ಕರಾವಳಿ

ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆ, ದಾರಿ ದೀಪದ ಬಗ್ಗೆ ಚರ್ಚೆ

Pinterest LinkedIn Tumblr

ಉಡುಪಿ: ನೀರಿನ ಅಭಾವ, ದಾರಿ ದೀಪಗಳ ಸಮಸ್ಯೆಯ ಬಗ್ಗೆ ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಗಂಭೀರವಾದ ಚರ್ಚೆ ನಡೆಯಿತು. ಮಲ್ಪೆಯಲಿ ಕಸದ ರಾಶಿ, ಕಲುಷಿತ ನೀರಿನ ಬಗ್ಗೆಯೂ ಆಡಳಿತ ವರ್ಗಕ್ಕೆ ಆಡಳಿತ ಪಕ್ಷದ ಸದಸ್ಯರೇ ಬಿಸಿ ಮುಟ್ಟಿಸಿದರು.

Udupi_Nagarasabhe_Meeting (1) Udupi_Nagarasabhe_Meeting (2) Udupi_Nagarasabhe_Meeting (3) Udupi_Nagarasabhe_Meeting (4)

ಉಡುಪಿ ನಗರಸಭೆಯ ಸಮಾನ್ಯ ಸಭೆ ಅದ್ಯಕ್ಷೆ ಮೀನಾಕ್ಷಿ ಮಾಧವ ಅವರ ಅದ್ಯಕ್ಷತೆಯಲ್ಲಿ ಜರಗಿತು. ಆರಂಭದಲ್ಲಿ ಕೊಡುವೂರು ಗ್ರಾಮದಲ್ಲಿ ಎಸ್.ಸಿ, ಎಸ್ಟಿ ಕಾಲಾನಿಯಲ್ಲಿ ಬಹುಮಡಿ ಕಟ್ಟಡವನ್ನು ನಿರ್ಮಿಸಲು ಮುಂದಾಗಿರುವುದಕ್ಕೆ ನಗರಸಭೆ ಅನುಮತಿ ನೀಡಬಾರದು ಎಂದು ನಾಮ ನಿರ್ದೇಶಿತ ಸದಸ್ಯ ಗಣೇಶ್ ನೆರ್ಗಿ ಅವರು ಆಗ್ರಹಿಸಿದರು. ಕೊಳಚೆ ಪ್ರದೇಶದಲ್ಲಿ ಬಹುಮಡಿ ಕಟ್ಟಡ ಆರಂಭವಾದರೆಸಮಸ್ಯೆ ಉಲ್ಬಣಿಸುವ ಸಾದ್ಯತೆ ಇದೆ. ಆದ್ದರಿಂದ ಅವಕಾಶವನ್ನು ನೀಡಬಾರದು ಎಂದು ಆಗ್ರಹಿಸಿದರು. ಅಲ್ಲದೇ ಈ ಬಗ್ಗೆ ನಗರಸಭೆ ಶ್ರುದ್ದಾಂಜಲಿ ಎಂಬ ಬ್ಯಾನರ್ ಅಳವಡಿಸಿದ್ದು ಬಾರೀ ಚರ್ಚೆಗೆ ಹಾಗೂ ನಗರಸಭಾ ಸದಸ್ಯರ ಆಕ್ರೋಶಕ್ಕೂ ಕಾರಣವಾಯಿತು. ಬ್ಯಾನರ್ ಹಾಕಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತವಾಯಿತು.

ನಗರಸಭಾ ಪೌರಾಯುಕ್ತ ಡಿ. ಮಂಜುನಾಥಯ್ಯ ಮಾತನಾಡಿ ನಾವು ತಾಂತ್ರಿಕ ಒಪ್ಪಿಗೆಯನ್ನು ನೀಡುವುದಲ್ಲ. ಬದಲಾಗಿ ನಗರಾಭಿವೃದ್ದಿ ಪ್ರಾಧಿಕಾರ ನೀಡುವುದು ಅದಕ್ಕೆ ನಗರಸಭೆ ದರ ವಿಧಿಸಿ ಬಳಿಕ ಪರ್ಮಿಶನ್ ನೀಡುತ್ತೇವೆ. ಆದರೆ ನಾವು ಹಣ ಕಟ್ಟಿ ಎಂದು ಹೇಳಿದ್ದು ಇದ್ವರೆಗೆ ಆವರು ಕಟ್ಟಿಲ್ಲ. ಆಕಾರಣದಿಂದ ಅನುಮತಿ ಯಾವುದೇ ಕಾರಣ ನೀಡಲಾಗುವುದಿಲ್ಲ. ಈ ಬಗ್ಗೆ ಜನರಲ್ಲಿ ತಪ್ಪು ಮಾಹಿತಿ ಇದೆ ಎಂದರು.

ನಗರಸಭೆ ಪೂರೈಕೆ ಮಾಡುವ ನೀರಿನಲ್ಲಿ ಹುಳ ಇದೆ ಎಂಬ ಬಗ್ಗೆ ಬನ್ನಂಜೆ ನಾಗರೀಕರು ಆರೋಪಿಸಿದ ಬಗ್ಗೆ ಮಾದ್ಯಮದಲ್ಲಿ ಪ್ರಕಟವಾದ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ನಗರಸಭೆ ಶುದ್ದ ನೀರನ್ನೇ ನೀಡುತ್ತಿದೆ. ಈ ಬಗ್ಗೆ ಪರೀಕ್ಷೆಯನ್ನು ಕೂಡಾ ಮಾಡಲಾಗಿದೆ ಎಂದು ಪೌರಾಯುಕ್ತರು ತಿಳಿಸಿದರು. ವಿರೋಧ ಪಕ್ಷದ ಸದಸ್ಯರು ಎಲ್ಲಾ ಬಾವಿಗಳನ್ನು ಪರೀಕ್ಷೆಗೆ ಒಳಪಡಿಸಿ ಎಂದರು. ಇನ್ನು ದಾರಿ ದೀಪದ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಟೆಂಡರ್ ವಹಿಸಿಕೊಟ್ಟಿರುವವರ ಟೆಂಡರ್ ರದ್ದುಗೊಳಿಸಿ ಎಂದು ಎಲ್ಲಾ ಸದಸ್ಯರು ಆಗ್ರಹಿಸಿದರು.

ಇನ್ನು ಮಲ್ಪೆಯಲ್ಲಿ ತಾಜ್ಯದ ರಾಶಿ ಬಗ್ಗೆ ಪ್ರಶಾಂಟ್ ಅಮೀನ್ ಸಭೆಯ ಗಮನಕ್ಕೆ ತಂದರು. ಮಲ್ಪೆ ಅಭಿವೃದ್ದಿ ಸಮಿತಿ ಮಾಡುತ್ತಿರುವ ಅವಾಂತರಕ್ಕೆ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಸದಸ್ಯರು ಆಗ್ರಹಿಸಿದರು.

Comments are closed.