
ಕ್ಯಾಲಿಫೋರ್ನಿಯಾ: ಮೆಸೆಜಿಂಗ್ ಅಪ್ಲಿಕೇಶನ್‍ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಇದೀಗ ಡೆಸ್ಕ್ ಟಾಪ್ ಅಪ್ಲಿಕೇಶನ್‍ಗಳನ್ನು ಬಿಡುಗಡೆ ಮಾಡಿದೆ.
ವಿಂಡೋಸ್ ಮತ್ತು ಐಓಎಸ್ ಡೆಸ್ಕ್ ಟಾಪ್ ಆ್ಯಪ್‍ನ್ನು ಬಿಡುಗಡೆ ಮಾಡಿದ್ದು, ಬಳಕೆದಾರರು ವಾಟ್ಸಪ್.ಕಾಂ ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.
ಹೊಸ ವಾಟ್ಸಪ್ ಅಪ್ಲಿಕೇಶನ್ ವಿಂಡೋಸ್ 8 ಮತ್ತು ಅದಕ್ಕಿಂತ ನಂತರ ಬಿಡುಗಡೆಯಾದ ಆವೃತ್ತಿಗಳಿಗೆ ಬಂಬಲ ನೀಡಿದರೆ ಮ್ಯಾಕ್ ಐಓಎಸ್‍ನ 10.9 ಮತ್ತು ಅದಕ್ಕಿಂತ ನಂತರ ಬಿಡುಗಡೆಯಾದ ಆವೃತ್ತಿಗಳಿಗೆ ಬೆಂಬಲ ನೀಡುತ್ತದೆ.
ಕ್ರೋಮ್ ಬ್ರೌಸರ್‍ನಲ್ಲಿರುವ ವಾಟ್ಸಪ್ ವೆಬ್‍ನಂತೆ ಈ ಡೆಸ್ಕ್ ಟಾಪ್ ಅಪ್ಲಿಕೇಶನ್ ಕಾರ್ಯನಿರ್ವಹಣೆ ಮಾಡಲಿದೆ. ಸ್ಮಾರ್ಟ್‍ಫೋನಿನಲ್ಲಿರುವ ವಾಟ್ಸಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಡೆಸ್ಕ್ ಟಾಪ್ ಅಪ್ಲಿಕೇಶನ್ ಆನ್ ಮಾಡಬೇಕಾಗುತ್ತದೆ.
ಸ್ಮಾರ್ಟ್‍ಫೋನಲ್ಲಿ ಇಂಟರ್‍ನೆಟ್ ಕನೆಕ್ಷನ್ ಆನ್ ಆಗಿದ್ದರೆ ಮಾತ್ರ ವಾಟ್ಸಪ್ ಡೆಸ್ಕ್ ಟಾಪ್ ಆ್ಯಪ್ ಕಾರ್ಯನಿರ್ವಹಿಸುತ್ತದೆ.