ಉಡುಪಿ: ಸದಾ ವಾಹನಗಳಿಂದ ಗಿಜುಗುಡುತಿದ್ದ ಮಣಿಪಾಲ-ಉಡುಪಿಯ ರಸ್ತೆಯಲ್ಲಿ ಭಾನುವಾರ ಎಲ್ಲಿ ನೋಡಿದರೂ ಸೈಕಲ್ ಓಡಾಟವೇ ಕಂಡು ಬಂತು. ರಾಜ್ಯ-ಹೊರರಾಜ್ಯ, ವಿದೇಶಿಗರೂ ಸೈಕಲ್ ತುಳಿಯುವ ಸಾಹಸ ಮಾಡಿದರು. ಇದೆಲ್ಲಾ ನಡೆದದ್ದು ಮಣಿಪಾಲದಲ್ಲಿ ಜರಗಿದ ರಾಜ್ಯಮಟ್ಟದ ಸೈಕ್ಲೋಥಾನ್ ಎಂಬ ಸೈಕಲ್ ಸ್ಪರ್ದೆಯಲ್ಲಿ. ವಿವಿಧ ವಿಭಾಗದಲ್ಲಿ ನಡೆದ ಸೈಕಲ್ ಸ್ಪರ್ದೆಯಲ್ಲಿ 200ಕ್ಕೂ ಹೆಚ್ಚು ಸ್ಪರ್ದಿಗಳು ಈ ಸೈಕ್ಲೋಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದರು.

‘ನೀರು ಉಳಿಸಿ, ಭೂಮಿ ಉಳಿಸಿ’ ಎಂಬ ಪ್ರಮುಖ ಧ್ಯೇಯ ವಾಕ್ಯದಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕರವಾಳಿಯ ಜಿಲ್ಲೆಗಳಲ್ಲಿ ನೀರನ್ನು ಉಳಿಸಬೇಕು ಹಾಗೂ ಮುಂದಿನ ಜನಾಂಗಕ್ಕೆ ನೀರು ಎಷ್ಟು ಮುಖ್ಯ ಎಂಬುದನ್ನ ತಿಳಿಸಬೇಕು ಎಂಬ ಪ್ರಮುಖ ಉದ್ದೇಶವನ್ನಿಟ್ಟುಕೊಂಡು ಈ ಸೈಕ್ಲೋಥಾನ್ ಎಂಬ ಸೈಕಲ್ ಸ್ಪರ್ದೆಯನ್ನು ಆಯೋಜಿಸಲಾಗಿತ್ತು. ಈ ರಾಷ್ಟ್ರ ಮಟ್ಟದ ಸ್ಪರ್ದೆ ಮಣಿಪಾಲದ ಎಂಡ್ ಪಾಯಿಂಟ್ ನಿಂದ ಮುಂಜಾನೆ ಆರಂಭವಾಯಿತು. 50ಕಿಲೋ ಮೀಟರ್, 25 ಕಿಲೋ ಮೀಟರ್ ಮಹಿಳೆಯರು ಹಾಗೂ ಅಮ್ಯೂಚರ್ ವಿಭಾಗದಲ್ಲಿ ಸ್ಪರ್ದೆಗಳು ನಡೆದವು. ದೇಶ ಮಾತ್ರಾಲ್ಲ ಮಣಿಪಾಲದಲ್ಲಿರುವ ವಿದೇಶಿ ವಿದ್ಯಾರ್ಥಿಗಳೂ ಈ ಸ್ಪರ್ದೆಯಲ್ಲಿ ಭಾಗವಹಿಸಿದರು.
ಉಡುಪಿ ಮತ್ತು ದ.ಕ ಜಿಲ್ಲೆಯ ಮಟ್ಟಿಗೆ ಇದು ಪ್ರಥಮ ರಾಷ್ಟ್ರ ಮಟ್ಟದ ಸೈಕಲ್ ಸ್ಪರ್ದೆಯಾಗಿದೆ. ಉಡುಪಿಯ ಈವೆಂಟ್ಸ್ ಎಂಬ ಸಂಸ್ಥೆ ಹಾಗೂ ಅನೇಕ ಸಂಘಗಳ ಆಶ್ರಯದಲ್ಲಿ ಈ ಸ್ಪರ್ದೆಯನ್ನು ಆಯೋಜಿಸಲಾಗಿತ್ತು. 50ಕಿಲೋ ಮೀಟರ್ ಸೈಕಲ್ ಸ್ಪರ್ದೆಯಲ್ಲಿ ವಿಜಾಪುರದ ತಂಡವೇ ಮೊದಲ ಮೂರು ಸ್ಥಾನಗಳನ್ನು ಬಾಚಿಕೊಂಡಿತು. ವಿಜಾಪುರಸೈಕಲ್ ಕ್ಲಬ್ ನ ಸದಸ್ಯರಾದ ನಾಗಪ್ಪ ಮರ್ಡಿ ಮೊದಲ ಸ್ಥಾನ ಪಡೆದರೆ, ಬಸಪ್ಪ ಎರಡನೇ ಸ್ಥಾನ ಪಡೆದರು ಇನ್ನು ರಾಷ್ಟ್ರೀಯ ಚಾಂಪಿಯನ್ ಸಂದೇಶ್ ಮೂರನೇ ಸ್ಥಾನವನ್ನು ಪಡೆಯುವಲ್ಲಿ ಸಫಲರಾದರು. ಉಡುಪಿಯ ರಸ್ತೆಗಳು ಉತ್ತಮವಿದ್ದ ಕಾರಣ ಈ ರೇಸ್ ಯಶಸ್ವಿಯಾಗಿ ಮಾಡಲು ಸಾದ್ಯವಾಯಿತು ಎಂದಿರುವ ಸ್ಪರ್ದಾ ವಿಜೇತರು. ನಿರಂತರ 100ಕಿಲೋ ಮೀಟರ್ ಪ್ರಾಕ್ಟೀಸ್ ಮಾಡಿದ್ದರಿಂದ ನಮ್ಮ ತಂಡದ ಸದಸ್ಯರೇ ವಿಜೇತರಾಗಲು ಕಾರಣ ಎಂದು ತಿಳಿಸಿದರು.
Comments are closed.