ರಾಷ್ಟ್ರೀಯ

ಆರೆಎಸ್ಸೆಸ್ ಶಾಲೆಯಲ್ಲಿ ಕಲಿತ ಮುಸ್ಲಿಂ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ

Pinterest LinkedIn Tumblr

assam student

ಗುವಾಹಟಿ: ಅಸ್ಸಾಂನಲ್ಲಿ ಆರ್ಎಸ್ಎಸ್ ನಡೆಸುತ್ತಿರುವ ಶಂಕರದೇವ ಶಿಶು ನಿಕೇತನ ಶಾಲೆಯಲ್ಲಿ ಓದಿದ ಮುಸ್ಲಿಂ ಬಾಲಕ ಹತ್ತನೆ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸರ್ಫರಾಜ್ ಹುಸೈನ್ 600 ಅಂಕಗಳಿಗೆ 590 ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ತಮ್ಮ ಈ ಸಾಧನೆಗೆ ಶಾಲೆಯ ಶಿಕ್ಷಕರು ಹಾಗೂ ತಂದೆ-ತಾಯಿಯ ಪ್ರೋತ್ಸಾಹವೇ ಕಾರಣ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಎಂಟನೇ ತರಗತಿಯಿಂದ ಸಂಸ್ಕೃತ ಅಭ್ಯಾಸ ಕೈಗೊಂಡ ಈ ಬಾಲಕ ಈ ಸಾರಿ ನೂರಕ್ಕೆ ನೂರು ಅಂಕಗಳಿಸಿದ್ದಾರೆ. ಅಷ್ಟೇ ಅಲ್ಲ ಸಂಸ್ಕೃತ ಪ್ರಭಂದ ಹಾಗೂ ವಿಚಾರ ಸಂಕಿರಣದಲ್ಲೂ ಮುಂಚೂಣಿ ಸಾಧಿಸಿರುವುದು ವಿಶೇಷ.

ಮುಂದೆ ಎಂಜಿನಿಯರ್ ಆಗಬೇಕೆಂದು ಸರ್ಫರಾಜ್ ಕನಸು ಹೊತ್ತಿದ್ದಾರೆ. ಈತನ ತಂದೆ ಹೋಟೆಲ್ ಉದ್ಯಮಿ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ.

Comments are closed.