ಕರಾವಳಿ

ಪಿಯುಸಿ ಫಲಿತಾಂಶ : ಆಳ್ವಾಸ್ ಪಿ ಯು ಕಾಲೇಜಿನ ದಕ್ಷಾ ಜೈನ್ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ / ಜಿಲ್ಲೆಯ ಸಾಧಕರ ವಿವರ

Pinterest LinkedIn Tumblr

Puc_Toper_Mlore

ಮಂಗಳೂರು,ಮೇ 25; ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಮೂಡಬಿದ್ರೆ ಆಳ್ವಾಸ್ ಪಿ ಯು ಕಾಲೇಜಿನ ದಕ್ಷಾ ಜೈನ್ ಅವರಿಗೆ ಮುಂದೆ ಐ.ಎ.ಎಸ್ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಅವರು 593 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ದಕ್ಷಾ ಜೈನ್ ಶೇಕಡ 98.83 ಅಂಕ ಪಡೆದಿದ್ದು ಬ್ಯಸಿನೆಸ್ ಸ್ಟಡೀಸ್ ನಲ್ಲಿ 100 ಅಂಕ, ಅಕೌಂಟೆನ್ಸಿಯಲ್ಲಿ 100 ಅಂಕ, ಸ್ಟಾಟಿಟಿಕ್ಸ್‌ನಲ್ಲಿ 100 ಅಂಕ, ಬೇಸಿಕ್ ಮ್ಯಾಥಮ್ಯಾಟಿಕ್ಸ್‌ನಲ್ಲಿ 100 ಅಂಕ ಇಂಗ್ಲೀಷ್‌ನಲ್ಲಿ 94 ಅಂಕ,ಸಂಸ್ಕೃತದಲ್ಲಿ 99 ಅಂಕವನ್ನು ಪಡೆದುಕೊಂಡಿದ್ದಾರೆ.

ಮೂಡಬಿದ್ರೆಯ ಪ್ರವೀಣ್ ಚಂದ್ರ ಮತ್ತು ಮಲ್ಲಿಕಾ ದಂಪತಿಯ ಪುತ್ರಿಯಾಗಿದ್ದಾರೆ. ಯಾವುದೆ ಕೋಚಿಂಗ್ ತೆಗೆದುಕೊಳ್ಳದೆ ಕೇವಲ ಕಾಲೇಜಿನ ಶಿಕ್ಷಣ ಪಡೆದು ಈ ಸಾಧನೆ ಮಾಡಿದ್ದಾರೆ.

ಪಿಯುಸಿ ವಿಜ್ಞಾನದಲ್ಲಿ ಅತ್ಯಧಿಕ ಅಂಕ ಪಡೆದ ಎಕ್ಸ್‌ಪರ್ಟ್ ವಿದ್ಯಾರ್ಥಿನಿ ವೈಷ್ಣವಿ ಬಲ್ಲಾಳ್‌ಗೆ ವೈದ್ಯೆಯಾಗುವ ಗುರಿ

ವೈಷ್ಣವಿ ಬಲ್ಲಾಳ್ :

ಮಂಗಳೂರು : ಪಿಯುಸಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಎಕ್ಸ್‌ಪರ್ಟ್ ಪಿ ಯು ಕಾಲೇಜಿನ ಪಿಸಿಎಂಬಿ ವಿದ್ಯಾರ್ಥಿನಿ ವೈಷ್ಣವಿ ಬಲ್ಲಾಳ್ ಮುಂದೆ ವೈದ್ಯೆಯಾಗುವ ಗುರಿಯನ್ನಿಟ್ಟುಕೊಂಡಿದ್ದಾರೆ.

ವೈಷ್ಣವಿ ಬಲ್ಲಾಳ್ 600 ರಲ್ಲಿ 590 ಅಂಕವನ್ನು ಗಳಿಸಿದ್ದು ಕೆಮಿಸ್ಟ್ರಿ, ಬಯೋಲಜಿ, ಇಂಗ್ಲೀಷ್, ಗಣಿತ, ಸಂಸ್ಕೃತದಲ್ಲಿ ತಲಾ 100 ಅಂಕವನ್ನು ಪಡೆದರೆ ಇಂಗ್ಲೀಷ್‌ನಲ್ಲಿ 90 ಅಂಕವನ್ನು ಪಡೆದಿದ್ದಾರೆ. ಜೈಲ್‌ರೋಡ್ ನಿವಾಸಿ ಡಾ.ರಾಜೇಶ್ ಬಲ್ಲಾಳ್ ಮತ್ತು ವಸುಂದರ ಬಲ್ಲಾಳ್ ಪುತ್ರಿಯಾಗಿದ್ದಾರೆ.

ವೈಷ್ಣವಿ ಬಲ್ಲಾಳ್ ಅವರು ಇಂಗ್ಲೀಷ್ ವಿಷಯದ ಉತ್ತರಪತ್ರಿಕೆಯನ್ನು ಮರುವೌಲ್ಯಮಾಪನ ಮಾಡಲು ನಿರ್ಧರಿಸಿದ್ದಾರೆ. ಇಂಗ್ಲೀಷ್ ನಲ್ಲಿ ಅವರು 96 ಅಂಕದ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ 90 ಅಂಕ ಬಂದಿರುವುದರಿಂದ ಮರುವೌಲ್ಯಮಾಪನಕ್ಕೆ ನಿರ್ಧರಿಸಿದ್ದಾರೆ.

ಪಿಯುಸಿ ಫಲಿತಾಂಶ:

ಅಲ್‌ಮದೀನ ಮಹಿಳಾ ಪದವಿಪೂರ್ವ ಕಾಲೇಜಿಗೆ 97 ಶೇಕಡ ಮಂಗಳೂರು,ಮೇ.25:ಪಿಯುಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ನರಿಂಗಾನದ ಅಲ್‌ಮದೀನ ಮಹಿಳಾ ಪದವಿಪೂರ್ವ ಕಾಲೇಜು 97 ಶೇಕಡ ಅಂಕ ಪಡೆದು ಸಾಧನೆಗೈದಿದೆ.

ಇಲ್ಲಿನ 30 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು ಇದರಲ್ಲಿ 29 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಓರ್ವ ವಿದ್ಯಾರ್ಥಿನಿ ಅನುತ್ತೀರ್ಣರಾಗಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಆಯಿಷತ್ ಸಬಿನಾ 541 ಅಂಕವನ್ನು ಪಡೆದು ಕಾಲೇಜಿನಲ್ಲಿ ಅತ್ಯಧಿಕ ಅಂಕವನ್ನು ಗಳಿಸಿದ್ದಾರೆ.

ದ್ವಿತೀಯ ಪಿಯುಸಿ – ಜಿಲ್ಲೆಯ ಸಾಧಕರು :

ಆಬಿದಾ ಶಮಾಗೆ ಡಿಸ್ಟಿಂಕ್ಷನ್  :,ಮಂಗಳೂರು ಸೈಂಟ್ ಆನ್ಸ್ ಮಹಿಳೆಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಆಬಿದಾ ಶಮಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 551 ಅಂಕಗಳೊಂದಿಗೆ 92 ಶೇ. ಫಲಿತಾಂಶ ದಾಖಲಿಸಿ ಡಿಸ್ಟಿಂಕ್ಷನ್ನ್ಲ್ಲಿ ತೇರ್ಗಡೆ ಹೊಂದಿದ್ದಾಳೆ.
ಈಕೆ ಬಿ.ಸಿ.ರೋಡು-ಪರ್ಲಿಯಾ ನಿವಾಸಿ ಉಮ್ಮರ್ ಶರೀಫ್ ಹಾಗೂ ರಶೀದಾ ದಂಪತಿಗಳ ಪುತ್ರಿ.

ಮುಹಮ್ಮದ್ ಸುಹೈಲ್‌ಗೆ 562 ಅಂಕಗಳು :ದ್ವಿತೀಯ ಪಿಯು ಪರೀಕ್ಷೆಯಲ್ಲಿ ನಗರದ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಸುಹೈಲ್ 600ರಲ್ಲಿ 562 ಅಂಕಗನ್ನು ಪಡೆದು ವಿಶೇಷ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಸ್ಟಾಟಿಸ್ಟಿಕ್ಸ್‌ನಲ್ಲಿ 93, ಫಿಸಿಕ್ಸ್‌ನಲ್ಲಿ 98, ಕೆಮಿಸ್ಟ್ರಿಯಲ್ಲಿ 96, ಗಣಿತದಲ್ಲಿ 98, ಇಂಗ್ಲೀಷ್‌ನಲ್ಲಿ 85, ಮತ್ತು ಹಿಂದಿ ಭಾಷಾ ವಿಷಯದಲ್ಲಿ 92 ಅಂಕಗಳನ್ನು ಪಡೆದಿದ್ದಾರೆ. ಇವರು ಅಬ್ದುಲ್ ಹಮೀದ್ ಮತ್ತು ಹಸೀನಾ ದಂಪತಿಯ ಪುತ್ರ.

ವರ್ಣಿತಾ ಜೈನ್‌ಗೆ 571 ಅಂಕಗಳು : ಎಕ್ಸಲೆಂಟ್ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ವರ್ಣಿತಾ ಎಚ್.ಜೈನ್ 571 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಅಳಿಯೂರು ನಿವಾಸಿ ಹರ್ಷೇಂದ್ರ ಜೈನ್ ಕುದ್ರೆಮುಖ ಮತ್ತು ಶಾಲಿನಿ ಹರ್ಷೇಂದ್ರ ಜೈನ್ ದಂಪತಿಯ ಪುತ್ರಿ.

ಆಳ್ವಾಸ್ನ ಕಾಮರ್ಸ್ ವಿದ್ಯಾರ್ಥಿ ಆಶಿಕ್ ನಾರಾಯಣ ರಾಜ್ಯಕ್ಕೆ ದ್ವಿತೀಯ : ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಆರು ಮಂದಿ ವಿದ್ಯಾರ್ಥಿಗಳಲ್ಲಿ ಮೂಡಬಿದ್ರೆ ಆಳ್ವಾಸ್ ಪಿ ಯು ಕಾಲೇಜಿನ ಆಶಿಕ್ ನಾರಾಯಣ ಎಂ. ಅವರು ಸಿಎ ಮಾಡುವ ಗುರಿಯನ್ನು ಹೊಂದಿದ್ದಾರೆ.

ಆಶಿಕ್ ನಾರಾಯಣ ಎಂ. 593 ಅಂಕಗಳನ್ನು ಪಡೆದಿದ್ದಾರೆ. ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 100, ಅಕೌಂಟೆನ್ಸಿಯಲ್ಲಿ 100, ಸ್ಟಾಟಿಟಿಕ್ಸ್‌ನಲ್ಲಿ 100, ಬೇಸಿಕ್ ಎಕಾನಾಮಿಕ್ಸ್‌ನಲ್ಲಿ 100,ಸಂಸ್ಕೃತದಲ್ಲಿ 100,ಇಂಗ್ಲೀಷ್‌ನಲ್ಲಿ 93 ಅಂಕಗಳನ್ನು ಪಡೆದುಕೊಂಡಿದ್ದಾರೆ. ಆಶಿಕ್ ನಾರಾಯಣ ಮಂಜೇಶ್ವರದ ಗಣಪತಿ ಪ್ರಸಾದ್ ಮತ್ತು ಆಶಾ ಭಾರತಿ ದಂಪತಿಯ ಪುತ್ರ.

ಕಾಸರಗೋಡಿನ ನಿಶ್ಮಿತ ಮರಿಯ ಡಿಸೋಜಗೆ 579 ಅಂಕಗಳು : ಕಾಸರಗೋಡಿನ ಕಯ್ಯೂರು ಗ್ರಾಮದ ಬಾಲಕಿ ಮಿಲಾಗ್ರಿಸ್ ಪಿ ಯು ಕಾಲೇಜಿನ ನಿಶ್ಚಿತ ಮರಿಯಾ ಡಿಸೋಜ ಅವರು ಪಿಯುಸಿ ವಾಣಿಜ್ಯ ವಿಭಾಗದಲ್ಲಿ 579 ಅಂಕವನ್ನು ಪಡೆದಿದ್ದು ಮುಂದೆ ಸಿ ಎ ಆಗುವ ಗುರಿಯನ್ನಿಟ್ಟುಕೊಂಡಿದ್ದಾರೆ.

ನಿಶ್ಚಿತ ಮರಿಯಾ ಡಿಸೋಜ ಅವರು 96.5 ಶೇಕಡ ಅಂಕವನ್ನು ಪಡೆದಿದ್ದಾರೆ. ಅಕೌಂಟೆನ್ಸಿ, ಸ್ಟಾಟಿಸ್ಟಿಕ್, ಬ್ಯುಸಿನೆಟ್ ಸ್ಟಡೀಸ್ ನಲ್ಲಿ ತಲಾ 100 ಅಂಕವನ್ನು ಪಡೆದಿದ್ದು ಎಕಾನಾಮಿಕ್‌್ತನಲ್ಲಿ 98 ಅಂಕವನ್ನು, ಹಿಂದಿಯಲ್ಲಿ 95 ಅಂಕವನ್ನು, ಇಂಗ್ಲೀಷ್‌ನಲ್ಲಿ 86 ಅಂಕವನ್ನು ಪಡೆದಿದ್ದಾರೆ.

ಕಯ್ಯೂರಿನಲ್ಲಿ ಕೂಲಿ ಕೆಲಸವನ್ನು ಮಾಡುವ ಬಾಪಿಸ್ಟ್ ಡಿಸೋಜ ಮತ್ತು ಐರಿನ್ ಅವರ ಪುತ್ರಿಯಾಗಿರುವ ನಿಶ್ಚಿತ ಮರಿಯ ಡಿಸೋಜ ಅವರ ವಿಧ್ಯಾಭ್ಯಾಸಕ್ಕಾಗಿ ನಗರದ ಜೆಪ್ಪುವಿನ ಹೋಲಿ ರೋಸರಿ ಹಾಸ್ಟೆಲ್ ನಲ್ಲಿ ವಾಸವಾಗಿದ್ದರು.

ಕೆ.ಎಮ್.ಇ.ಎಸ್. ಆಂಗ್ಲ ಮಾದ್ಯಮ ಪಿಯು ಕಾಲೇಜಿನ ಸುಲ್ತಾನ್ ಹಜಾಜ್ 600ರಲ್ಲಿ 545 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಅಬ್ದುಲ್ಲಾ ಮತ್ತು ಖೈರುನ್ನಿಸಾ ದಂಪತಿಯ ಪುತ್ರ.

ವರದಿ ಕೃಪೆ : ವಾಭಾ

Comments are closed.