ಕರಾವಳಿ

ಅತ್ಯಾಚಾರಕ್ಕೆ ಒಳಗಾದವರ ಸಾಂತ್ವಾನಕ್ಕೆ ‘ಸಖೀ ಯೋಜನೆ’; ಕೇಂದ್ರದ ಯೋಜನೆಗೆ ಉಡುಪಿಯಲ್ಲಿ ಉಮಾಶ್ರೀ ಶಂಕು ಸ್ಥಾಪನೆ

Pinterest LinkedIn Tumblr

ಉಡುಪಿ: ಅತ್ಯಾಚಾರಕ್ಕೆ, ದೌರ್ಜ್ಯನ್ಯಕ್ಕೆ ಒಳಗಾದ ಮಹಿಳೆಯರ ಸಾಂತ್ವಾನ ಹಾಗೂ ನೆರವಿಗಾಗಿ ಸಖಿ( ಒನ್ ಸ್ಟಾಪ್ ಸೆಂಟರ್ ) ಯೋಜನೆ ಕೇಂದ್ರ ಸರಕಾರ ಜಾರಿಗೆ ತಂದಿದ್ದು ಈ ಸೆಂಟರ್ ಸ್ಥಾಪನೆಗೆ ಉಡುಪಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವೆ ಉಮಾಶ್ರೀ ಶಂಕುಸ್ಥಾಪನೆಯನ್ನು ನೆರವೇರಿಸಿದರು.

uDupi_Sakhi Yojane_Umashri visit (1) uDupi_Sakhi Yojane_Umashri visit (2) uDupi_Sakhi Yojane_Umashri visit (3) uDupi_Sakhi Yojane_Umashri visit (4) uDupi_Sakhi Yojane_Umashri visit (5)

ಉಡುಪಿಯ ನಿಟ್ಟೂರು ಬಳಿ ಸುಮಾರು 45.87 ಲಕ್ಷ ರೂ ವೆಚ್ಚದಲ್ಲಿ ಈ ಕೇಂದ್ರ ಸರ್ಕಾರದ ಯೋಜನೆ ಅನುಷ್ಟಾನಗೊಳ್ಳಲಿದ್ದು ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ ಸಚಿವೆ ಉಮಾಶ್ರೀ ಈ ಯೋಜನೆಯನ್ನು ದೇಶದಲ್ಲಿ ಮೊದಲು ಪ್ರಾರಂಭಿಸಿದ ಕೀರ್ತಿ ರಾಜ್ಯಸರಕಾರಕ್ಕೆ ಸಲ್ಲುತ್ತದೆ. ಕೇಂದ್ರ ಯೋಜನೆ ಹಾಕುವ ಮೊದಲೇ ಪ್ರತೀ ಸರಕಾರಿ ಆಸ್ಪತ್ರೆಗಳಲ್ಲಿ ಈ ಪದ್ದತಿಯನ್ನು 2015ರಲ್ಲೇ ರಾಜ್ಯ ಸರ್ಕಾರ ಆರಂಭಿಸಿತ್ತು. ಈ ಮೂಲಕ ರಾಜ್ಯ ಸರಕಾರ ಅತ್ಯಾಚಾರಕ್ಕೆ, ದೌರ್ಜ್ಯನ್ಯಕ್ಕೆ ಒಳಗಾದವರ ನೋವಿಗೆ ಸ್ಪಂದಿಸಿದೆ ಎಂದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಮೊದಲಾದವರು ಉಪಸ್ಥಿತರಿದ್ದರು.

Comments are closed.