ಕರ್ನಾಟಕ

ದಾವೂದ್ ಹೆಸರಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಡುವ ಬೆದರಿಕೆ ಕರೆ; ಇಬ್ಬರು ವಿದ್ಯಾರ್ಥಿಗಳ ಬಂಧನ

Pinterest LinkedIn Tumblr

bang

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ಹೆಸರಿನಲ್ಲಿ ಇ ಮೇಲ್ ಮೂಲಕ ಹುಸಿ ಬೆದರಿಕೆ ಹಾಕಿದ್ದ ಈಸ್ಟ್ ವೆಸ್ಟ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಪೊಲೀಸರ ಅತಿಥಿಯಾಗಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಈಸ್ಟ್ ವೆಸ್ಟ್ ಕಾಲೇಜಿನ ಮೂವರು ಪ್ರೊಫೆಸರ್ ಗಳ ಫೋಟೊವನ್ನು ಇ ಮೇಲ್ ಮೂಲಕ ಕಳುಹಿಸಿ ತಲಾ 10 ಸಾವಿರ ಡಾಲರ್ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದಲ್ಲಿ ವಿಮಾನವನ್ನು ಹೈಜಾಕ್ ಮಾಡುವ, ಬಾಂಬ್ ಇಡುವ ಬೆದರಿಕೆ ಒಡ್ಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಪ್ರೊಫೆಸರ್ ಗಳಾದ ಪ್ರಸನ್ ರಾಜ್, ಧನರಾಜ್, ಚಂದನ್ ರಾಜ್ ಅವರ ಫೋಟೋವನ್ನು ಇ ಮೇಲ್ ಮೂಲಕ ಕಳುಹಿಸಿ ಬೆದರಿಕೆ ಹಾಕಿದ್ದ ಘಟನೆ ಸಂಬಂಧಿಸಿದಂತೆ ಬಸವೇಶ್ವರ ನಗರ ನಿವಾಸಿ ರಾಘವೇಂದ್ರ (26ವರ್ಷ) ಹಾಗೂ ಹೊಯ್ಸಳ (23ವರ್ಷ) ಎಂಬ ವಿದ್ಯಾರ್ಥಿಯನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ

ಎಂ ಟೆಕ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಾಲೇಜಿನ ಪ್ರೊಫೆಸರ್ ಗಳನ್ನೇ ಸಿಕ್ಕಿಹಾಕಿಸಲು ಈ ಹುಸಿ ಬಾಂಬ್ ಬೆದರಿಕೆ ಹಾಕಿರುವುದು ತನಿಖೆಯಿಂದ ಬಯಲಾಗಿದೆ.

Comments are closed.