ಮನೋರಂಜನೆ

ಬಿಗ್ ಬ್ಯಾಷ್ ಲೀಗ್‌ಗೆ ಕ್ರಿಸ್ ಗೇಲ್ ಗುತ್ತಿಗೆ ನವೀಕರಣಕ್ಕೆ ನಕಾರ

Pinterest LinkedIn Tumblr

Chris Gayle

ನವದೆಹಲಿ: ಸ್ಫೋಟಕ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರಿಗೆ ಬಿಗ್ ಬ್ಯಾಷ್ ಲೀಗ್ ಫ್ರಾಂಚೈಸಿ ಮೆಲ್ಬರ್ನ್ ರೆನೆಗೇಡ್ಸ್ ಮುಂದಿನ ಬೇಸಿಗೆಯ ಬಿಗ್ ಬ್ಯಾಷ್ ಲೀಗ್‌ಗೆ ಮರುಸಹಿ ಹಾಕಿಸುವುದಿಲ್ಲವೆಂದು ದೃಢಪಡಿಸಿದೆ. ಹೊಸ ಸೆಕ್ಸಿಸಂ ವಿವಾದದಲ್ಲಿ ಗೇಲ್ ಸಿಲುಕಿದ ಕೆಲವೇ ದಿನಗಳಲ್ಲಿ ಈ ಪ್ರಕಟಣೆ ಹೊರಬಿದ್ದಿದೆ.

ಬಿಬಿಎಲ್‌ನ 6ನೇ ಆವೃತ್ತಿಯಲ್ಲಿ ಗೇಲ್ ಆಡುವ ಅವಕಾಶ ಅಸಾಧ್ಯವಾಗಿದ್ದು, ಇನ್ನುಳಿದ ಏಳು ಕ್ಲಬ್‌ಗಳು ಆಟಗಾರರ ಆಮದಿಗೆ ಬ್ರೇಕ್ ಹಾಕಿದೆ. ಗೇಲ್ ಅವರು ”ಸಿಕ್ಸ್ ಮೆಷಿನ್: ಐ ಡೋನ್ಟ್ ಲೈಕ್ ಕ್ರಿಕೆಟ್… ಐ ಲವ್ ಇಟ್ ”ಎಂಬ ಆತ್ಮಕಥನದಲ್ಲಿ ಮಾಜಿ ಕ್ರಿಕೆಟರುಗಳಾದ ಕ್ರಿಸ್ ರೋಜರ್ಸ್, ಐಯಾನ್ ಚಾಪೆಲ್ ಮತ್ತು ಆಂಡ್ರಿವ್ ಫ್ಲಿಂಟಾಫ್ ಅವರ ವಿರುದ್ಧ ವಾಗ್ದಾಳಿ ಮಾಡಿದ ಮರುದಿನವೇ ಈ ಬೆಳವಣಿಗೆ ಉಂಟಾಗಿದೆ.

ಈ ವರ್ಷಾರಂಭದಲ್ಲಿ ಗೇಲ್ ಅವರಿಗೆ 7500 ಡಾಲರ್ ದಂಡವನ್ನು ಈ ಮಾಜಿ ಕ್ರಿಕೆಟರುಗಳು ವಿಧಿಸಿದ್ದರು. ಕಳೆದ ವರ್ಷದ ಬಿಬಿಎಲ್‌ನಲ್ಲಿ ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣದ ಮೇಲೆ ಈ ದಂಡ ಹಾಕಲಾಗಿತ್ತು. ಟಿವಿ ಪ್ರಸಾರದ ಸಂದರ್ಶನದಲ್ಲಿ ವರದಿಗಾರ್ತಿಯನ್ನು ಗೇಲ್ ಡೋಂಟ್ ಬ್ಲಷ್ ಬೇಬಿ ಕಾಮೆಂಟ್ ನೊಂದಿಗೆ ಡ್ರಿಂಕ್‌ಗೆ ಆಹ್ವಾನಿಸಿದ್ದು ವಿವಾದ ಉಂಟುಮಾಡಿತ್ತು.

Comments are closed.