ಕರಾವಳಿ

ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿ ಚಯರ್ಮೇನ್ ಆಗಿ ಎಂ.ಇ .ಮೂಳೂರು ಪುನರಾಯ್ಕೆ

Pinterest LinkedIn Tumblr

IMG_1929

ದುಬೈ. ಕರ್ನಾಟಕದ ಪ್ರತಿಷ್ಟಿತ ಅನಿವಾಸಿ ಸಂಘಟನೆ ಯಾದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC) ಅಧೀನದಲ್ಲಿ ನಡೆಯುತ್ತಿರುವ ಮೂಳೂರಿನ ಅಲ್ ಇಹ್ಸಾನ್ ವಿದ್ಯಾ ಕೇಂದ್ರದ ಮಹತ್ವಾಕಾಂಕ್ಷೆಯ ಅಲ್ ಇಹ್ಸಾನ್ ಮಹಿಳಾ ಕಾಲೇಜು ಯೋಜನೆಯ ಕಟ್ಟಡ ಕಾಮಗಾರಿ ಭರದಿಂದ ಸಾಗುತ್ತಿದ್ದು ಇದರ ಜವಾಬ್ದಾರಿಯನ್ನು ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟ್ರೀಯ ಸಮಿತಿಯು ವಿದ್ಯಾ ದಾನಿಗಳ ಸಹಕಾರದ ಭರವಸೆಯಿಂದ ತೆಗೆದಿರುತ್ತದೆ. ಕಟ್ಟಡ ಕಾಮಗಾರಿ ಪ್ರಾರಂಭ ದಿಂದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟ್ರೀಯ ಸಮಿತಿ ಯ ಅಧೀನದಲ್ಲಿ ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿಯು ಎಂ.ಇ .ಮೂಳೂರು ರವರ ಸಾರತ್ಯದಲ್ಲಿ ನಡೆಸುತ್ತಾ ಬಂದಿದ್ದು 2016 – 17 ರ ಸಾಲಿನ ಸಾಲಿನಲ್ಲಿ ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿ ಚಯರ್ಮೇನ್ ಆಗಿ ಎಂ.ಇ .ಮೂಳೂರು ಪುನರಾಯ್ಕೆ ಆಗಿರುತ್ತಾರೆ.

ವರದಿ : ಎಸ್ . ಯೂಸುಫ್ ಅರ್ಲಪದವು

Write A Comment