ಕರಾವಳಿ

ಪ್ರಧಾನಿ ಮೋದಿಯವರನ್ನು ಭೇಟಿಯಾಗ ಬೇಕೇ…ಹೀಗೆ ಮಾಡಿ…!

Pinterest LinkedIn Tumblr

modi

ನವದೆಹಲಿ: ಕೇವಲ 20 ಪ್ರಶ್ನೆಗಳಿಗೆ ಉತ್ತರಿಸಿದರೆ ಸಾಕು ನಿಮಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ಲಭ್ಯವಾಗಲಿದೆ.

ಎನ್‍ಡಿಎ ಸರಕಾರ ಕುರಿತ ಸರಳ ಪ್ರಶ್ನೆಗಳಿಗೆ ನೀವು ಉತ್ತರಿಸಿದರೆ ಸಾಕು ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ಗಿಟ್ಟಿಸಿಕೊಳ್ಳವು ಜೊತೆಗೆ ಮೋದಿ ಸಹಿ ಮಾಡಿರುವ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.

ಕೇಂದ್ರ ಸರ್ಕಾರ ಮೋದಿ ಅವರನ್ನು ಭೇಟಿ ಮಾಡಬೇಕೆಂದಿರುವ ಅಭಿಮಾನಿಗಳಿಗೆ ಸ್ಪರ್ಧೆಯೊಂದನ್ನು ಆಯೋಜಿಸಿದೆ. ಎನ್‍ಡಿಎ ಸರ್ಕಾರ ಕೈಗೊಂಡಿರುವ ಹಲವಾರು ಯೋಜನೆಗಳನ್ನು ಒಳಗೊಂಡಿರುವ 20 ಪ್ರಶ್ನೆಗಳನ್ನು ಕೇಳಿದ್ದು, ಇದಕ್ಕೆ 5 ನಿಮಿಷದೊಳಗೆ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಮೋದಿ ಅವರನ್ನು ಭೇಟಿ ಮಾಡಲು ಸಾಧ್ಯವಿದೆ.

ಇದಕ್ಕಾಗಿ ಆನ್‍ಲೈನ್‍ನಲ್ಲಿ www.mygov.in ವೆಬ್‍ಸೈಟ್‍ನಲ್ಲಿ ಸರ್ಕಾರ ಕ್ವಿಜ್ ಆಯೋಜಿಸಿದ್ದು ಈ ಮೂಲಕ ಸಾರ್ವಜನಿಕರು ಎನ್‍ಡಿಎ ಸರ್ಕಾರದ ಬಗ್ಗೆ ಎಷ್ಟು ಮಾಹಿತಿ ತಿಳಿದಿದ್ದಾರೆ ಎನ್ನುವುದನ್ನು ತಿಳಿದುಕೊಂಡು ತನ್ನ ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಭೇಟಿ ಬಚಾವ್, ಭೇಟಿ ಪಡಾವ್, ಸ್ವಚ್ಛ ಭಾರತ್ , ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಮನ್ ಕೀ ಬಾತ್ ಸೇರಿದಂತೆ ಪ್ರಧಾನಿ ಕೈಗೊಂಡಿರುವ ಹಲವು ಯೋಜನೆಗಳ ಪ್ರಶ್ನೆಗಳನ್ನು ಇಲ್ಲಿ ಕೇಳಲಾಗಿದೆ.

Comments are closed.