ಕರ್ನಾಟಕ

10 ದಿನದಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನೇರಿ ಸಾಧನೆ ಮಾಡಿದ ಹುಬ್ಬಳ್ಳಿ ಹುಡುಗಿ

Pinterest LinkedIn Tumblr

hubballi12

ಹುಬ್ಬಳ್ಳಿ: ಮೌಂಟ್ ಎವರೆಸ್ಟ್ ಶಿಖರವನ್ನು ಏರುವ ಮೂಲಕ ಹುಬ್ಬಳ್ಳಿಯ ಯುವತಿಯೊಬ್ಬಳು ಮಹಿಳೆಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾಳೆ. ಈ ಮೂಲಕ ತೊಟ್ಟಿಲು ತೂಗುವ ಕೈ-ಜಗತ್ತನ್ನೇ ತೂಗುತ್ತದೆ ಎಂಬುದನ್ನ ಈ ಯುವತಿ ಸಾಧಿಸಿ ತೋರಿಸಿದ್ದಾಳೆ.

hubballi1

ಜಿಲ್ಲೆಯ ವಿದ್ಯಾನಗರದ ನಿವಾಸಿ ಕಸ್ತೂರಿ ಎಂಬವರ ಮುದ್ದಿನ ಮಗಳು ನಂದಿತಾ ನಾಗನಗೌಡ ಇಂತಹದ್ದೊಂದು ಸಾಧನೆ ಮಾಡಿದ್ದಾಳೆ. ಹುಬ್ಬಳ್ಳಿಯಲ್ಲಿ ಎಂಜಿನಿಯರಿಂಗ್ ಓದಿದ್ದ ನಂದಿತಾ ಅಮೇರಿಕಾದಲ್ಲಿ ಎಂಬಿಎ ಪದವಿ ಪಡೆದಿದ್ದಾಳೆ. ಸಾಹಸ ಕ್ರೀಡೆಗಳಲ್ಲಿ ಸೈ ಎನ್ನಿಸಿಕೊಂಡಿರೋ ಈಕೆ ಗೋಡೆ ಹತ್ತೋದ್ರಲ್ಲಿ ಎತ್ತಿದ ಕೈ.

ಸಾಹಸ ಪ್ರಿಯೆ ನಂದಿತಾ ಸೇರಿದಂತೆ ಒಟ್ಟು 6 ಮಂದಿ ಮಹಿಳೆಯರು ಮೌಟ್ ಎವರೆಸ್ಟ್ ಶಿಖರವನ್ನ ಏರಲು ಹೋಗಿದ್ರು. ಈ ಎಲ್ಲಾ 6 ಮಂದಿ 10 ದಿನದಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನೇರಿ ಸಾಧನೆ ಮಾಡಿದ್ದಾರೆ.

Comments are closed.