ಕರಾವಳಿ

ಲಿಕ್ಕರ್ ಲಾಬಿಯೇ ಡಿವೈಎಸ್ ಪಿ ಅನುಪಮಾ ಶೆಣೈ ರಾಜೀನಾಮೆಗೆ ಕಾರಣವಾಯಿತೇ ….!

Pinterest LinkedIn Tumblr

Anupama shenoy

ಬೆಂಗಳೂರು: ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆಗೆ ಲಿಕ್ಕರ್ ಲಾಬಿ ಕಾರಣವೇ ಹೀಗೊಂದು ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ. ದಕ್ಷ, ಪ್ರಾಮಾಣಿಕ, ಕೆಚ್ಚೆದೆಯ ಅಧಿಕಾರಿ ಎಂದೇ ಖ್ಯಾತಿಯಾಗಿರುವ ಅನುಪಮಾ ಶೆಣೈ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ.

ಇನ್ನು ಅನುಪಮಾ ಶೆಣೈ ಫೇಸ್‌ಬುಕ್ ಖಾತೆಯಲ್ಲಿ `ಲಿಕ್ಕರ್ ಲಾಬಿಗೆ ಕೂಡ್ಲಗಿ ಜನತೆ ಶರಣು ಶರಣು ಎನ್ನಿರೇ’ ಎನ್ನುವ ಸ್ಟೇಟಸ್ ಹರಿದಾಡುತ್ತಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ, `ಸಿದ್ದರಾಮಯ್ಯರ ‘ರಮ್’ ರಾಜ್ಯ- ಎಂದು ವ್ಯಕ್ತಿಯೊಬ್ಬರು ಹಾಕಿರುವ ಪೋಸ್ಟನ್ನು, ಅನುಪಮಾ ಅವರು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಜೊತೆಗೆ, ಕೇವಲ ಒಂದು ಗಂಟೆ ಹಿಂದಷ್ಟೇ ಅನುಪಮಾ ಅವರು ತಮ್ಮ ಪ್ರೊಫೈಲ್ ಫೋಟೋ ಬದಲಿಸಿ, ಕ್ರಾಂತಿಕಾರಿ ಸಂದೇಶ (ಅನ್ಯಾಯ ಅನ್ನೋದು ಕಾನೂನಾದಾಗ ಬಂಡಾಯ ಅನ್ನೋದು ಕರ್ತವ್ಯವಾಗುತ್ತದೆ ) ವಿರುವ ಸ್ಲೋಗನ್ ಹಾಕಿದ್ದಾರೆ.

ಕ್ಷಣಕ್ಷಣಕ್ಕೂ ಅವರ ರಾಜೀನಾಮೆ ಪ್ರಕರಣ ಹೊಸತೊಂದು ಕುತೂಹಲಕ್ಕೆ ಎಡೆಮಾಡಿಕೊಡುತ್ತಿದೆ. ಅದರ ಹಿನ್ನೆಲೆಯಲ್ಲಿ ನಿಜವಾಗಿಯೂ ಲಿಕ್ಕರ್ ಲಾಬಿಯ ಕೈವಾಡವಿದೆಯೇ ಎಂಬ ಪ್ರಶ್ನೆ ಜನತೆಯನ್ನು ಕಾಡುತ್ತಿದೆ. ಸಿದ್ದರಾಮಯ್ಯನವರ ಸರಕಾರ ಭ್ರಷ್ಟತೆಯಿಂದ ಕೂಡಿದ್ದು, ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶವೇ ಇಲ್ಲ ಎಂದು ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.