ಕರಾವಳಿ

ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೆ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ದರದಲ್ಲಿ 21 ರು. ಏರಿಕೆ

Pinterest LinkedIn Tumblr

gas

ನವದೆಹಲಿ: ಪೆಟ್ರೋಲ್-ಡೀಸೆಲ್ ದರ ಏರಿಕೆ ಬೆನ್ನಲ್ಲೇ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಗಳ ಮೇಲಿನ ದರ ಏರಿಕೆ ಮಾಡಲಾಗಿದ್ದು, ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ದರದಲ್ಲಿ 21 ರು ಏರಿಕೆ ಮಾಡಲಾಗಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ತೈಲ ದರ ಏರಿಕೆ ಮಾಡಲಾಗಿದ್ದು, ಅದರಂತೆ ಭಾರತೀಯ ತೈಲೋತ್ಪನ್ನ ಸಂಸ್ಥೆಗಳು ಕಳೆದ ರಾತ್ರಿ ದರವನ್ನು ಪರಿಷ್ಕರಣೆಗೊಳಿಸಿದ್ದವು. ಇದರ ಬೆನ್ನಲ್ಲೇ ಇದೀಗ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಮತ್ತು ಜೆಟ್ ವಿಮಾನ ಇಂಧನ ದರ ಕೂಡ ಏರಿಕೆಯಾಗಿದೆ. ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ದರದಲ್ಲಿ 21 ರು.ಏರಿಕೆಯಾಗಿದ್ದು, ಜೆಟ್ ವಿಮಾನ ಇಂಧನದರದಲ್ಲಿ ಶೇ.9.2ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಇಂಡಿಯನ್ ಆಯಿಲ್ ಕಾರ್ಪೆರೇಷನ್, ಹಿಂದುಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ಈ ಮೂರು ಕಂಪನಿಗಳೂ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ದಕ್ಕೆ ಅನುಗುಣವಾಗಿ ಪ್ರತಿ ತಿಂಗಳಲ್ಲಿ 2 ಬಾರಿ ಪರಿಷ್ಕೃತ ದರ ಪ್ರಕಟಿಸುತ್ತಿದ್ದು, ಅಂತೆಯೇ ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿತ್ತು. ಅದರಂತೆ ಪೆಟ್ರೋಲ್ ಪ್ರತಿ ಲೀಟರ್ಗೆ 2.58 ರು., ಡೀಸೆಲ್ ಪ್ರತಿ ಲೀಟರ್ಗೆ 2.26 ರೂ. ಏರಿಕೆಯಾಗಿ, ಮಂಗಳವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆಬಂದಿದೆ. ಅದೇ ಪ್ರಕಾರ ಇದೀಗ ಸಬ್ಸಿಡಿ ಎಲ್ಪಿಜಿ ಬೆಲೆಯಲ್ಲಿಯೂ ಏರಿಕೆಯಾಗಿದೆ.

Comments are closed.