಅವಕಾಶನೀಡಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರು ಗುರುವಾರ  ಜಿಲ್ಲಾಧಿಕಾರಿ ಕಚೇರಿಯಲ್ಲಿ  ಈ ಬಗ್ಗೆ ಮಾಹಿತಿ ನೀಡಿದರು.

ಅವರು ಜೂನ್ 16ರಿಂದ 21ರವರಗೆ ಸಂಗ್ರಹಿಸಲಾದ ಮರಳನ್ನು ಸ್ಥಳೀಯವಾಗಿ ಸಾಗಾಟ ಮಾಡಬಹುದು. ಆದರೆ, ನಿಷೇಧಿತ ಅವಧಿಯಲ್ಲಿ ಹೊರ ಜಿಲ್ಲೆಗೆ ಮರಳು ಸಾಗಾಟ ಸಂಪೂರ್ಣ ನಿಷೇಧವಾಗಿರುತ್ತದೆ ಎಂದು ಅವರು ಹೇಳಿದರು.

ಮರಳು ಸಾಗಾಟ ವಾಹನಗಳಿಗೆ ಜಿಪಿಎಸ್ ಕಡ್ಡಾಯ
ಸಿಆರ್ಝೆಡ್ ಪ್ರದೇಶದಲ್ಲಿನ ಎಲ್ಲಾ ಪರವಾನಿಗೆದಾರರು ಮತ್ತೆ ಮರಳುಗಾರಿಕೆ ಆರಂಭಿಸುವ ವೇಳೆಯೊಳಗೆ ಎಲ್ಲಾ ಮರಳು ಸಾಗಾಣಿಕಾ ವಾಹನಗಳಿಗೆ ಜಿಪಿಎಸ್ ಸಾಧನವನ್ನು ಅಳವಡಿಸಿ ಮರಳು ಸಾಗಾಟ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು.

ಸಿಆರ್ಝೆಡೇರ ಪ್ರದೇಶದಲ್ಲಿ 38 ಮರಳು ಬ್ಲಾಕ್ಗಳನ್ನು ಗುರುತಿಸಿ, ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರದಿಂದ ಪರಿಸರ ವಿಮೋಚನಾ ಪತ್ರ ಪಡೆದು ಮರಳು ಗಣಿಗಾರಿಕೆಗೆ ನಡೆಸಲು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಅದರಂತೆ ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ನಡೆಸಿ 13 ಮರಳು ಬ್ಲಾಕ್ಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಕಾರ್ಯಾದೇಶ ನೀಡಲಾಗಿದೆ. ಅಲ್ಲಿ ಮರಳು ಗಣಿಗಾರಿಕೆ ನಡೆಸಿ ಗುರುತಿಸಿರುವ ಸ್ಟಾಕ್ಯಾರ್ಡ್ಗಳಲ್ಲಿ ಮರಳನ್ನು ಸಂಗ್ರಹಿಸಲಾಗಿರುತ್ತದೆ ಎಂದು ಅವರು ಹೇಳಿದರು.

Dc_meet_photo_2 Dc_meet_photo_3

ಸಿಸಿ ಕ್ಯಾಮರಾ ಅಳವಡಿಕೆ
ಅನಧಿಕೃತ ಮರಳು ಸಾಗಾಟವನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಮರಳು ಸಾಗಾಟವಾಗುವ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಪತ್ತೆ ಹಚ್ಚಿದ 77 ವಾಹನಗಳಿಗೆ ತಾತ್ಕಾಲಿಕವಾಗಿ ಪರವಾನಿಗೆ ರದ್ದುಪಡಿಸುವ ಸಂಬಂಧ ಪ್ರಾದೇಶಿಕ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ಅದರಂತೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ತಾತ್ಕಾಲಿಕವಾಗಿ ಪರವಾನಿಗೆ ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಕ್ರಮ ಮರಳುಗಾರಿಕೆ: 2 ತಿಂಗಳಲ್ಲಿ 22 ಪ್ರಕರಣ ಪತ್ತೆ
ದ.ಕ. ಜಿಲ್ಲೆಯಲ್ಲಿ ಅನಧಿಕೃತ ಮರಳುಗಾರಿಕೆಗೆ ಸಂಬಂಧಿಸಿ 2016-17ನೆ ಸಾಲಿನ ಎರಡು ತಿಂಗಳಲ್ಲಿ 22 ಪ್ರಕರಣಗಳನ್ನು ಪತ್ತೆ ಹಚ್ಚಿ 4.180 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಇದೇ ಅವಧಿಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿ 149 ಪ್ರಕರಣಗಳಲ್ಲಿ 21.920 ಲಕ್ಷ ರೂ. ದಂಡ ವಸೂಲು ಮಾಡಿ, 7 ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.

2015-16ನೆ ಸಾಲಿನಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ 309 ಪ್ರಕರಣಗಳಲ್ಲಿ 47.742 ಲಕ್ಷ ರೂ. ದಂಡ ಹಾಗೂ ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿ 1,134 ಪ್ರಕರಣಗಳಲ್ಲಿ 145.470 ಲಕ್ಷ ರೂ. ದಂಡ ಸಂಗ್ರಹಿಸಿ 40 ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಸಹಾಯಕ ಆಯುಕ್ತ ಡಾ. ಅಶೋಕ್ ಕುಮಾರ್ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Comments are closed.