ಕರ್ನಾಟಕ

64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮಂಡ್ಯದ ಗಂಡು ಅಂಬರೀಶ್

Pinterest LinkedIn Tumblr

ambi

ಬೆಂಗಳೂರು: ಕಲಿಯುಗ ಕರ್ಣ, ಮಂಡ್ಯದ ಗಂಡು, ಕನ್ವರ್ ಲಾಲ್ ಅಂತಾ ಕರಿಸಿಕೊಳ್ಳುವ ರೆಬಲ್ ಸ್ಟಾರ್ ಅಂಬರೀಶ್ 64ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ನೆಚ್ಚಿನ ನಟನ ಹುಟ್ಟುಹಬ್ಬಕ್ಕಾಗಿ ನಿನ್ನೆ ರಾತ್ರಿ ಜಯನಗರದಲ್ಲಿ ಇರುವ ಅಂಬಿ ಅವರ ಮನೆಯ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಅಲ್ಲದೆ ಮನೆಯ ಮಂದೆ ಅಂಬರೀಶ್ ಅವರ ದೊಡ್ಡ ದೊಡ್ಡ ಕಟೌಟ್‍ಗಳನ್ನು ಕಟ್ಟಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿ ಸಂಭ್ರಮಿಸಿದರು.

ಮಧ್ಯ ರಾತ್ರಿ 12 ಗಂಟೆ ಆಗುತಿದ್ದಂತೆ ಅಭಿಮಾನಿಗಳು ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಸಾವಿರಾರು ಅಭಿಮಾನಿಗಳ ಜೊತೆ ಕನ್ವರಲಾಲ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

Comments are closed.