ಕರ್ನಾಟಕ

ಸಿನಿಮೀಯ ರೀತಿಯಲ್ಲಿ ಜೈಲಿನಿಂದ ಪರಾರಿಯಾಗಿದ್ದ ಇಬ್ಬರ ಬಂಧನ

Pinterest LinkedIn Tumblr

arrest

ಚೊಕ್ಕೋಡಿ: ಸಬ್ ಜೈಲಿನ ಶೌಚಾಲಯ ಕೊಠಡಿಯ ಗೋಡೆ ಕೊರೆದು ಪರಾರಿಯಾಗಿದ್ದ ಮೂವರು ವಿಚಾರಣ ಕೈದಿಗಳಲ್ಲಿ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಇನ್ನೊಬ್ಬನ ಪತ್ತೆಗೆ ಜಾಲ ಬೀಸಲಾಗಿದೆ. ಚಿಕ್ಕೋಡಿ ಹಾಗೂ ರಾಯಭಾಗ ಪೊಲೀಸರು ಜಂಟಿ ಕಾರ್ಯಾದಚರಣೆ ನಡೆಸಿ ದೀಪಕ್‌ಕಾಂಬಳೆ ಹಾಗೂ ರಾಜು ಗುಂಜಾಳಕರ್ ಎಂಬುವವರನ್ನು ಬಂಧಿಸಿದ್ದು ಇನ್ನೋರ್ವ ಕೈದಿ ಅನೀಲ ಲಂಬುಗೋಳ ಪತ್ತೆಗೆ ಜಾಲ ಬೀಸಿದ್ದಾರೆ.

ಈ ಮೂವರು ಕೈದಿಗಳನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿತ್ತು. ದಿ.29ರಂದು ಈ ಮೂವರು ಜೈಲಿನ ಶೌಚಾಲಯದ ಕೊಠಡಿಯ ಗೋಡೆ ಕೊರೆದು ಪರಾರಿಯಾಗಿದ್ದರು ಈ ಬಗ್ಗೆ ಕಾರ್ಯ ಪ್ರವೃತ್ತರಾದ ರಾಯಭಾಗ ಹಾಗೂ ಚಿಕ್ಕೋಡಿ ಪೊಲೀಸರು ಜಂಟಿ ಕಾರ್ಯಾಡಚರಣೆ ನಡೆಸಿ ರಾಯಭಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಇವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Comments are closed.