ರಾಷ್ಟ್ರೀಯ

ಉತ್ತರ ಪ್ರದೇಶದಲ್ಲೊಬ್ಬ ಭಜರಂಗಿ ಬಾಯಿಜಾನ್!

Pinterest LinkedIn Tumblr

Anjaneya

ಲಕ್ನೋ: ಜನ್ಮತಃ ಮುಸ್ಲಿಂ ಆದರೂ ಆಂಜನೇಯ ಸ್ವಾಮಿಯನ್ನು ಆರಾಧಿಸುತ್ತಾರೆ. ಈದ್ ಮಿಲಾದ್, ರಂಜಾನ್ ಹಬ್ಬವನ್ನು ಆಚರಿಸುವ ಇವರು ಗಣೇಶ ಚತುರ್ಥಿ, ದೀಪಾವಳಿಯಲ್ಲಿ ತಪ್ಪದೆ ಪಾಲ್ಗೊಳ್ಳುತ್ತಾರೆ!

ಯಾರು ಅವರು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೆ ಈ ಸುದ್ದಿ ಓದಿ. ಹೌದು. ‘ಭಜರಂಗಿ ಬಾಯಿಜಾನ್ ಎಂದೇ ಕರೆಯಿಸಿಕೊಳ್ಳುತ್ತಿರುವ ಸೈಯದ್ ಖೈಸರ್ ರಾಜ ಅವರ ಹಿಂದು ಹಾಗೂ ಮುಸ್ಲಿಂ ದೇವರ ಆಚರಣೆ ಇದೀಗ ಎಲ್ಲರ ಪ್ರೀತಿಗೆ ಪಾತ್ರವಾಗಿದೆ.

ದೇವನೊಬ್ಬ ನಾಮ ಹಲವು ಎಂಬ ತತ್ವದ ಮೇಲೆ ಅಪಾರ ನಂಬಿಕೆ ಇಟ್ಟಿರುವ ಸೈಯದ್ ಅವರು ಬಾಲ್ಯದಿಂದಲೂ ಆಂಜನೇಯ ಸ್ವಾಮಿಯ ಅಪ್ಪಟ ಅಭಿಮಾನಿ. ಪ್ರಸ್ತುತ ಸರ್ಕಾರಿ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ಆಂಜನೇಯ ಸ್ವಾಮಿಯ ಮೇಲಿನ ಭಕ್ತಿಗೆ ಸೈಯದ್ ಖೈಸರ್ ಹೇಳೋದು ಹೀಗೆ, ಹಿಂದೂ ದೇವತೆಗಳಲ್ಲೇ ಆಂಜನೇಯ ಸ್ವಾಮಿ ಅತ್ಯಂತ ಶಕ್ತಿ ಇರುವ ದೇವರಾಗಿದ್ದಾರೆ. ನನ್ನ ಮನಸ್ಸಿಗೆ ಬೇಸರ ಬಂದಾಗಲೆಲ್ಲಾ ಆಂಜನೇಯ ದೇವಾಲಯಕ್ಕೆ ಭೇಟಿ ನೀಡುತ್ತೇನೆ. ಇದರಿಂದ ನನ್ನ ಮನಸ್ಸು ಹಗುರವಾಗುತ್ತದೆ ಎನ್ನುತ್ತಾರೆ.

ಬಾಲ್ಯದಲ್ಲಿ ಪ್ರತಿ ಮಂಗಳವಾರ ದೇವಾಲಯಕ್ಕೆ ಭೇಟಿ ನೀಡಿ ಹಿಂದು ಸ್ನೇಹಿತರೊಂದಿಗೆ ಪ್ರಸಾದ ತಿನ್ನುತ್ತಿರುವುದನ್ನು ನೆನಪಿಸಿಕೊಂಡ ಸೈಯದ್, ಇದೀಗ ಹಿಂದು ದೇವಾಲಯಗಳಲ್ಲಿ ಕೂಡ ಪೂಜಾ ಕಾರ್ಯವನ್ನು ಏರ್ಪಡಿಸುತ್ತಿದ್ದಾರೆ. ತಮ್ಮ ಈ ಕಾರ್ಯಕ್ಕೆ ಹಿಂದು ಹಾಗೂ ಮುಸ್ಲಿಂ ಸ್ನೇಹಿತರು ಸಹಾಯ ಮಾಡುತ್ತಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

Comments are closed.