ಕರಾವಳಿ

ಪೊಲೀಸರ ಸಾಮೂಹಿಕ ರಜಾ ಚಳುವಳಿ; ಬೆಂಬಲ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಉಡುಪಿ: ವಿವಿಧ ಬೇಡಿಕೆಯನ್ನು ಮುಂದಿಟ್ಟು ಪೊಲೀಸರು ನಡೆಸಲು ಉದ್ದೇಶಿಸಿರುವ ಸಾಮೂಹಿಕ ರಜಾ ಚಳುವಳಿಗೆ ವಿಧಾನಪರಿಷತ್ ಸದಸ್ಯ , ಬಿಜೆಪಿ ಮುಖಂಡ ಕೋಟಾ ಶ್ರೀನಿವಾಸ ಪೂಜಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಾತ್ರ ಅಲ್ಲದೇ ಸರಕಾರ ಇವರ ನ್ಯಾಯಯುತ ಬೇಡಿಕೆಯನ್ನು ಇಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.

Ports-Minister-Kota-Srinivas-Poojary

ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬೇರೆರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿರುವ ಪೊಲೀಸರಿಗೆ ನೀಡುವ ಮೂಲ ವೇತನ ಕಡಿಮೆ. ೫೫ ದಿನಗಳ ತನಕ ಪೊಲೀಸರಿಗೆ ಸರಕಾರಿ ರಜೆ ಇದ್ದು ೫೫ ದಿನ ಸಂಬಳವನ್ನು ನೀಡಬೇಕು, ಸಿಬ್ಬಂದಿಗಳಿಗೆ ವಾರದ ಭತ್ಯೆ ಮೊತ್ತವನ್ನು ದಿನದ ಸಂಬಳಕ್ಕೆ ನಿಗದಿಪಡಿಸಬೇಕು. ಪ್ರಯಾಣ ಭತ್ಯೆಮೊತ್ತವನ್ನು ದಿನವೊಂದಕ್ಕೆ ೩೦೦ ರೂಪಾಯಿಗೆ ನಿಗದಿ ಪಡಿಸಬೇಕು , ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು ಹೀಗೆ ಪೊಲೀಸರ ಅನೇಕ ಬೇಡಿಕೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಆಗ್ರಹಿಸಿದರು.

Comments are closed.