ಕರಾವಳಿ

ಉಡುಪಿಯಲ್ಲಿ ಹೆಚ್ಚುತಿದೆ ಗಾಂಜಾ ಡೀಲ್…? ಪೊಲೀಸರಿಂದ ಮಾರಾಟಗಾರರಿಬ್ಬರ ಬಂಧನ

Pinterest LinkedIn Tumblr
ಉಡುಪಿ: ಗಾಂಜಾ ಮಾರಾಟ ಮಾಡಲೆತ್ನಿಸುತ್ತಿದ್ದ ಇಬ್ಬರು ಯುವಕರನ್ನು  ಡಿಸಿಐಬಿ ಪೊಲೀಸರು ಉಡುಪಿಯ ಅಲೆವೂರಿನಲ್ಲಿ ಬಂಧಿಸಿದ್ದಾರೆ.
Udupi_Ganja Accused_Arrest
ಶಿರ್ವ ತೊಟ್ಲ ಗುರಿಯ ಮಹಮ್ಮದ್ ಅಜರುದ್ದೀನ್ (29) ಮತ್ತು ಅದಮಾರು ನಿವಾಸಿ ಸುಧೀರ್ ದೇವಾಡಿಗ (29) ಬಂಧಿತ ಆರೋಪಿಗಳು. ಅವರಿಂದ 15 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಎಸ್‌ಪಿ ಅಣ್ಣಾಮಲೈ ಕೆ. ನಿರ್ದೇಶ, ಹೆಚ್ಚುವರಿ ಎಸ್‌ಪಿ ವಿಷ್ಣುವರ್ಧನ, ಡಿವೈ‌ಎಸ್‌ಪಿ ಎಸ್.ಜೆ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಬಿ ಇನ್ಸ್‌ಪೆಕ್ಟರ್ ರತ್ನಕುಮಾರ್, ಡಿಸಿಬಿ ಎ‌ಎಸ್‌ಐ ರೊಸಾರಿಯಾ ಡಿಸೋಜ, ಸಿಬಂದಿ ರವಿಚಂದ್ರ, ಸುರೇಶ, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಜ್‌ಕುಮಾರ್, ದಯಾನಂದ ಪ್ರಭು, ಪ್ರವೀಣ, ಶಿವಾನಂದ ಹಾಗೂ ಚಾಲಕ ರಾಘವೇಂದ್ರ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.