ಕರಾವಳಿ

ಕೊಂಕಣಿ ಸಂಗೀತಕಾರ ಲಾರೆನ್ಸ್ ಸಲ್ಡಾನ್ಹಾಗೆ ಪತ್ನಿ ವಿಯೋಗ

Pinterest LinkedIn Tumblr

Peliciana-Lawrence-Saldanha

ಮುಂಬಯಿ, ಮೇ.25: ಮುಂಬಯಿಯ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ಸಾಗಿಸುತ್ತಿರುವ ಸಂಚಾರಿ ಪೋಲಿಸ್ ಅಧಿಕಾರಿ, ಕೊಂಕಣಿ ಸಂಗೀತ ಲೋಕದ ಮೇರು ಪ್ರತಿಭೆ, ವಿಶ್ವದ ಉದ್ದಗಲದ ಅನೇಕ ರಾಷ್ಟ್ರಗಳಲ್ಲಿ ಕೊಂಕಣಿ ಮಾತ್ರವಲ್ಲದೆ ತುಳು, ಕನ್ನಡ, ಮರಾಠಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸಂಗೀತ ರಸಮಂಜರಿ (ಆರ್ಕೇಸ್ಟ್ರಾ)ಗಳನ್ನು ಪ್ರಸ್ತುತ ಪಡಿಸಿ `ಲಾರೆನ್ಸ್ ನೈಟ್’ ಖ್ಯಾತಿದ ಕೊಂಕಣಿ ಕೀರ್ ಬಿರುದಾಂಕಿತ ಲಾರೆನ್ಸ್ ಸಲ್ಡಾನ್ಹಾ (ಸಿದ್ಧಕಟ್ಟೆ-ಬಂಟ್ವಾಳ) ಅವರ ಧರ್ಮಪತ್ನಿ ಫೆಲಿಷಿಯಾನ ಎಲ್.ಸಲ್ಡಾನ್ಹಾ (೬೭.) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಕಳೆದ (21.04.2016) ಶನಿವಾರ ಮುಂಜಾನೆ ಮುಲುಂಡ್ ಪೂರ್ವದ ಚಂದ್ರಗಂಗಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Peliciana-L.Saldanha-Family

ಭಾಂಡೂಪ್ ಪಶ್ಚಿಮದ ಜಂಗಲ್ ಮಂಗಲ್ ರಸ್ತೆಯಲ್ಲಿನ ನಿಲೀಮಾ ಅಪಾರ್ಟ್‌ಮೆಂಟ್ ನಿವಾಸಿ ಆಗಿದ್ದ ಮೃತರು ಪತಿ ಲಾರೆನ್ಸ್ ಸಲ್ಡಾನ್ಹಾ, ಒಂದು ಗಂಡು (ರೋಶನ್ ಸಲ್ಡಾನ್ಹಾ), (ಸೋನಾಲಿ) ಸೊಸೆ ಶಾನನ್ (ಮೊಮ್ಮಗ) ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಅದೇ ದಿನ ಸಂಜೆ ಹೋಲಿ ಟ್ರಿನಿಟಿ ಚರ್ಚ್ ಪೊವಾಯಿ ಅಲ್ಲಿ ನೆರವೇರಿಸಲಾಗಿದ್ದು ನೂರಾರು ಬಂಧುಮಿತ್ರರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಸಂಪರ್ಕ: ಲಾರೆನ್ಸ್ ಸಲ್ಡಾನ್ಹಾ – 09920652513 (ಭಾಂಡೂಪ್, ಮುಂಬಯಿ)

ವರದಿ / ಚಿತ್ರ : ರೋನ್ಸ್ ಬಂಟ್ವಾಳ್

Comments are closed.