
ಬೆಂಗಳೂರು: ಐಪಿಎಲ್ 9ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗುತ್ತಿದ್ದಂತೆ ಈಗ ಅಭಿಮಾನಿಗಳಿಗೆ ಶಾಕಿಂಗ್ ನೀಡಬಲ್ಲ ಸುದ್ದಿ ಹೊರಬಿದ್ದಿದೆ.
ನೆಚ್ಚಿನ ಆರ್‍ಸಿಬಿ ಫೈನಲ್‍ಗೆ ಬಂದಿದ್ದೆ ತಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಖರೀದಿಸಲು ಮುಂದಾಗಿದ್ದು ಈಗಾಗಲೇ ಟಿಕೆಟ್ ಮಾರಾಟ ಸಂಪೂರ್ಣವಾಗಿ ಖಾಲಿಯಾಗಿದೆ. ಖಾಲಿಯಾದ್ರೂ ಅಭಿಮಾನಿಗಳು ಬ್ಲ್ಯಾಕ್‍ನಲ್ಲಿ ಟಿಕೆಟ್ ಖರೀದಿಸುತ್ತಿದ್ದಾರೆ.
ಟಿಕೆಟ್‍ಗೆ ನಿಗದಿಯಾದ ಬೆಲೆಗಿಂತ ಐದು ಪಟ್ಟು ಹೆಚ್ಚು ಹಣ ಕೊಟ್ಟು ಟಿಕೆಟನ್ನು ಬ್ಲ್ಯಾಕ್‍ನಲ್ಲಿ ಅಭಿಮಾನಿಗಳು ಪಡೆಯುತ್ತಿದ್ದು, ಹೀಗೆ ಪಡೆಯುತ್ತಿರುವ ಟೆಕೆಟ್‍ಗಳಲ್ಲಿ ಬಹುತೇಕ ಟಿಕೆಟ್‍ಗಳು ನಕಲಿ ಎನ್ನುವುದು ಬೆಳಕಿಗೆ ಬಂದಿದೆ.
700 ರೂ. ಟಿಕೆಟ್ 5 ಸಾವಿರ ರೂ.ಗೆ ದಲ್ಲಾಳಿಗಳು ಮಾರಾಟ ಮಾಡುತ್ತಿದ್ದಾರೆ. ಒರಿಜಿನಲ್ ಟಿಕೆಟ್‍ನಂತೆ ನಕಲಿ ಟಿಕೆಟ್‍ಗಳನ್ನು ಮುದ್ರಿಸಿ ಇವರು ಮಾರಾಟ ಮಾಡುತ್ತಿದ್ದು, ಹೀಗೆ ಮಾರಾಟವಾಗುತ್ತಿರುವ ಟಿಕೆಟ್‍ನಲ್ಲಿ ಬಹುತೇಕ ಟಿಕೆಟ್‍ಗಳು ನಕಲಿಯಾಗಿದ್ದು ಅಭಿಮಾನಿಗಳು ಈ ವಿಚಾರ ತಿಳಿಯದೇ ಖರೀದಿಸುತ್ತಿದ್ದಾರೆ.
ಈ ಸಂಬಂಧ ಪೊಲೀಸರು ಎಚ್ಚೆತ್ತುಕೊಂಡಿದ್ದು ನಕಲಿ ಟಿಕೆಟ್‍ಮಾರಾಟ ಮಾಡುವವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಭಾನುವಾರ ರಾತ್ರಿ 8 ಗಂಟೆಗೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.
Comments are closed.