ಕರಾವಳಿ

ರೆಡ್ ಎಫ್ ಎಂ ನ ತಂಬಾಕು ವಿರೋಧಿ ಅಭಿಯಾನ ಸಂಪನ್ನ :ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ

Pinterest LinkedIn Tumblr

Red_Fm_TobecoEnd_1

ಮಂಗಳೂರು : ತಂಬಾಕಿನ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ತಂಬಾಕು ಮುಕ್ತ ಸಮಾಜದ ಕನಸಿನೊಂದಿಗೆ ಕರ್ನಾಟಕ ಬ್ಯಾಂಕ್, ಯುನಿಟಿ ಹಾಸ್ಪಿಟಲ್ , ತ್ರಿಭುವನ್ ಮೋಟಾರ್ಸ್ ಸಹಯೋಗದಲ್ಲಿ ಮಂಗಳೂರಿನ ಜನಪ್ರಿಯ ರೇಡಿಯೋ ಸ್ಟೇಶನ್ ರೆಡ್ ಎಫ್ ಎಂ 4 ನೆ ಬಾರಿಗೆ ಹಮ್ಮಿಕೊಂಡಿರುವ ತಂಬಾಕು ವಿರೋದಿ ಅಭಿಯಾನ ಸ್ಟಾಪ್ ಇಟ್ ಇಟ್ಸ್ ಟೈಮ್ ಸೀಸನ್ -4, ಇದರ ಸಮಾರೋಪ ಸಮಾರಂಭ ಮಂಗಳೂರಿನ ಕೊಟ್ಟಾರದಲ್ಲಿರುವ ತ್ರಿಭುವನ್ ಮೋಟರ್ಸ್ ನಲ್ಲಿ ನಡೆಯಿತು,

ಈ ಸಂದರ್ಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರು ಮಾತನಾಡಿ, ತಂಬಾಕು ಮುಕ್ತ ಸಮಾಜದ ನಿರ್ಮಾಣಕ್ಕೆ ಸರ್ವರೂ ಸಹಕರಿಸಬೇಕು. ಯುವ ಜನತೆ ತಂಬಾಕಿನ ಬಳಕೆಯನ್ನು ಬಿಟ್ಟು ಆರೋಗ್ಯ ಪೂರ್ಣ ಬದುಕನ್ನು ನಡೆಸಲು ಮುಂದಾಗಬೇಕು. Eಸಿಗರೇಟ್ ಸೇವನಂತೆಯ ದುಶ್ಚಟಗಳಿಂದ ವ್ಯಸನಿಗಳು ಮಾರಕ ರೋಗಗಳಿಗೆ ತುತ್ತಾಗುತ್ತಿರುವುದರಿಂದ ಸದ್ಯದಲ್ಲೇ ಸರ್ಕಾರ ರಾಜ್ಯದಲ್ಲಿ Eಸಿಗರೇಟ್ ನಿಶೇಧಿಸುವ ಬಗ್ಗೆ ಚಿಂತನೆ ಮಾಡುತ್ತಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಬಗ್ಗೆ ಶ್ಲಾಘನೆಗೈದ ಸಚಿವರು ರೆಡ್ ಎಫ್ ಎಂ ನಡೆಸುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

Red_Fm_TobecoEnd_2 Red_Fm_TobecoEnd_3 Red_Fm_TobecoEnd_4 Red_Fm_TobecoEnd_5 Red_Fm_TobecoEnd_6 Red_Fm_TobecoEnd_7 Red_Fm_TobecoEnd_8 Red_Fm_TobecoEnd_10 Red_Fm_TobecoEnd_11 Red_Fm_TobecoEnd_12 Red_Fm_TobecoEnd_13

ಖ್ಯಾತ ಚಿತ್ರ ನಟ ಅರ್ಜುನ್ ಕಾಪಿಕಾಡ್, ತ್ರಿಭುವನ್ ಮೋಟರ್‍ಸ್ ನ ಆಡಳಿತಾ ನಿರ್ದೇಶಕ ಮಿಥುನ್ ಚೌಟ ಅತಿಥಿಗಳಾಗಿದ್ದರು. ರೆಡ್ ಎಫ್ ಎಂ ನ ಸ್ಟೇಶನ್ ಮುಖ್ಯಸ್ಥ ಶೋಭಿತ್ ಶೆಟ್ಟಿ, ಸೀನಿಯರ್ ಪ್ರೊಡ್ಯುಸರ್ ಯಶರಾಜ್, ಆರ್.ಜೆ.ಗಳಾದ ನಯನ, ಅನುರಾಗ್, ಅನುಶ ಹಾಗೂ ಮಾರ್ಕೆಟಿಂಗ್ ವಿಭಾಗದ ಪ್ರಮುಖಾರದ ಶ್ರೀನಿಧಿ, ಅಜಿತ್, ಹೆಚ್ ಆರ್ ಮ್ಯಾನೇಜರ್ ಶಿವಪ್ರಸಾದ್ ಮತ್ತು ಟೆಕ್ನಿಕಲ್ ವಿಭಾಗದ ಶ್ರೀಬಾಶ್, ರಾಜೇಶ್, ದೀಪಕ್, ಪ್ರಕಾಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .ಆರ್.ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

ತಂಬಾಕಿನ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವನ್ನು ಮೂಡಿಸಿ, ತಂಬಾಕು ಮುಕ್ತ ಸಮಾಜದ ಕನಸಿನೊಂದಿಗೆ ಸುಂದರ ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ರೆಡ್ ಎಫ್ ಎಂ 93.5 ಸಂಸ್ಥೆಯು 4 ನೆ ಬಾರಿಗೆ ಹಮ್ಮಿಕೊಂಡಿರುವ ಈ “ತಂಬಾಕು ವಿರೋಧಿ ಅಭಿಯಾನ”ಕ್ಕೆ ಮಂಗಳೂರಿನ ವಿ 4 ನ್ಯೂಸ್ ಹಾಗೂ ದುಬೈಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಸಿದ್ಧ ಅಂತಾರ್ಜಾಲ ತಾಣ ಕನ್ನಡಿಗ ವರ್ಲ್ಡ್ ಡಾಟ್ ಕಾಮ್ ( kannadigaworld.com) ಮಾಧ್ಯಮ ಪ್ರಯೋಜಕರಾಗಿ ಸಹಕರಿಸಿದರು.

Comments are closed.