ಗಲ್ಫ್

ದುಬೈನಲ್ಲಿ ಚಿನ್ನ ಲೇಪಿತ 6.70 ಕೋಟಿ ಬೆಲೆಯ ಗಾಡ್ಜಿಲ್ಲಾ ಕಾರು ಪ್ರದರ್ಶನ

Pinterest LinkedIn Tumblr

car

ಜನರಿಗೆ ಹಳದಿ ಲೋಹದ ವ್ಯಾಮೋಹ ಹೆಚ್ಚು. ಅದರಂತೆ ಮೈತುಂಬಾ ಚಿನ್ನದಿಂದ ಮಾಡಿದ ಆಭರಣಗಳನ್ನು ಹಾಕಿಕೊಂಡು ತಿರುಗುತ್ತಾರೆ. ಚಿನ್ನದ ಒಡವೆಗಳು, ಚಿನ್ನದಿಂದ ಮಾಡಿದ ಶರ್ಟ್, ಚಿನ್ನದ ಸ್ಪೂನ್, ಪೆನ್ ಹೀಗೆ.

ಆದರೆ ಪ್ರಶ್ನೆ ಅದಲ್ಲ. ಚಿನ್ನ ಲೇಪಿತ ಕಾರು ಇದೀಗ ಪ್ರದರ್ಶನಗೊಂಡಿದೆ. ಹೌದು ದುಬೈನಲ್ಲಿ ನಡೆದ ಆಟೊ ಮೆಕ್ಯಾನಿಕಾ 2016ರ ರೇಸಿಂಗ್ ಕಾರುಗಳ ಪ್ರದರ್ಶನ ಮೇಳದಲ್ಲಿ 6.70 ಕೋಟಿ ಬೆಲೆಯ ಗಾಡ್ಜಿಲ್ಲಾ ಕಾರನ್ನು ಪ್ರದರ್ಶನಕ್ಕೆ ಇಡಲಾಗಿದೆ. ಕಾರಿಗೆ ಸಂಪೂರ್ಣವಾಗಿ ಚಿನ್ನದ ಲೇಪನ ಕೊಡಲಾಗಿದೆ.

ಕಾರಿನ ವೈಶಿಷ್ಟ್ಯಗಳು
ನಿಸಾನ್ ಕಂಪನಿ ತಯಾರಿಸಿರುವ ಗಾಡ್ಜಿಲ್ಲಾ ಕಾರು ಆರ್35 ಜಿಟಿ-ಆರ್ ಮಾದರಿಯದ್ದಾಗಿದೆ. ಈ ಕಾರು 3.8 ಲೀಟರ್ ವಿ6 ಎಂಜಿನ್‌ನಿಂದ ನಿಯಂತ್ರಿತಗೊಳ್ಳುತ್ತದೆ. ಅವಳಿ ಟರ್ಬೊ. ಸಾಮರ್ಥ್ಯ 545 ಎಚ್ ಪಿ, 6 ಸ್ಪೀಡ್ ಅವಳಿ ಕ್ಲಬ್ ಹಾಗೂ ಅಗಲವಾದ ರೇಸ್ ಟೈರ್ ಗಳನ್ನು ಹೊಂದಿದೆ. ಟೈರ್ ಗೆ 20 ಹೊಸ ಚಕ್ರದ ಕೀಲುಗಳನ್ನು ಅಳವಡಿಸಲಾಗಿದೆ.

Write A Comment