ಕರಾವಳಿ

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC) ಯು.ಎ.ಇ “ಪ್ಯಾಮಿಲಿ ಮುಲಾಖಾತ್ ” ಚಯರ್ಮೇನ್ ಆಗಿ ಅಬ್ದುಲ್ ಲತೀಫ್ ಮುಲ್ಕಿ ಆಯ್ಕೆ

Pinterest LinkedIn Tumblr

IMG_2062

ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC) ಕರ್ನಾಟಕದ ಪ್ರತಿಷ್ಟಿತ ಅನಿವಾಸಿ ಸಂಘಟನೆ ಯಾಗಿದ್ದು ಹದಿನೇಳು ವರ್ಷದಿಂದ ಯು.ಎ.ಇ. ಯಲ್ಲಿ ಕಾರ್ಯಚರಿಸುತ್ತಿದೆ. ಇದರ ಅಧೀನದಲ್ಲಿ ಸಡೆಯುತ್ತಿರುವ ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ಮೂಳೂರು ಇದರ ಅಭಿವ್ಯದ್ದಿಯಲ್ಲಿ ಯು.ಎ.ಇ ರಾಷ್ಟೀಯ ಸಮಿತಿಯ ಮುಖಾಂತರ ಯು.ಎ.ಇ ಯಲ್ಲಿ ಅನಿವಾಸಿಗಳಾಗಿರುವ ದಕ್ಷಿಣ ಕರ್ನಾಟಕ ದ ಹೆಚ್ಚಿನ ದೀನಿ ಹಾಗೂ ವಿದ್ಯಾ ಪ್ರೆಮೀಗಳ ಸಲಹೆ ಸಹಕಾರ ದಿಂದ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಯು.ಎ.ಇ ಯ ದಕ್ಷಿಣ ಕರ್ನಾಟಕದ ಕುಟುಂಬ ವನ್ನು ಹಾಗೂ ಡಿ.ಕೆ.ಎಸ್.ಸಿ ಯ ಹಿತೈಷಿಗಳನ್ನು ಒಂದೇ ಕಡೆ ಸೇರಿಸಿ ದೀನಿ ಚೌಕಟ್ಟಿನೊಳಗೆ ಮಕ್ಕಳು ಮಹಿಳೆಯರು ಪುರುಷರಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು “ಪ್ಯಾಮಿಲಿ ಮುಲಾಖಾತ್ ” ವಿಶೇಷ ರೀತಿಯಲ್ಲಿ ನಡೆಸಲು ತಿರ್ಮಾನಿಸಲಾಗಿದೆ. ಇದನ್ನು ಯಶಸ್ವಿಯಾಗಿ ನಡೆಸಲು ಉಪ ಸಮಿತಿಯನ್ನು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟೀಯ ಸಮಿತಿಯ ಅಧೀನದಲ್ಲಿ ರಚಿಸಲಾಗಿದೆ. ಇದರಂತೆ “ಪ್ಯಾಮಿಲಿ ಮುಲಾಖಾತ್ ” ಸಮಿತಿ ಚಯರ್ಮೇನ್ ಆಗಿ ಅಬ್ದುಲ್ ಲತೀಫ್ ಮುಲ್ಕಿ ರವರನ್ನು ಆಯ್ಕೆ ಮಾಡಲಾಗಿದೆ.

ವರದಿ . ಯಸ್.ಯುಸುಪ್ ಅರ್ಲಪದವು

Write A Comment