ಕರ್ನಾಟಕ

ಪಿಯು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿ ಮಗ ಸಿಇಟಿ ಪರೀಕ್ಷೆಯಲ್ಲಿ ಮಾಡಿದ ಸಾಧನೆಯನ್ನೊಮ್ಮೆ ನೋಡಿ…!

Pinterest LinkedIn Tumblr

exame

ಬೆಂಗಳೂರು: ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ವಿಶೇಷಾಧಿಕಾರಿಯಾಗಿದ್ದ ಓಬಳರಾಜ್ ಪುತ್ರ ಪಿಯು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿದ್ದರೆ ಸಿಇಟಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡಿದ್ದಾನೆ.

ಹೌದು. ಗೌರವ್ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 552 ಅಂಕ ತೆಗೆದಿದ್ದರೆ, ಸಿಇಟಿಯಲ್ಲಿ ಎಂಜಿನಿಯರಿಂಗ್‍ನಲ್ಲಿ 22,352 ಶ್ರೇಯಾಂಕ ತೆಗೆದಿದ್ದಾನೆ. ಸಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಿಗದ ಕಾರಣ ಭೌತಶಾಸ್ತ್ರ 16, ರಸಾಯನಶಾಸ್ತ್ರ 31, ಜೀವಶಾಸ್ತ್ರ 30, ಗಣಿತ 24 ಅಂಕ ತೆಗೆದಿದ್ದಾನೆ.

ಒಂದು ವೇಳೆ ತಂದೆ ಅರೆಸ್ಟ್ ಆಗದೇ ಇದ್ದಲ್ಲಿ ಸಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಹ ಸೋರಿಕೆ ಆಗುತ್ತಿತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ಪಿಯುಸಿ ಮೂರು ವಿಷಯಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕವನ್ನು ತೆಗೆದಿದ್ದ ಗೌರವ್ ರಸಾಯನಶಾಸ್ತ್ರ ಮರು ಪರೀಕ್ಷೆಯಲ್ಲಿ ಮಾತ್ರ 85 ಅಂಕವನ್ನು ಪಡೆದಿದ್ದ.

ಗೌರವ್ ಪಿಯುಸಿಯಲ್ಲಿ ಪಡೆದ ಅಂಕಗಳು
ಇಂಗ್ಲಿಷ್ : 85
ಸಂಸ್ಕೃತ : 91

ಭೌತಶಾಸ್ತ್ರ : 98(68 ಥಿಯರಿ + 30 ಪ್ರಾಕ್ಟಿಕಲ್)
ರಸಾಯನಶಾಸ್ತ್ರ : 85(55 ಥಿಯರಿ +30 ಪ್ರಾಕ್ಟಿಕಲ್)
ಗಣಿತ : 99
ಜೀವಶಾಸ್ತ್ರ : 94( 64 ಥಿಯರಿ +30 ಪ್ರಾಕ್ಟಿಕಲ್)

Comments are closed.