ಕರಾವಳಿ

ರಸ್ತೆ ಅಗಲೀಕರಣಕ್ಕೆ ಪುರಸಭೆಗೆ ಜಾಗ ದಾನ ನೀಡಿದ ಕುಂದಾಪುರ ಹೋಲಿ ರೋಜರಿ ಚರ್ಚ್

Pinterest LinkedIn Tumblr

ಕುಂದಾಪುರ: ಕುಂದಾಪುರ ನಗರದಲ್ಲಿ ಇವತ್ತು ಭೂಮಿಯ ಬೆಲೆಗಗನಕ್ಕೆರಿದ ಈ ಸಮಯದಲ್ಲಿ ಕುಂದಾಪುರದ ಅಭಿವ್ರದ್ದಿ, ರಸ್ತೆ ಅಗಲೀಕರಣಾಕ್ಕೆ ಹಾಗೂ ಒಳಚರಂಡಿಯ ವ್ಯವಸ್ಥೆಗಾಗಿ ಕುಂದಾಪುರದ ಹೋಲಿ ರೋಜರಿ ಚರ್ಚ್, ಸಮಾಜ ಕಲ್ಯಾಣದ ಚಿಂತನೆಯೊಂದಿಗೆ, ಇತರರಿಗೆ ಅನುಕರಣಿಯವಾಗುವಂತೆ ಹೆಜ್ಜೆ ಇಟ್ಟು, ತಮ್ಮ ಸ್ವಾಧಿನದ ಭೂಮಿಯನ್ನು ಉಚಿತವಾಗಿ ಕುಂದಾಪುರದ ಪುರಸಭೆಗೆ ಬಿಟ್ಟುಕೊಡುವ ಮೂಲಕ ಔದಾರ್ಯ ಮೆರೆದಿದೆ. ಈಗಾಗಲೇ ಪುರಸಭೆ ಭೂಮಿಯನ್ನು ಸ್ವಾಧಿನ ಪಡಿಸಿಕೊಂಡು ರಸ್ತೆ ಅಗಲೀಕರಣ ಮಾಡುವ ಕೆಲಸವನ್ನು ಆರಂಭಿಸಿದೆ.

¼

¼

¼

¼

Kuandapura_Church_Land Donation (4)

ಕುಂದಾಪುರ ಹೋಲಿ ರೋಜರಿ ಚರ್ಚಿನ ಬಲಕ್ಕೆ ಮದ್ದುಗುಡ್ಡೆ ಸಂಪರ್ಕ ರಸ್ತೆ ತೀರ ಇಕ್ಕಟ್ಟಿನಿಂದ ಕೂಡಿದ್ದು ರಸ್ತೆಯ ಅಗಲೀಕರಣದ ಚಿಂತನೆಯೊಂದಿಗೆ ಪುರಸಭೆ ಕೆಲವು ತಿಂಗಳ ಹಿಂದೆ ರಸ್ತೆಗಾಗಿ ಸ್ಥಳ ನೀಡುವಂತೆ ಚರ್ಚಿಗೆ ಮನವಿ ಸಲ್ಲಿಸಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ನಗರದ ಅಭಿವ್ರದ್ದಿ ವಿಚಾರದಲ್ಲಿ ನಿಜಕ್ಕೂ ಸಕರಾತ್ಮಕ ಸ್ಪಂದಿಸಿ ಹೋಲಿ ರೋಜರಿ ಚರ್ಚಿನ ಆಡಳಿತ ಮಂಡಳಿ ಹಾಗೂ ಕ್ರೈಸ್ತ ಭಾಂದವರು ಸುಮಾರು 200 ಅಡಿ ಉದ್ದ, 3.3 ಅಡಿ ಅಗಲದ ಸ್ಥಳವನ್ನು ಧರ್ಮಾರ್ಥವಾಗಿ ಪುರಸಭೆಗೆ ಹಸ್ತಾಂತರಿಸಿದ್ದಾರೆ.

ಚರ್ಚ್ ಬೆಳೆದು ಬಂದ ಹಾದಿ……
ಹೋಲಿ ರೋಜರಿ ಚರ್ಚ್‌ಗೆ ಸುಮಾರು 450 ವರ್ಷಗಳ ಇತಿಹಾಸವಿದೆ. 1570 ರಲ್ಲಿ ಕುಂದಾಪುರದ ಕೋಟೆ ಬಾಗಿಲು ಎಂಬಲ್ಲಿ ಸ್ಥಾಪನೆಗೊಂಡಿತ್ತು. ಕುಂದಾಪುರ ಹೋಲಿ ರೋಜರಿ ಚರ್ಚ್ ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಅತ್ಯಂತ ಪ್ರಾಚೀನ ಇಗರ್ಜಿಯಾಗಿದ ಹೆಗ್ಗಳಿಕೆ ಕುಂದಾಪುರಕ್ಕೆ ಇದೆ. ಕುಂದಾಪುರದ ಕೈಸ್ತ ಸಭೆಯಲ್ಲಿ, ಭಾರತದ ಕೆಲವೇ ಕೆಲವು ಕ್ರೈಸ್ತ ಸಂತ ಪದವಿಗೇರಿದವರಲ್ಲಿ, ಮಹಾನ್ ಪವಾಡ ಪುರುಷರಾದಂತಹ ಸಂತ ಜೊಸೇಫ್ ವಾಜ್ ಇದೇ ಕುಂದಾಪುರದ ಕೈಸ್ತ ಸಭೆಯಲ್ಲಿ ಸೇವೆ ಸಲ್ಲಿಸಿದ್ದು ಮಹತ್ವದ ವಿಚಾರಾವಾಗಿದೆ. ಅಂದು ಕುಂದಾಪುರದಿಂದ ಬಹೂ ದೂರದ ಪ್ರದೇಶದ ವರೆಗೂ ಅವರ ವ್ಯಾಪ್ತಿ ಹರಡಿಕೊಂಡಿತ್ತು.

ಬಹಳ ಹಿಂದಿನಿಂದಲೂ ಕ್ರೈಸ್ತ ಧರ್ಮಗುರುಗಳು, ಧರ್ಮ ಭಗಿನಿಯರು ಸಮಾಜ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಕುಂದಾಪುರದಲ್ಲಿ ಕ್ರೈಸ್ತ ದರ್ಮಗುರುಗಳು ಶಿಕ್ಷಣದಲ್ಲಿ ಹಾತೊರೆದು, ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಶ್ರಮಿಸಿ ಹೆಸರು ಗಳಿಸಿದ್ದಾರೆ. ಈಗ ಚರ್ಚಿನ ಅಧಿನದಲ್ಲಿ ಬಹಳಸ್ಟು ಶಿಕ್ಷಣ ಸಂಸ್ಥೆಗಳಿವೆ, ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ, ಸಂತ ಮೇರಿಸ್ ಹೈಸ್ಕೂಲು, ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆ, ಸಂತ ಮೇರಿಸ್ ಪಿ.ಯು.ಕಾಲೇಜ್, ಹೋಲಿ ರೋಜರಿ ಕಿಂಡರ್ ಗಾರ್ಟ್‌ನ್ ಶಾಲೆ ಹೀಗೆ ಸಂಸ್ಥೆಗಳು ಬೆಳೆದು ಇಂದು ಸಂತ ಮೇರಿಸ್ ಸಮೂಹ ಸಂಸ್ಥೆಯಾಗಿ ಬೆಳೆದು ಖ್ಯಾತಿ ಗಳಿಸುವುದರ ಜೊತೆ ಕುಂದಾಪುರಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಮ್ಹತ್ವದ ಕೊಡುಗೆಯನ್ನು ನೀಡಿದೆ. ಇದು ಮಾತ್ರವಲ್ಲದೆ ಬಹಳ ಹಿಂದೆಯೆ, ಕುಂದಾಪುರ ಹೋಲಿ ರೋಜರಿ ಧರ್ಮ ಕೇಂದ್ರ ಬಡ ಹೆಣ್ಣು ಮಕ್ಕಳ ವಿಷಯದಲ್ಲಿ ಬಹಳ ಆಸಕ್ತಿ ತಳೆದು, ಇಲ್ಲಿನ ಧರ್ಮಗುರುಗಳ ಯೋಜನೆಯಂತೆ, ಮಂಗಳೂರು ಧರ್ಮ ಪ್ರಾಂತ್ಯದ ಆಗಿನ ಬಿಶಪರ ಅನುಮತಿಯೊಂದಿಗೆ, ಶಾಲೆಯನ್ನು ಕಾರ್ಮೆಲ್ ಭಗಿನಿಯರಿಗೆ ನೆಡೆಸುವಂತೆ ಕೋರಿಕೆ ಸಲ್ಲಿಸಿದಂತೆ ಕುಂದಾಪುರದಲ್ಲಿ ಕಾರ್ಮೆಲ್ ಸಂಸ್ಥೆಯ ಭಗಿನಿಯರು ಶಾಲೆಯನ್ನು ಚರ್ಚನ ಜಾಗದಲ್ಲಿ ಆರಂಭಿಸಿದರು.

Kuandapura_Church_Land Donation (8)

ಸಾಧನೆಯ ಇನ್ನೊಂದು ಮೆಟ್ಟಿಲು…..
ಈಗ ಇದೇ ಸಂಸ್ಥೆಯ, ಚರ್ಚ್ ಸ್ವಾಧಿನದ ಜಾಗವನ್ನು ಲಕ್ಷಾಂತರ ಬೆಲೆ ಬಾಳುವ ಜಾಗವನ್ನು ಕುಂದಾಪುರ ಅಭಿವ್ರದ್ದಿಗಾಗಿ ಉದಾರವಾಗಿ ನಿಡಿದ್ದು. ಕುಂದಾಪುರ ಅಭಿವ್ರದ್ದಿಯ ಪಥದಲ್ಲಿ ಸಾಗುವಾಗ ಪ್ರಜ್ನಾವಂತ ನಾಗರಿಕರಲ್ಲಿ ಇಂತಹ ಚಿಂತನೆಗಳ ಸಹಕಾರ ಮನೋಭಾವ ಬೆಳೆದು ತಮ್ಮ ನಾಡು ಅಭಿವ್ರದ್ದಿಶೀಲ ನಾಡಾಗಿ ಮಾರ್ಪಡಿಸಲು ಸಾಧ್ಯವಾಗುತ್ತದೆ. ಈ ಮೊದಲು ಕೂಡ, ಚರ್ಚ್ ರಸ್ತೆ ಹಾದು ಹೋಗಲು, ಮದ್ದುಗುಡ್ಡೆಗೆ ಸಾಗಲು ಕಾನ್ವೆಂಟ್ ರಸ್ತೆಯಾಗಲೂ, ರೋಜರಿ ಚರ್ಚ್ ತಮಗೆ ಸಂಬಧ್ದ ಪಟ್ಟ ಜಾಗದಲ್ಲಿ ಉದಾರತ್ವ ತೊರಿದೆ.

Kuandapura_Church_Land Donation (3)

ಶೈಕ್ಷಣಿಕವಾಗಿ, ಸಮಾಜದ ಕ್ರೈಸ್ತ ಸಮಾಜವು ಕುಂದಾಪುರ ಪರಿಸರಕ್ಕೆ ಉದಾರವಾದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು. ಕುಂದಾಪುರದ ಬೆಳವಣಿಗೆಯ ದ್ರಷ್ಟಿಯಿಂದ ನಾವು ಯಾವುದೇ ಫಲಾಪೇಕ್ಷೆಯಿಲ್ಲದೆ ರಸ್ತೆ ಅಗಲೀಕರಣಾಕ್ಕಾಗಿ ಬಿಟ್ಟು ಕೊಡುತಿದ್ದೇವೆ. ಇದು ಏಸುವಿನ ಪ್ರೇರಣೆಯಾಗಿದ್ದು, ಈ ವರ್ಷ ಪೋಪ್ ಸ್ವಾಮಿಗಳ ಆಶಯದ ’ದಯಾಮಯಿ’ ವರ್ಷವಾಗಿ ಆಚರಣೆಗಾಗುತ್ತಿರುವ ಸಂದರ್ಭದಲ್ಲಿ ಅಭಿವ್ರದ್ದಿಗಾಗಿ ಈ ಕೊಡುಗೆ ನೀಡುತಿದ್ದೆವೆ’ ಎಂದು ಹೋಲಿ ರೋಜರಿ ಚರ್ಚ್ ಪ್ರಧಾನ ಧರ್ಮಗುರುಗಳಾಗಿರುವ ಫಾ. ಅನಿಲ್ ಡಿಸೋಜ ಹೇಳಿದ್ದಾರೆ.

Kuandapura_Church_Land Donation (1)

ಊರು ಅಭಿವ್ರದ್ದಿಯಾಗುತ್ತಿರುವಾಗ ಸಕಾರತ್ಮವಾಗಿ ಸ್ಪಂದಿಸುವುದು ನಮ್ಮ ಧರ್ಮ, ಆ ದಿಶೆಯಲ್ಲಿ ಸಮಸ್ತ ಕ್ರೈಸ್ತ ಭಾಂದವರ ತಿರ್ಮಾನದಂತೆ ಚರ್ಚ್‌ಗೆ ಸಂಬಧ್ದ ಪಟ್ಟ ಸ್ಥಳವನ್ನು ಉಚಿತವಾಗಿ ಬಿಟ್ಟು ಕೊಡುತಿದ್ದೇವೆ. ಅಭಿವ್ರದ್ದಿ ಒತ್ತು ನೀಡುವುದು ನಮ್ಮ ಆಶಯ ಎನ್ನುತ್ತಾರೆ ಜಾನ್ಸನ್ ಡಿ’ಆಲ್ಮೇಡಾ.

ಇಂದು ಅತೀ ತಿವ್ರತೆಯಲ್ಲಿ ಬೆಳೆಯುತ್ತಿರುವ ನಗರ ಕುಂದಾಪುರವಾಗಿದೆ, ಆದರೇ ಜನಕ್ಕೆ ನಗರಕ್ಕಾಗಿ, ಸಾರ್ವಜನಿಕ ಉಪಯೋಗಕ್ಕಾಗಿ ಯಾರೂ ಕೂಡ ತಮ್ಮ ಜಾಗದಲ್ಲಿ ಎರಡಡಿ ಜಾಗ ಬಿಟ್ಟು ಕೊಡೊಲ್ಲ..ಇಂತವರಿಗೆ ಹೋಲಿ ರೋಜರಿ ಚರ್ಚ್‌ನ ನಿರ್ಧಾರ ಅನುಕರಣಿಯವಾಗಲಿ, ಉದಾರ ಮನಸ್ಸಿನಿಂದ ರಸ್ತೆ ಬದಿಯಲ್ಲಿರುವರು ಸ್ವಲ್ಪ ಜಾಗವನ್ನು ಬಿಟ್ಟು ಕೊಟ್ಟರೆ, ನಗರ ಅಭಿವ್ರದ್ದಿಯಾಗುವುದರಲ್ಲಿ ಅನುಮಾನವಿಲ್ಲ.

ಬೆಳೆಯುತ್ತಿರುವ ಕುಂದಾಪುರದ ನಗರದ ಅಭಿವ್ರದ್ಧಿಗಾಗಿ ಹಾಗೂ ಸಾರ್ವಜನಿಕ ಉಪಯೋಗದ ದಿಶೆಯಲ್ಲಿ, ಈ ನಿರ್ಧಾರ ಬೇರೆಯವರಿಗೂ ಆದರ್ಶಪ್ರಾಯವಾಗಿದ್ದು ಸರ್ವತ್ರವಾಗಿ ಇದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

Comments are closed.