ರಾಷ್ಟ್ರೀಯ

ಮಕ್ಕಳು ಸೇರಿ 328 ಜೀತ ಕಾರ್ಮಿಕರ ರಕ್ಷಣೆ

Pinterest LinkedIn Tumblr

tamilಚೆನ್ನೈ (ಪಿಟಿಐ): ತಮಿಳುನಾಡಿನ ತಿರುವಳ್ಳೂರ್‌ ಜಿಲ್ಲೆಯ ಪುದುಕುಪ್ಪಂನ ಇಟ್ಟಿಗೆ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 106 ಮಕ್ಕಳು ಸೇರಿದಂತೆ 328 ಜೀತ ಕಾರ್ಮಿಕರನ್ನು ರಕ್ಷಿಸಿದ್ದಾರೆ.

‘ಕಾರ್ಮಿಕರೆಲ್ಲರೂ ಒಡಿಶಾ ಮೂಲದವರು. ಅವರಿಂದ ದಿನಕ್ಕೆ 12 ಗಂಟೆ ಕೆಲಸ ಮಾಡಿಸಿಕೊಂಡು, ಕೇವಲ ₹ 20 ಕೂಲಿ ನೀಡಲಾಗುತ್ತಿತ್ತು’ ಎಂದು ಅಧಿಕಾರಿಗಳು ತಿಳಿಸಿದರು.

‘ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ತಲಾ ₹ 1 ಸಾವಿರ ಕೊಟ್ಟು, ಅವರನ್ನು ವಿಶೇಷ ರೈಲಿನಲ್ಲಿ ಒಡಿಶಾಗೆ ಕಳುಹಿಸಲಾಗುವುದು’ ಎಂದು ಹೇಳಿದರು.

‘ದಿನಕ್ಕೆ ₹ 350–400 ಕೂಲಿ ಕೊಡಲಾಗುವುದು ಎಂದು ನಮ್ಮನ್ನು ಕರೆತಂದು ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ವಾಸಕ್ಕೆ ಮನೆ, ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯ ಕಲ್ಪಿಸಿರಲಿಲ್ಲ’ ಎಂದು ಕಾರ್ಮಿಕರೊಬ್ಬರು ಹೇಳಿದರು.

ರಕ್ಷಿಸಲಾದ ಮಕ್ಕಳು 15 ವರ್ಷಕ್ಕಿಂತ ಕೆಳಗಿನವರು. ಇಟ್ಟಿಗೆ ಕಾರ್ಖಾನೆಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರುಗಳು ತಿಳಿಸಿದರು.

Comments are closed.