ಕರ್ನಾಟಕ

ಇಂದಿನ ಆರ್ ಸಿಬಿ-ಸನ್ ರೈಸರ್ಸ್ ನಡುವಿನ ಫೈನಲ್ ನಲ್ಲಿ ಗೆಲುವು ಆರ್ ಸಿಬಿಗೆ ! ಇದಕ್ಕೆ ಕಾರಣ ಇಲ್ಲಿದೆ…..

Pinterest LinkedIn Tumblr

rcb

ಐಪಿಎಲ್ 2016ರ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಬೆಂಗಳೂರು ತಂಡಗಳ ನಡುವಿನ ಜಿದ್ದಾಜಿದ್ದಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಇತ್ತ ಫೈಲನ್ ನಲ್ಲಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಲು ಉಭಯ ತಂಡಗಳು ರಣತಂತ್ರವನ್ನು ರಚಿಸುತ್ತೀವೆ. ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ಚಾಣಾಕ್ಷ ನಾಯಕತ್ವದ ಮೂಲಕ ತಂಡವನ್ನು ಫೈನಲ್ ಹಂತಕ್ಕೆ ತಂದು ಮುಟ್ಟಿಸಿದ್ದಾರೆ. ಇನ್ನೊಂದೆಡೆ ಸನ್ ರೈಸರ್ಸ್ ಹೈದರಾಬಾದ್ ಪರ ಆಸ್ಟ್ರೇಲಿಯಾದ ಆಟಗಾರ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ತಮ್ಮ ಅದ್ಭುತ ಬ್ಯಾಟಿಂಗ್ ನಿಂದಾಗಿ ತಂಡವನ್ನು ಫೈನಲ್ ಮಟ್ಟಕ್ಕೆ ತಂದು ಮುಟ್ಟಿಸಿದ್ದಾರೆ.

ಆರ್ ಸಿಬಿ ಚಾಂಪಿಯನ್ ಆಗಲು ಕಾರಣವಾಗಬಹುದಾದ ಅಂಶಗಳು

ಫೀನಿಕ್ಸ್ ನಂತೆ ಎದ್ದು ಬಂದ ಆರ್ಸಿಬಿ
ಸತತ ಐದು ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದ್ದ ಆರ್ಸಿಬಿ ನಂತರ ಫೀನಿಕ್ಸ್ ನಂತೆ ಎದ್ದು ಬಂದದ್ದು ಇದೀಗ ಇತಿಹಾಸ. ಮುಂಬೈ ಇಂಡಿಯನ್ ವಿರುದ್ಧ ಗೆದ್ದ ನಂತರ ಪ್ಲೇ ಆಫ್ ಗೆ ಎಂಟ್ರಿ ಕೊಡಲು ಬೇಕಿದ್ದ ನಾಲ್ಕು ಪಂದ್ಯಗಳಲ್ಲೂ ಗೆಲ್ಲುವ ಮೂಲಕ ತಮ್ಮ ಆವೇಗವನ್ನು ತಂಡ ಕಾಯ್ದುಕೊಂಡಿದೆ. ಭರ್ಜರಿ ಫಾರ್ಮ್ ನಲ್ಲಿರುವ ತಂಡ ಇಂದು ಫೈನಲ್ ನಲ್ಲಿ ಹೈದರಾಬಾದ್ ತಂಡವನ್ನು ಧೂಳಿಪಟ ಮಾಡಲಿದೆ.

ತವರಿನ ಅನುಕೂಲ
ಆರ್ಸಿಬಿ ತಂಡದ ತವರಿನಲ್ಲಿ ಆಡಿರುವ ಅನೇಕ ಪಂದ್ಯಗಳಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿಗೆ ಅಭಿಮಾನಿಗಳ ಬೆಂಬಲ ಜಾಸ್ತಿ. ಇದೇ ಜೋಶ್ ನಲ್ಲಿ ಕೊಹ್ಲಿ ಪಡೆ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ. ಚಿನ್ನಸ್ವಾಮಿ ಅಂಗಳದಲ್ಲಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 248 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಇದೇ ಪಂದ್ಯದಲ್ಲಿ ಎದುರಾಳಿ ತಂಡದ ವಿರುದ್ಧ ಭರ್ಜರಿ 144 ರನ್ ಗಳಿಂದ ಜಯಗಳಿಸಿತ್ತು.

ಚೇತರಿಸಿಕೊಂಡ ಬೌಲಿಂಗ್ ವಿಭಾಗ
ಸದೃಢ ಬ್ಯಾಟಿಂಗ್ ಪಡೆ ಹೊಂದಿರುವ ಆರ್ಬಿಸಿಗೆ ಆರಂಭದ ಪಂದ್ಯಗಳಲ್ಲಿ ಕಳಪೆ ಬೌಲಿಂಗ್ ನಿಂದಾಗಿ ಭಾರೀ ಮೊತ್ತ ಕಲೆ ಹಾಕಿದರು ಎದುರಾಳಿಗಳನ್ನು ಬೌಲಿಂಗ್ ಮೂಲಕ ಕಟ್ಟಿ ಹಾಕಲು ಸಾಧ್ಯವಾಗದೆ ಪಂದ್ಯಗಳನ್ನು ಕೈಚೆಲ್ಲಿತ್ತು. ಇದೀಗ ತಂಡದಲ್ಲಿ ಬೌಲಿಂಗ್ ಉತ್ತಮವಾಗಿದೆ. ವಾಟ್ಸನ್ ಮತ್ತು ಚಲಾಲ್ ಎದುರಾಳಿ ತಂಡದ ಬ್ಯಾಟ್ ಮನ್ ವಿಕೆಟ್ ಕೀಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇನ್ನು ಕ್ರಿಸ್ ಜೋರ್ಡಾನ್, ಇಕ್ಬಾಲ್ ಅಬ್ದುಲ್ಲಾ ಮತ್ತು ಎಸ್ ಅರವಿಂದ್ ಬ್ಯಾಟ್ಸ್ ಮನ್ ಗಳನ್ನು ವಿಭೃಂಬಿಸಲು ಬಿಡದೆ ಕಟ್ಟಿಹಾಕುತ್ತಿದ್ದಾರೆ.

ಬಲಿಷ್ಠ ಬ್ಯಾಟಿಂಗ್ ಪಡೆ
ಆರ್ಸಿಬಿ ತಂಡದಲ್ಲಿ ಕ್ರಿಕೆಟ್ ನ ಪ್ರಖ್ಯಾತ ಸ್ಫೋಟಕ ಬ್ಯಾಟ್ಸ್ ಮನ್ ಗಳ ದಂಡೆ ಇದೆ. ಸದ್ಯ ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ದಾಖಲಿಸಿದ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇನ್ನು ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಅಬ್ಬರಿಸಬೇಕಿದೆ. ಒಂದು ವೇಳೆ ಕ್ರಿಸ್ ಗೇಯ್ಲ್ ಅಬ್ಬರಿಸಿದರೇ ತಂಡ 200ರ ಗಡಿದಾಡುವುದು ಕಷ್ಟವೇನಲ್ಲ.

ಕೊಹ್ಲಿಯ ಚಾಣಾಕ್ಷ ನಡೆ
ನಾಯಕ ವಿರಾಟ್ ಕೊಹ್ಲಿ ತಂಡದ ಆಟಗಾರರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಅಂಗಳದಲ್ಲಿ ನಿಂತು ಬೌಲರ್ ಗಳನ್ನು ಹುರಿದುಂಬಿಸುವ ಅವರ ಪರಿ ನಿಜಕ್ಕೂ ಪ್ರೇರಣದಾಯಕ. ಬ್ಯಾಟ್ಸ್ ಮನ್ ಗಳು ಬೌಂಡರಿ, ಸಿಕ್ಸರ್ ಸಿಡಿಸಿದಾಗ, ಬೌಲರ್ ಗಳು ವಿಕೆಟ್ ಕಿತ್ತಾಗ ಹೆಚ್ಚು ಸಂತೋಷಗೊಂಡು ಆಟಗಾರರನ್ನು ಅಭಿನಂದಿಸಿ ಅವರಲ್ಲಿ ಇನ್ನಷ್ಟು ಸ್ಪೂರ್ತಿಯನ್ನು ತುಂಬುತ್ತಾರೆ.

Comments are closed.