ಕರಾವಳಿ

ಉಡುಪಿಯಲ್ಲಿ ಪೇಜಾವರ ಶ್ರೀಗಳಿಂದ ಸಾವಿರ ಗಿಡ ವಿತರಣೆ; ಇದು ವಿಶ್ವಪರಿಸರ ದಿನದ ವಿಶೇಷ

Pinterest LinkedIn Tumblr

ಉಡುಪಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪೇಜಾವರ ಮಠದೀಶರೂ, ಪರ್ಯಾಯ ಪೀಠಾಧಿಪತಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪರು ತಮ್ಮ ಲಕ್ಷ ವೃಕ್ಷ ಯೋಜನೆಯ ಅಂಗವಾಗಿ ಸಾವಿರಾರು ಗಿಡಗಳನ್ನು ವಿತರಿಸಿದರು.

Udupi_Pejavara Shri_Sasi Vitarane (3) Udupi_Pejavara Shri_Sasi Vitarane (6) Udupi_Pejavara Shri_Sasi Vitarane (7) Udupi_Pejavara Shri_Sasi Vitarane (8) Udupi_Pejavara Shri_Sasi Vitarane (5) Udupi_Pejavara Shri_Sasi Vitarane (4) Udupi_Pejavara Shri_Sasi Vitarane (1) Udupi_Pejavara Shri_Sasi Vitarane (9) Udupi_Pejavara Shri_Sasi Vitarane (10) Udupi_Pejavara Shri_Sasi Vitarane (2)

ಎರಡು ವರ್ಷಗಳ ಪರ್ಯಾಯದ ಯೋಜನೆಗಳಲ್ಲಿ ಲಕ್ಷ- ವೃಕ್ಷ ಯೋಜನೆ ಕೂಡಾ ಒಂದಾಗಿದ್ದು ಈ ಯೋಜನೆಯ ಮೂಲಕ ಉಡುಪಿಯಾದ್ಯಂತ ಲಕ್ಷ ಗಿಡಗಳನ್ನು ವಿತರಿಸಿ ಅದನ್ನು ಸಮೃದ್ದವಾಗಿಸುವ ಯೋಜನೆಯನ್ನು ಪೇಜಾವರ ಶ್ರೀಗಳು ಹಮ್ಮಿಕೊಂಡಿದ್ದಾರೆ.

ವಿಶ್ವ ಪರಿಸರದ ದಿನಾಚರಣೆಯ ಅಂಗವಾಗಿ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಕೃಷ್ಣ ಮಠದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಾವಿರ ಗಿಡಗಳನ್ನು ವಿತರಿಸಿದರು. ಈ ಹಿಂದೆಯೂ ಅನೇಕ ಗಿಡಗಳನ್ನು ವಿತರಿಸಿರುವ ಶ್ರೀಗಳು ಈ ಗಿಡಗಳು ಮುಂದೆ ಪರಿಸರ ರಕ್ಷಣೆಗೆ ಕಾರಣವಾಗಲಿ. ಗೋವರ್ಧನ ಬೆಟ್ಟವನ್ನು ಶ್ರೀ ಕೃಷ್ಣ ಎತ್ತಿದಂತೆ ಈ ಗಿಡವನ್ನು ಎತ್ತಿ, ಅದನ್ನು ಪೋಷಿಸುವ ಜವಭ್ಧಾರಿ ನಮ್ಮೆಲ್ಲರ ಮೇಲಿದೆ.ಅದಕ್ಕಾಗಿ ಎಲ್ಲರೂ ಶ್ರಮಿಸೋಣ ಎಂದರು.

Comments are closed.