*ಯೋಗೀಶ್ ಕುಂಭಾಸಿ
ಕುಂದಾಪುರ: ಮನೆಯಲ್ಲಿನ ಕೋಣೆಯಲ್ಲಿ ಬೆಂಕಿ ಹಚ್ಚಿಕೊಂಡು ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರದ ಕಂಡ್ಲೂರು ಕನ್ನಿಕಾ ಪರಮೇಶ್ವರೀ ದೇವಸ್ಥಾನದ ಸಮೀಪದ ಮನೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಇಲ್ಲಿನ ನಿವಾಸಿ ಶ್ರೀನಿವಾಸ ಮೊಗವೀರ(58) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಘಟನೆ ವಿವರ: ಕಂಡ್ಲೂರಿನ ಕನ್ನಿಕಾ ಪರಮೇಶ್ವರೀ ದೇವಸ್ಥಾನದ ಸಮೀಪದಲ್ಲಿನ ದಿವಂಗತ ಮುತ್ತು ಹಾಗೂ ಗಣಪ ದಂಪತಿಗಳ ಪುತ್ರ ಶ್ರೀನಿವಾಸ ಮೊಗವೀರ ಅವರು ಚಿಕ್ಕಂದಿನಿಂದಲೇ ಕೆಲಸ ಅರಸಿ ಬೆಂಗಳೂರಿಗೆ ತೆರಳಿದ್ದವರು. ಅಲ್ಲಿಯೇ ಹೋಟೇಲೊಂದರಲ್ಲಿ ಕೆಲಸಕ್ಕೆ ಸೇರಿ ಮದುವೆಯಾಗಿ ಜೀವನ ಸಾಗಿಸುತ್ತಿದ್ದ ಅವರು ಅಷ್ಟಾಗಿ ಕಂಡ್ಲೂರಿನ ಸಂಪರ್ಕದಲ್ಲಿಲ್ಲವಾದರೂ ಕೂಡ ಆಗ್ಗಾಗೆ ಊರಿಗೆ ಬಂದುಹೋಗುತ್ತಿದ್ದರೆನ್ನಲಾಗಿದೆ. ಆದರೇ ಬಹುಸಮಯಗಳ ಬಳಿಕ ಇತ್ತೀಚೆಗೆ ಆರು ತಿಂಗಳ ಹಿಂದೆ ಊರಿಗೆ ಬಮ್ದ ಅವರು ತನ್ನ ಸಹೋದರಿ ಪದ್ದು ನಿವಾಸದಲ್ಲಿ ತಂಗಿದ್ದರು. ಪದ್ದು ಒಬ್ಬರೇ ಇದ್ದ ಕಾರಣ ಸಹೋದರ ಮನೆಯಲ್ಲಿರುವುದಕ್ಕೇ ಅವರೇನು ಆಕ್ಷೇಪಿಸಿರಲಿಲ್ಲ. ಆರು ತಿಂಗಳಿನಿಂದಲೂ ಮನೆಯಲ್ಲಿಯೇ ಇದ್ದ ಅವರು ಸಹೋದರಿ ಬಳಿ ಯವುದೇ ಸಮಸ್ಯೆಯ ಬಗ್ಗೆ ಮಾತನಾಡಿರಲಿಲ್ಲ ಎನ್ನಲಾಗಿದೆ. ಸೋಮವಾರ ಪದ್ದು ಅವರು ಕುಂದಾಪುರಕ್ಕೆ ಯಾವುದೇ ಕೆಲಸದ ನಿಮಿತ್ತ ತೆರಳಿ ವಾಪಾಸ್ಸು ಬರುವಷ್ಟರಲ್ಲಿ ಈ ಘಟನೆ ನಡೆದುಹೋಗಿದೆ.
ಮಧ್ಯಾಹ್ನ ಊಟವಾದ ಬಳಿಕ ಪದ್ದು ಅವರು ಮನೆ ಬಿಟ್ಟಿದ್ದು ಆ ಸಂದರ್ಭ ಶ್ರೀನಿವಾಸ ಅವರು ಹೊರಗಡೆ ಕುಳಿತಿದ್ದರು ಎನ್ನಲಾಗಿದೆ. ಸಂಜೆ ವೇಳೆ ಪದ್ದು ಮನೆಗೆ ಬಂದಾಗ ಶ್ರೀನಿವಾಸ ಎಲ್ಲಿಯೂ ಕಾಣಿಸಿರಲಿಲ್ಲ. ಆಚೀಚೆ ಹುಡುಕಾಡಿದ ಬಳಿಕ ಒಳಗೆ ತೆರಳಿ ಕೋಣೆ ನೋಡಿದಾಗ ಸುಟ್ಟ ಸ್ಥಿತಿಯಲ್ಲಿ ಶ್ರೀನಿವಾಸ ಅವರ ಶವ ಸಿಕ್ಕಿದೆ. ಯಾವುದೋ ಕಾರಣಕ್ಕೆ ಮಾನಸಿಕವಾಗಿ ನೊಂದ ಶ್ರೀನಿವಾಸ ಈ ರೀತಿಯಾಗಿ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಅನುಮಾನಿಸಲಾಗಿದೆ.
ಶ್ರೀನಿವಾಸ್ ಅವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆನ್ನಲಾಗಿದೆ.
ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
Comments are closed.