ಕರಾವಳಿ

ಕುಂದಾಪುರ(ಬೆಳ್ವೆ): ಕುಡುಕರಿಬ್ಬರ ಜಗಳ; ಚೂರಿ ಶಂಕರನಿಗೆ ಚೂರಿ ಇರಿತ, ಗಾಯಾಳು ಆಸ್ಪತ್ರೆಗೆ ದಾಖಲು

Pinterest LinkedIn Tumblr

ಕುಂದಾಪುರ: ಆಮ್ಲೇಟ್ ಅಂಗಡಿಯೊಂದರಲ್ಲಿ ನಡೆದ ಕುಡುಕರ ಜಗಳವು ವ್ಯಕ್ತಿಯೋರ್ವನಿಗೆ ಚೂರಿ ಇರಿಯುವ ಹಂತಕ್ಕೆ ತೆರಳಿದ ಘಟನೆ ಕುಂದಾಪುರ ತಾಲೂಕಿನ ಬೆಳ್ವೆ ಸಮೀಪದ ಆಲ್ಬಾಡಿ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.

ಶಂಕರ ಅಲಿಯಾಸ್ ಚೂರಿ ಶಂಕರ್(52) ಎಂಬಾತನೇ ಎದುರಾಳಿಯಿಂದ ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ. ಆತನೊಂದಿಗೆ ಜಗಳಕ್ಕಿಳಿದ ಸುರೇಶ್ ಎಂಬಾತ ಚೂರಿ ಹಾಕಿದ ಖತರ್ನಾಕ್.

Kundapura_Albadi_Choori Iritha (8) Kundapura_Albadi_Choori Iritha (7) Kundapura_Albadi_Choori Iritha (6) Kundapura_Albadi_Choori Iritha (2) Kundapura_Albadi_Choori Iritha (3) Kundapura_Albadi_Choori Iritha (5) Kundapura_Albadi_Choori Iritha (9) Kundapura_Albadi_Choori Iritha (4) Kundapura_Albadi_Choori Iritha (1) Kundapura_Albadi_Choori Iritha (10)

ಘಟನೆ ವಿವರ: ಗಾರೆ ಕೆಲಸ ಮಾಡಿಕೊಂಡಿದ್ದ ಈ ಇಬ್ಬರು ಆಲ್ಬಾಡಿಯ ಒಂಬತ್ತನೇ ಮೈಲಿಕಲ್ಲು ಎಂಬಲ್ಲಿನ ಗೂಡಂಗಡಿಯೊಂದಕ್ಕೆ ಆಮ್ಲೇಟ್ ತಿನ್ನಲು ಶನಿವಾರ ಸಂಜೆ ವೇಳೆಗೆ ತೆರಳಿದ್ದರು. ಇಬ್ಬರು ಕೂಡ ಕಂಠಮಟ್ಟ ಕುಡಿದು ಅಮ್ಲೇಟ್ ತಿನ್ನಲು ಬಂದಿದ್ದು ಅಂಗಡಿಯಲ್ಲಿ ಇಬ್ಬರಿಗೂ ಯಾವುದೋ ಕಾರಣಕ್ಕಾಗಿ ಜಗಳ ಆರಂಭವಾಗಿದೆ. ಮೊದಮೊದಲು ಮಾತಿನಲ್ಲಿದ್ದ ಜಗಳ ತಾರಕಕ್ಕೇರಿ ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಬಂದ ಕಾರಣ ಅಂಗಡಿಯವರು ಹಾಗೂ ಸ್ಥಳಿಯರು ಇಬ್ಬರನ್ನು ತಪ್ಪಿಸಿಬಿಟ್ಟಿದ್ದಾರೆ. ಆದರೇ ಅಂಗಡಿಯಿಂದ ಹೊರತೆರಳಿದ ಇಬ್ಬರೂ ಬೀದಿಯಲ್ಲಿ ಮಾರಾಮಾರಿಗೆ ಮುಂದಾಗಿದ್ದು ಕೋಪದಲ್ಲಿ ಅಂಗಡಿಯೊಳಕ್ಕೆ ಬಂದ ಸುರೇಶ ಈರುಳ್ಳಿ ಕತ್ತರಿಸುವ ಚಾಕು ಕೊಂಡೊಯ್ದು ಶಂಕರನ ಹಣೆ, ಗಲ್ಲ ಹಾಗೂ ಬಾಯಿ ಭಾಗಕ್ಕೆ ಬಲವಾಗಿ ಇರಿದು ಓಡಿಹೋಗಿದ್ದಾನೆ.

ತೀವ್ರ ರಕ್ತಸರಾವದಿಂದ ಒದ್ದಾಡುತ್ತಿದ್ದ ಶಂಕರನನ್ನು ಅಂಗಡಿ ಮಾಲೀಕ ಸ್ಥಳಿಯರ ಸಹಕಾರದೊಂದಿಗೆ ೧೦೮ ವಾಹನದಲ್ಲಿ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದಾನೆ. ವಿಪರೀತ ರಕ್ತಸ್ರಾವವಾದ ಕಾರಣ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇನ್ನು ಶಂಕರ ಹಾಗೂ ಸುರೇಶ್ ದೂರದ ಸಂಬಂಧಿಗಳಾಗಿದ್ದು ಇಬ್ಬರು ಕೂಡ ಅಲ್ಬಾಡಿ ಭಾಗದಲ್ಲಿ ಪುಂದರಾಗಿದ್ದರು ಎನ್ನಲಾಗಿದೆ. ಶಂಕರ ತನ್ನ ಬಳಿ ಯಾವಾಗಲೂ ಚೂರಿ ಒಂದನ್ನು ಹಿಡಿದುಕೊಂಡು ತಿರುಗುವ ಮೂಲಕ ಆ ಹಾಗದಲ್ಲಿ ಚೂರಿ ಶಂಕರ ಎಂದೇ ಕುಖ್ಯಾತಿ ಪಡೆದಿದ್ದ.

ಚೂರಿ ಹಾಕಿ ಪರಾರಿಯಾದ ಸುರೇಶನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ.

ಘಟನೆ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.