ಕರಾವಳಿ

ನಿಯಂತ್ರಣ ತಪ್ಪಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ : ಚಾಲಕ ಪಾರು.

Pinterest LinkedIn Tumblr

tokottu_car_acdent_2

ಮಂಗಳೂರು,ಮೇ.28: ಸ್ಪಿಪ್ಟ್ ಕಾರೊಂದು ತನ್ನ  ನಿಯಂತ್ರಣ  ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ಮುಂಜಾನೆ ಸುಮಾರು 3 ಗಂಟೆ ವೇಳೆಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಕಾರು ಚಾಲಕ ಇಸ್ಮಾಯಿಲ್ (20) ಎಂದು ಗುರುತಿಸಲಾಗಿದೆ .

tokottu_car_acdent_3 tokottu_car_acdent_4 tokottu_car_acdent_5 tokottu_car_acdent_6 tokottu_car_acdent_7

ಕಾರೊಂದು ಕೇರಳದಿಂದ ತೊಕ್ಕೊಟ್ಟಿನ ಕಡೆ ವೇಗವಾಗಿ ಚಲಾಯಿಸಿ ಬಂದು ರಸ್ತೆ ವಿಭಾಜಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದಿದ್ದು, ಪೊಲೀಸರು ಮರದ ರೀಪಿನಿಂದ ಎತ್ತಿ ಹಿಡಿದು ರಸ್ತೆ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಘಟನೆಗೆ ಸಂಬಂಧಿಸಿ ಮೆಸ್ಕಾಂ ಸ್ಥಿರ ದೂರವಾಣಿಗೆ ಫೋನಾಯಿಸಿದರೂ ಕರೆ ಸ್ವೀಕರಿಸದ ಸಿಬ್ಬಂದಿಗಳನ್ನು ಕುದ್ದಾಗಿ ಪೊಲೀಸರೇ ತೆರೆಳಿ ಸಿಬ್ಬಂಧಿಗಳನ್ನು ಸ್ಥಳ್ಕ್ಕೆ ಕರೆ ತರಬೇಕಾಯಿತು.

Comments are closed.