ಕರಾವಳಿ

ಅಖಿಲ ಭಾರತ ತುಳು ಒಕ್ಕೂಟ : ರತ್ನಕುಮಾರ್ ಎಮ್ ಇವರಿಗೆ ಸಮ್ಮಾನ

Pinterest LinkedIn Tumblr

IMG-20160530-WA0019

ಮಂಗಳೂರು : ಅಖಿಲ ಭಾರತ ತುಳು ಒಕ್ಕೂಟದ ವತಿಯಿಂದ ತುಳು ಭಾಷೆ, ಸಂಸ್ಕøತಿ, ಸಂಘಟನೆಗೆ ಸುಮಾರು 30 ವರ್ಷಗಳಿಂದ ದುಡಿದ ಪತ್ರಕರ್ತ, ಸಾಹಿತಿ, ರತ್ನಕುಮಾರ್ ಎಮ್ ಇವರಿಗೆ ಕಾವೂರಿನ ಮುಗ್ರೋಡಿ ಎನ್‍ಕ್ಲೇವ್ ಕಛೇರಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಸಮ್ಮಾನ ಗೌರವ ಸಮಾರಂಭ ನೆರವೇರಿತು.

ಶ್ರೀ ಮನೋಹರ್ ಪ್ರಸಾದ್ ನ್ಯೂಸ್ ಬ್ಯೂರೊ ಚೀಫ್ ಉದಯವಾಣಿ ಇವರು ತಮ್ಮ ಅಭಿನಂದನಾ ಭಾಷಣದಲ್ಲಿ ರತ್ನಕುಮಾರ್ ತಾವು ದುಡಿಯುತ್ತಿರುವ ಸಂಸ್ಥೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಮೇಲಾಧಿಕಾರಿಗಳ ಪ್ರಶಂಸಗೆ ಪಾತ್ರರಾದವರು ಎಂದ ಅವರು ನೇರ ನುಡಿ ಸರಳ ಸಜ್ಜನಿಕೆಯ ನಿರಾಂಡಂಬರ ವ್ಯಕ್ತಿತ್ವವನ್ನು ಕೊಂಡಾಡಿದ ಅವರು ರತ್ನಕುಮಾರ್‍ರವರ ಜತೆಗಿನ ಒಡನಾಟ, ಸ್ನೇಹ ಬಾಂಧವ್ಯವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಮುಖ್ಯ ಅತಿಥಿಗಳಾಗಿ ನಗರದ ಖ್ಯಾತ ವೈದ್ಯ ಡಾ. ವಿದ್ಯಾದರ್ ಶೆಟ್ಟಿ ಮಾತನಾಡಿ ಮನುಷ್ಯ ತನ್ಮ ಜೀವನದ ಅವಧಿಯಲ್ಲಿ ಸಮಾಜಕ್ಕೆ ಏನು ಕೊಡಬಹುದು, ಹೇಗೆ ಬದುಕಬಹುದು ಎಂಬುವುದಕ್ಕೆ ರತ್ನಕುಮಾರ್ ಅವರ ಜೀವನ ಮಾದರಿ ಎಂದರು.

ವಿಶೇಷ ಸಮ್ಮಾನ ಗೌರವ ತುಳು ಸಂಸ್ಕøತಿಯನ್ನು ಬಿಂಬಿಸುವಲ್ಲಿ ವಿಶೇಷವಾಗಿತ್ತು. ಸಮ್ಮಾನದ ಪ್ರತೀಕವಾಗಿ ಎಮ್ ರತ್ನಕುಮಾರ್‍ರವರು ಮಾತನಾಡಿ ಸಂಘಟನೆಯು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಋಣಿಯಾಗಿದ್ದು ನನ್ನ ಜೀವಮಾನದಲ್ಲಿ ಮರೆಯಲಾಗದ ಈ ಸಂದರ್ಭ ಎಂದು ಈ ರೀತಿಯ ವಿಶೇಷ ಗೌರವಕ್ಕೆ ನಾನು ಎಷ್ಟೂ ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂದರು.

ಸಂಘದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಮಾತನಾಡಿ ಸರಕಾರದಿಂದ ತುಳುಭಾಷೆಗೆ ಮಾನ್ಯತೆ ಪಡೆಯಲು ದೇಶದಾದ್ಯಂತ ಜಾತ್ಯಾತೀತ ತುಳು ಸಂಘಟನೆಗಳು ಸಂಘಟಿತರಾಗಿ ಕಾರ್ಯನಿರ್ವಹಿಸುವ ಅತ್ಯಗತ್ಯವನ್ನು ಒತ್ತಿ ಹೇಳಿದ ಅವರು ತುಳುಭಾಷೆಯನ್ನು 8ನೆಯ ಪರಿಚ್ಛೇದನೆಗೆ ಸೇರಿಸುವ ಸಲುವಾಗಿ ಹೋರಾಡಲು ಇದರ ಸಂಚಾಲಕರಾಗಿ ಹಿರಿಯ ಸಮಾಜ ಸೇವಕ, ರಾಜಕಾರಿಣಿ, ಬಂಟ್ವಾಳ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿಯವರಿಗೆ ವಹಿಸಿಕೊಳ್ಳವಂತೆ ಮನವಿ ಮಾಡಲಾಯಿತು.

ಜಯಕರ್ ಶೆಟ್ಟಿ ಇಂದ್ರಾಳಿ, ದಿವಾಕರ್ ಶೆಟ್ಟಿ ಸಾಂಗ್ಲಿ, ಎ.ಸಿ. ಭಂಡಾರಿ ಬಂಟ್ವಾಳ, ಅಡ್ಯಾರ್ ಮಹಾಬಲ ಶೆಟ್ಟಿ, ಪುರುಷೋತ್ತಮ ಭಂಡಾರಿ ಅಡ್ಯಾರ್, ವಿಜಯಲಕ್ಷ್ಮಿ ಬಿ. ಶೆಟ್ಟಿ, ಚಂದ್ರಶೇಖರ್ ಸುವರ್ಣ, ಚಂದ್ರಹಾಸ ದೇವಾಡಿಗ ರಾಜೇಶ್ ಆಳ್ವ ಬದಿಯಡ್ಕ, ಎಮ್. ಎಸ್. ಶೆಟ್ಟಿ, ಪ್ರದೀಪ್ ಆಳ್ವ, ತಾರಾನಾಥ ಶೆಟ್ಟಿ ಬೋಳಾರ್, ಗಣೇಶ್ ಮಲ್ಲಿ, ಶ್ರೀಮತಿ ಜಯಲಕ್ಷ್ಮಿ, ಹರೀಶ್ ನೀರುಮಾರ್ಗ, ಸುರೇಶ್ ಕುಮಾರ್ ಬೆಂಗಳೂರು, ಪಿ.ಎ. ಪೂಜಾರಿ ಮತ್ತಿತ್ತರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ್ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಮುಲ್ಕಿ ಕರುಣಾಕರ್ ಶೆಟ್ಟಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Comments are closed.