ಅಂತರಾಷ್ಟ್ರೀಯ

ಮುಖದ ಅಂದಕ್ಕೆ ಸರಳ ಟಿಪ್ಸ್…ಮುಖದ ಕಾಂತಿಯನ್ನು ಹೆಚ್ಚಿಸುವ ಕೆಲವೊಂದು ಪರಿಣಾಮಕಾರಿಯಾದ ಮನೆಮದ್ದು ಇಲ್ಲಿದೆ ನೋಡಿ….

Pinterest LinkedIn Tumblr

Beautiful Girl Touching Her Face. Isolated on a White Background. Perfect Skin. Beauty Face. Professional Makeup

ಕಪ್ಪು ವರ್ಣ ಯುವತಿಯರು ಮುಖದ ಅಂದ ಹೆಚ್ಚಿಸಿಕೊಳ್ಳಲು ಮಾಡುವ ಕಸರತ್ತು ಒಂದೊಂದು ಅಲ್ಲ, ಅತಿ ಹೆಚ್ಚು ರಾಸಾಯನಿಕ ವಸ್ತುಗಳಿಗೆ ಮೊರೆ ಹೋಗಿ ಕೊನೆಗೆ ನೈಸರ್ಗಿಕ ತ್ವಚೆಯ ಹೊಳಪನ್ನು ಕಳೆದುಕೊಂಡು ಕೊರಗುತ್ತಾರೆ. ಹಾಗಾಗಿ ನೈಸರ್ಗಿಕವಾಗಿ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವ ಕೆಲವೊಂದು ಪರಿಣಾಮಕಾರಿಯಾದ ಮನೆಮದ್ದಗಳ ಬಗ್ಗೆ ತಿಳಿದುಕೊಳ್ಳವುದು ಉತ್ತಮ ಎನ್ನಬಹುದು.

ಹಬೆಯಾಡುತ್ತಿರುವ ಬಿಸಿನೀರಿಗೆ ಸುಮಾರು ಒಂದು ಮುಷ್ಟಿಯಷ್ಟು ತುಳಸಿ ಎಲೆಗಳನ್ನು ಕೈಯಲ್ಲಿಯೇ ಸಾಕಷ್ಟು ಹಿಚುಕಿ ಸೇರಿಸಿ ಕೊಂಚ ಹೊತ್ತು ಮುಚ್ಚಳ ಮುಚ್ಚಿಡಿ. ಸುಮಾರು ಐದು ನಿಮಿಷಗಳ ಬಳಿಕ ಈ ಹಬೆಯನ್ನು ಮುಖದ ಚರ್ಮಕ್ಕೆ ಒಡ್ಡುವುದರಿಂದ ಚರ್ಮವನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲ, ಮೊಡವೆಗಳಿಗೆ ಕಾರಣವಾಗುವ ಅಂಶಗಳನ್ನು ನಾಶಪಡಿಸುತ್ತದೆ.

ರಾತ್ರಿಯಿಡೀ ಬಾದಾಮಿಗಳನ್ನು ತಣ್ಣನೆಯ ನೀರಿನಲ್ಲಿ ಮುಳುಗಿಸಿಟ್ಟು ಬೆಳಿಗ್ಗೆ ನುಣ್ಣಗೆ ಅರೆದು ಲೇಪನ ತಯಾರಿಸಿಕೊಳ್ಳಿ. (ಕಲ್ಲಿನ ಮೇಲೆ ತೇದಿ ತಯಾರಿಸಿದರೆ ಉತ್ತಮ ಪರಿಣಾಮ ದೊರಕುತ್ತದೆ). ಈ ಲೇಪನವನ್ನು ದಿನಕ್ಕೆರಡು ಬಾರಿ ತ್ವಚೆಗೆ ಹಚ್ಚುವುದರಿಂದ ನೈಸರ್ಗಿಕ ವರ್ಣವನ್ನು ಶೀಘ್ರವಾಗಿ ಪಡೆಯಬಹುದು.

ನಾಲ್ಕು ದೊಡ್ಡಚಮಚ ಅನ್ನಬಸಿದ ನೀರು (ಬೆಳ್ತಿಗೆ ಅನ್ನ), ಒಂದು ದೊಡ್ಡ ಚಮಚ ಮೊಸರು ಮತ್ತು ಕೆಲವು ಹನಿ ಗುಲಾಬಿನೀರನ್ನು ಸೇರಿಸಿ ಹದವಾಗಿ ಮಿಶ್ರಣ ಮಾಡಿಕೊಳ್ಳಿ. ಈ ಲೇಪನವನ್ನು ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು ಮೂವತ್ತು ನಿಮಿಷಗಳ ಕಾಲ ಮಸಾಜ್ ಮುಂದುವರೆಸಿ. ಇದು ಕ್ಷಿಪ್ರವಾಗಿ ಮುಖದ ಊತವನ್ನು ನಿವಾರಿಸುತ್ತದೆ ಹಾಗೂ ಮುಖದ ಸೌಂದರ್ಯವನ್ನು ವೃದ್ದಿಸುತ್ತದೆ. ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವುದು ಅನಿವಾರ್ಯವಾಗಿದ್ದು ಹೆಚ್ಚಿನ ಸಮಯ ಇಲ್ಲದಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ.

ಕೆಲವು ಪುದೀನಾ ಎಲೆಗಳನ್ನು ಮಿಕ್ಸಿಗೆ ಹಾಕಿ ಅರೆದು ಅದಕ್ಕೆ ಸ್ವಲ್ಪ ಮೊಸರು ಸೇರಿಸಿಕೊಂಡು, ಫೇಸ್ ಪ್ಯಾಕ್ ರೀತಿ ಮಾಡಿಕೊಂಡು, ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳಿ, ಇದರಿಂದ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುವುದರ ಜೊತೆಗೆ, ಮುಖ ಇನ್ನಷ್ಟು ಕಾಂತಿಯುಕ್ತಗೊಳ್ಳುತ್ತದೆ.

ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ. ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ಸೋಪ್ ಬಳಸದೇ ತಣ್ಣೀರಿನಿಂದ ತೊಳೆಯಿರಿ.

ಒಂದು ಇಡಿಯ ಸೌತೆಕಾಯಿಯ ಸಿಪ್ಪೆ ಸುಲಿದು ಬೀಜ ನಿವಾರಿಸಿ ನುಣ್ಣಗೆ ಅರೆಯಿರಿ. ಇದಕ್ಕೆ ಒಂದು ಲಿಂಬೆಯ ರಸ ಮತ್ತು ಒಂದು ಮೊಟ್ಟೆಯ ಬಿಳಿಭಾಗವನ್ನು ಪ್ರತ್ಯೇಕಿಸಿ ಬೆರೆಸಿ ನಯವಾದ ಮಿಶ್ರಣ ತಯಾರಿಸಿ. ತಾಜಾ ಇದ್ದಂತೆಯೇ ಈಗತಾನೇ ಕೊಂಚ ಬಿಸಿನೀರಿನಲ್ಲಿ ತೊಳೆದಿರುವ ಮುಖದ ಮೇಲೆ ಏಕಪ್ರಕಾರವಾಗಿ ಹಚ್ಚಿ. ಕಣ್ಣುಗಳ ಒಳಗೆ ಹೋಗದಂತೆ ಎಚ್ಚರವಹಿಸಿ. ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಪ್ರತಿದಿನ ಹೊಸದಾಗಿ ಮಿಶ್ರಣ ತಯಾರಿಸಿಕೊಳ್ಳವುದು ಉತ್ತಮ……

Write A Comment