ಕರಾವಳಿ

ಜೂ.15 ರಿಂದ ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧ

Pinterest LinkedIn Tumblr

DC_Meet_Sand

ಮ೦ಗಳೂರು, ಜೂ.6 : ಜೂ.15 ರಿಂದ ಮುಂದಿನ 45 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆಯನ್ನು ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಅದೇಶ ಹೊರಡಿಸಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಗಾರು ಮಳೆ ಕುರಿತು ಪೂರ್ವ ಸಿದ್ಧತೆಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮರಳುಗಾರಿಕೆ ನಿಷೇಧ ಹಿನ್ನೆಲೆಯಲ್ಲಿ ಅಗತ್ಯವಿರುವ ಮರಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಲೇಡಿಗೋಷನ್ ಕಟ್ಟಡ ಕಾಮಗಾರಿಗೆ ತೊಂದರೆಯಾಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಸಿ.ಆರ್.ಝಡ್ ಪ್ರದೇಶದಲ್ಲಿ ಜೂನ್ 15ರಿಂದ ಮರಳುಗಾರಿಕೆ ಸ್ಥಗಿತ :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿ‌ಆರ್‌ಝಡ್ ಪ್ರದೇಶದಲ್ಲಿ 19 ಮರಳು ಬಾರ್‍ಸ್‌ಗಳನ್ನು ಗುರುತಿಸಿ ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರದಿಂದ ಏ.11ರಂದು ಪರಿಸರ ವಿಮೋಚನಾ ಪತ್ರವನ್ನು ಪಡೆದು ಮರಳುಗಾರಿಕೆ ಮತ್ತು ಸಾಗಾಣಿಕೆಗೆ ಅನುಮತಿ ನೀಡಲಾಗಿತ್ತು.

ಪರವಾನಿಗೆಯ ಷರತ್ತುಗಳಂತೆ ಜೂನ್ 15ರಿಂದ ಅಗಸ್ಟ್ 15ವರೆಗೆ ಮೀನುಗಳ ಸಂತಾನೋತ್ಪತ್ತಿ ಕಾಲವಾಗಿರುವುದರಿಂದ ಸದರಿ ಅವಧಿಯಲ್ಲಿ ಮರಳುಗಾರಿಕೆ ನಡೆಸುವುದನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ತವ್ಮ್ಮ ಅಗತ್ಯ ಸ್ಥಳೀಯ ಕಾಮಗಾರಿಗಳಿಗೆ ಜೂನ್ 15ರೊಳಗೆ ಮರಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.

ಡಿಸಿಪಿ ಶಾಂತರಾಜು ಅವರು ಮಾತನಾಡಿ, ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ ಜಿಲ್ಲೆಯಲ್ಲಿ 24 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ಒಂದು ತಿಂಗಳ ಅವಧಿಗೆ ಪರವಾನಿಗೆ ಅಮಾನತುಗೊಳಿಸಲು ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ. ಕೂಳೂರು ಸೇತುವೆಯಲ್ಲಿ ಇತ್ತೀಚೆಗೆ ಮಳೆ ಬಂದು ನೀರು ರಸ್ತೆಯ ಮೇಲೆ ಹರಿದು ತೀವ್ರ ತೊಂದರೆಯಾಗಿತ್ತು. ಒಳಚರಂಡಿ ಅವ್ಯವಸ್ಥೆ ಹಾಗೂ ಅಸರ್ಮಪಕ ನಿರ್ವಹಣೆಯೇ ಇದಕ್ಕೆ ಕಾರಣ ಎಂದು ಹೇಳಿದರು

ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರು ಮುಂಜಾಗೃತ ಕ್ರಮಗಳನ್ನು ವಹಿಸಿಕೊಳ್ಳಬೇಕು. ಯಾವುದೇ ರೀತಿ ಅನಾಹುತ, ಅಪಾಯಗಳನ್ನು ಎದುರಿಸಲು ಸಿದ್ಧರಾಗಬೇಕು. ಮೀನುಗಾರಿಕೆ ತೆರಳುವ ವೇಳೆಯಲ್ಲಿ ಎಲ್ಲಾ ರೀತಿಯ ಅಗತ್ಯ ವಸ್ತುಗಳು ಕೈಯಲ್ಲಿರಬೇಕು ಎಂದು ಕರಾವಳಿ ತಟ ರಕ್ಷಣಾ ಪಡೆಯ ಡಿಐಜಿ ಸುರೇಶ್ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಸಹಾಯಕ ಆಯುಕ್ತರಾದ ಡಾ.ಅಶೋಕ್, ರಾಜೇಂದ್ರ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಾರ್ವಜನಿಕ ಕಟ್ಟಡಗಳಲ್ಲಿ ರ್‍ಯಾಂಪ್ ಅಳವಡಿಸಿ : ಎ.ಬಿ ಇಬ್ರಾಹಿಂ

ಮ೦ಗಳೂರು, ಜೂ.6: ಅಂಗವಿಕಲರು ತಮ್ಮ ಕೆಲಸ ಕಾರ್ಯಗಳಿಗಾಗಿ ಸರಕಾರಿ, ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕುಗಳಿಗೆ ಭೇಟಿ ನೀಡುವುದು ಸಹಜ, ಆದರೆ ಬಹುತೇಕ ಕಛೇರಿಗಳು ಬ್ಯಾಂಕುಗಳಿಗೆ ಅಂಗವಿಕಲರು ಸರಾಗವಾಗಿ ಹೋಗಿ ತಮ್ಮ ಕೆಲಸಗಳನ್ನು ಪೂರೈಸಲು ಕಷ್ಟವಾಗುತ್ತಿದೆ. ಆದ್ದರಿಂದ ಎಲ್ಲಾ ಕಛೇರಿಗಳು ಅಂಗವಿಕಲ ಸ್ನೇಹಿ ವಾತವರನ ಅಂದರೆ ರ್‍ಯಾಂಪ್ ಅಳವಡಿಸುವುದು, ಲಿಫ್ಟ್‌ಗಳನ್ನು ಹೊಂದುವುದು ಇವೇ ಮೊದಲಾದ ಮೂಲಭೂತ ಸೌಲಭ್ಯಗಳನ್ನು ನ್ಯಾಷನಲ್ ಟ್ರಸ್ಟ್ ಆಕ್ಟ್ 1999 ರನ್ವಯ ಹೊಂದುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

ಅವರು ಇಂದು ತಮ್ಮ ಕಛೇರಿಯಲ್ಲಿ ನಡೆದ ನ್ಯಾಷನಲ್ ಟ್ರಸ್ಟ್ ಆಕ್ಟ್ 1999 ರ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಕಾಯ್ದೆಯಂತೆ ಯಾವುದೇ ಕಛೇರಿಗಳು ಅಂಗವಿಕಲರಿಗೆ ಸೂಕ್ತ ಸೌಲಭ್ಯ ಒದಗಿಸದಿದ್ದಲ್ಲಿ ಅಂತಹ ಕಛೇರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಎಲ್ಲಾ ಕಚೇರಿಗಳು ತಮ್ಮ ಆವರಣದಲ್ಲಿ ವಿಕಲಚೇತನ ಸ್ನೇಹಿ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ರಾಜೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಸುಂದರ ಪೂಜಾರಿ, ಮುಂತಾದವರು ಭಾಗವಹಿಸಿದ್ದರು.

Comments are closed.