ಕರಾವಳಿ

ಕುಂದಾಪುರ: ಸಮುದ್ರದ ಅಬ್ಬರದ ತೆರೆಗಳಲ್ಲಿ ಸಿಲುಕಿದ ಬೋಟ್; ಕೋಡಿ-ಗಂಗೊಳ್ಳಿ ಅಳಿವೆ ನಡುವೆ ನಡೆದ ಘಟನೆ

Pinterest LinkedIn Tumblr

ಕುಂದಾಪುರ: ಮಲ್ಪೆಯಿಂದ ಗಂಗೊಳ್ಳಿ ಬಂದರು ಪ್ರದೇಶದತ್ತ ಬರುತ್ತಿದ್ದ ಬೋಟ್ ಮರಳು ದಿಣ್ಣೆಗೆ ಸಿಲುಕಿ ಸಮುದ್ರದ ಮಧ್ಯೆಯೇ ಮೂರ್ನಾಲ್ಕು ಘಂಟೆಗಳಿಂದ ಸಿಲುಕಿದ ಘಟನೆ ಕುಂದಾಪುರ ಕೋಡಿ ಸಮೀಪದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಓಶೀಯನ್ ಫರ್ಲ್ ಎನ್ನುವ ಹೆಸರಿನ ಗಂಗೊಳ್ಳಿ ಮೂಲದವರ ಬೋಟ್ ಇದಾಗಿದ್ದು ಆಯಿಷಾ ಅವರ ಮಾಲೀಕತ್ವ ಎನ್ನಲಾಗಿದೆ. ಮೀನುಗಾರಿಕೆಗೆ ತೆರಳಿ ಮಲ್ಪೆಯಿಂದ ಗಂಗೊಳ್ಳಿ ಬಂದರಿನತ್ತ ಬರುವಾಗ ಈ ಘಟನೆ ನಡೆದಿದೆ. ಮರಳು ದಿಣ್ಣೆಯಲ್ಲಿ ಸಿಲುಕಿದ ಬೋಟ್ ಮುಂದಕ್ಕೂ ಹಿಂದಕ್ಕೂ ತೆರಳದೇ ಅತಂತ್ರವಾಗಿ ಸಮುದ್ರದ ಅಲೆಗಳು ಕುಣಿಸುವ ಆಟಕ್ಕೆ ಕುಣಿಯುವ ಹಾಗಿತ್ತು.

Kundapura_Kodi Boat_Incident (10) Kundapura_Kodi Boat_Incident (9) Kundapura_Kodi Boat_Incident (14) Kundapura_Kodi Boat_Incident (13) Kundapura_Kodi Boat_Incident (8) Kundapura_Kodi Boat_Incident (6) Kundapura_Kodi Boat_Incident (5) Kundapura_Kodi Boat_Incident (7) Kundapura_Kodi Boat_Incident (2) Kundapura_Kodi Boat_Incident (12) Kundapura_Kodi Boat_Incident (11) Kundapura_Kodi Boat_Incident (1) Kundapura_Kodi Boat_Incident (4) Kundapura_Kodi Boat_Incident (3)

ಈ ಬೋಟಿನಲ್ಲಿದ್ದ ಐದಾರು ಜನರು ಅತಂತ್ರ ಸ್ಥಿತಿಯಲ್ಲಿ ಸಮುದ್ರದ ಅಲೆಗಳ ನಡುವೆ ಹಲವು ತಾಸುಗಳಿದ್ದರು.(update 8.40pm)

ನೆರೆದ ನೂರಾರು ಜನರು:
ಬೋಟು ಅತಂತ್ರಕ್ಕೆ ಸಿಲುಕಿದ ಘಟನೆಯ ಮಾಹಿತಿ ಎಲ್ಲೆಡೆ ಪಸರಿಸುತ್ತಿದ್ದಂತೆಯೇ ಗಂಗೊಳ್ಳಿ ಹಾಗೂ ಕೋಡಿ ಅಳಿವೆ ಬಾಗಿಲ ಸಮೀಪ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಬೋಟಿನಲ್ಲಿದ್ದ ಜನರನ್ನು ರಕ್ಷಿಸುವ ತವಕ ಆ ಜನರಲ್ಲಿತ್ತು.

ಇತ್ತ ಕೋಡಿಗೆ ಗಂಗೊಳ್ಳಿ ಕರಾವಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವೆಂಕಟೇಶ್ ಯಡಳ್ಳಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಹಲವು ಸಮಯ ಮೊಕ್ಕಾಂ ಹೂಡಿದ್ದರು.

ರಾತ್ರಿ 8.45ರ ತನಕವೂ ಬೋಟು ದಡಕ್ಕೆ ಸುರಕ್ಷಿತವಾಗಿ ಬಂದಿಲ್ಲ ಎನ್ನುವ ಮಾಹಿತಿ ಲಭಿಸಿದೆ.

ಚಿತ್ರ,ವರದಿ-ಯೋಗೀಶ್ ಕುಂಭಾಸಿ

Comments are closed.