ಅಂತರಾಷ್ಟ್ರೀಯ

15 ವರ್ಷದ ಬಾಲಕನ ಹೊಟ್ಟೆಯಲ್ಲಿ ಅವಳಿ ಭ್ರೂಣ ಪತ್ತೆ!

Pinterest LinkedIn Tumblr

32

ಕೌಲಾಲಂಪುರ: ಮಲೇಷ್ಯಾದ 15 ವರ್ಷ ಬಾಲಕನ ಹೊಟ್ಟೆಯಲ್ಲಿ ಅಪರೂಪದ ಅಪರೂಪ ಎನ್ನುವುಂತೆ ಅವಳಿ ಭ್ರೂಣ ಪತ್ತೆಯಾಗಿದೆ. 15 ವಷದ ಮೊಹಮ್ಮದ್ ಝುಲ್ ಶಹ್ರಿಲ್ ಸಾಯಿದಿನ್‍ಗೆ ಕಳೆದ 4 ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಪೋಷಕರು ಕೆಲ ದಿನಗಳ ಹಿಂದೆ ಆತನನ್ನು ಆಸ್ಪತ್ರೆಗೆಗೆ ದಾಖಲು ಮಾಡಿದಾಗ ವೈದ್ಯರಿಗೆ ಸಾಯಿದಿನ್ ಹೊಟ್ಟೆಯಲ್ಲಿ ಭ್ರೂಣ ಬೆಳೆಯುತ್ತಿರುವುದು ಕಂಡಿದೆ. ಕೂಡಲೇ ವೈದ್ಯರು ಆಪರೇಷನ್ ಮಾಡಿ ಭ್ರೂಣವನ್ನು ಹೊರ ತೆಗೆದಿದ್ದಾರೆ.

ಸಾಯಿದಿನ್ ತಾಯಿ ಹೇಳುವಂತೆ ಹೊಟ್ಟೆಯಲ್ಲಿದ್ದ ಭ್ರೂಣ ಅರ್ಧ ಭಾಗ ಬೆಳವಣಿಗೆಯಾಗಿತ್ತು, ಬಾಯಿ ಮತ್ತು ಮೂಗು ಬೆಳವಣಿಗೆ ಆಗಿರಲಿಲ್ಲ ಎಂದು ಹೇಳಿದ್ದಾಳೆ. ಹೊಟ್ಟೆಯಲ್ಲಿ ತೆಗೆದ ಭ್ರೂಣವನ್ನು ಸಾಯಿದಿನ್ ಕುಟುಂಬಸ್ಥರು ಅವರ ಸಂಪ್ರದಾಯದಂತೆ ಸ್ಮಶಾನದಲ್ಲಿ ಸಮಾಧಿ ಮಾಡಿದ್ದಾರೆ.

ಅಪರೂಪದಲ್ಲಿ ಅಪರೂಪ ಪ್ರಕರಣ ಇದಾಗಿದ್ದು ಹುಟ್ಟುವ 5 ಕೋಟಿ ಮಕ್ಕಳಲ್ಲಿ ಈ ರೀತಿಯ ಒಂದು ಪ್ರಕರಣ ಬೆಳಕಿಗೆ ಬರುತ್ತದೆ. ಅಷ್ಟೇ ಅಲ್ಲದೇ ಈ ರೀತಿಯ ಜನಿಸುವ ಮಕ್ಕಳು ಹೆಚ್ಚು ಸಮಯ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Comments are closed.