ಅಂತರಾಷ್ಟ್ರೀಯ

ಚಹಾದಲ್ಲಿದೆ ಕೂದಲಿನ ಸೌಂದರ್ಯ…ಕೂದಲು ಉದುರುದನ್ನು ತಡೆಗಟ್ಟಿ….

Pinterest LinkedIn Tumblr

Hibiscus_Tea

ಎಲ್ಲರ ಅಂದ ವೃದ್ಧಿಸುವ ಕೇಶರಾಶಿ ಆರೋಗ್ಯದ ಕಡೆ ಗಮನ ಹರಿಸುವುದು ಇತ್ತೀಚೆಗೆ ಬಹು ಮುಖ್ಯವಾಗಿದೆ. ಇಲ್ಲವಾದಲ್ಲಿ ಸಮಸ್ಯೆ ಗ್ಯಾರಂಟಿ…..

ಯುವತಿಯರು ತಮ್ಮ ಕೇಶಸೌಂದರ್ಯಕ್ಕಾಗಿ ಇಂದು ಹಲವಾರು ವಿಧಾನಗಳನ್ನು ಅನುಸರಿಸುವುದು ಸಾಮಾನ್ಯವಾಗಿದೆ. ಆ ಬಳಿಕ ಸಮಸ್ಯೆಗೆ ತುತ್ತಾಗಿ ಕೂದಲು ಉದುರುತ್ತಿದೆ ಎಂದು ಚಿಂತೆಗೀಡಾಗುವುದು ಖಚಿತ…. ಆದರೆ ನೈಸಗೀಕವಾಗಿ ಚಹಾ ಕುಡಿಯುವುದರಿಂದಲೂ ತಮ್ಮ ಆರೋಗ್ಯ ವೃದ್ಧಿಯಾಗಲಿದೆ ಎಂಬುದನ್ನು ಮರೆತರಬಹುದು.

ಈಗೀನ ವಾತಾವರಣ ಮತ್ತು ಅನುಸರಿಸುವ ಆರೋಗ್ಯ ಪದ್ಧತಿಯಿಂದ ನಮ್ಮ ಕೂದಲಿನ ಸೌಂದರ್ಯವನ್ನು ಹಾಳುಮಾಡಿಕೊಳ್ಳತ್ತಿದ್ದೇವೆ ಎಂದರೆ ತಪ್ಪಾಗಲಾರದು. ಅದಾಗ್ಯೂ ಕೂದಲಿನ ಚೆಲುವನ್ನು ವರ್ಧಿಸಲು ಚಹಾ ಕುಡಿಯುವುದು ಉತ್ತಮ ಎಂದು ಹೇಳಲಾಗಿದೆ. ನಿಮ್ಮ ಕೂದಲು ಡ್ರೈ ಮತ್ತು ತುರಿಕೆಯದ್ದಾಗಿದೆ ಎಂದಾದಲ್ಲಿ ಈ ಚಹಾ ಖಂಡಿತವಾಗಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲುದು. ಅಂತೆಯೇ ನೆರೆಗೂದಲನ್ನು ಮರೆಮಾಡಲು ಕೂಡ ಚಹಾದ ಬಳಕೆಯನ್ನು ಕೂದಲಿಗೆ ಮಾಡಬಹುದಾಗಿದೆ.

ಕೂದಲಿಗೆ ತಂಪಿನ ಅನುಭವವನ್ನು ಪುದೀನಾ ಚಹಾ ನಿಮಗೆ ನೀಡುತ್ತದೆ. ನಿಮ್ಮ ಕೂದಲಿಗೆ ಪುದೀನಾ ಚಹಾವನ್ನು ಬಳಸಿದ ಸಂದರ್ಭದಲ್ಲಿ, ನೆತ್ತಿಯನ್ನು ಚೆನ್ನಾಗಿ ಮಸಾಜ್ ಮಾಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಈ ಚಹಾವನ್ನು 15 ನಿಮಿಷಗಳ ಕಾಲ ನೆತ್ತಿಯಲ್ಲಿ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ.

ಪ್ರತಿ ದಿನ ತಲೆಗೆ ಹಚ್ಚಿಕೊಳ್ಳುವ ಎಣ್ಣೆಯೊಂದಿಗೆ ಗ್ರೀನ್ ಟೀ ಮಿಶ್ರಣ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಬೆರಳಿನಿಂದ ವರ್ತುಲಾಕಾರವಾಗಿ ಮಸಾಜ್ ಮಾಡಿಕೊಳ್ಳುತ್ತಾ ಇರಬೇಕು. ಹೀಗೆ ಆಗಾಗ್ಗೆ ಮಾಡಿಕೊಳ್ಳುತ್ತಿದ್ದರೆ ಕೂದಲು ಉದುರುವುದು ಕಡಿಮೆಗೊಳ್ಳುತ್ತದೆ.

ಉರಿಯೂತ ಗುಣಗಳನ್ನು ಶುಂಠಿ ಚಹಾ ಒಳಗೊಂಡಿರುವುದರಿಂದ ಇದನ್ನು ಯಾವುದೇ ಭಯವಿಲ್ಲದೆ ಕೂದಲು ಮತ್ತು ನೆತ್ತಿಗೆ ಬಳಸಿಕೊಳ್ಳಬಹುದಾಗಿದೆ. ತಲೆಹೊಟ್ಟಿನ ನಿವಾರಣೆಯನ್ನು ಮಾಡಲು ಶುಂಠಿ ಚಹಾ ಅತ್ಯುತ್ತಮವಾಗಿದ್ದು ಕೂದಲಿನ ಬುಡವನ್ನು ದೃಢಪಡಿಸುತ್ತದೆ ಮತ್ತು ನೆತ್ತಿಯ ಸೋಂಕನ್ನು ದಾಸವಾಳ ಚಹಾ ಕೂದಲಿಗೆ ಬಹು ವಿಧದಲ್ಲಿ ಸಹಕಾರಿಯಾಗಲಿದೆ.

ಕೂದಲು ಉದುರುವುದು ಮತ್ತು ಕೂದಲು ತೆಳ್ಳಗಾಗುವಿಕೆಯನ್ನು ಈ ಟೀ ತಡೆಗಟ್ಟುತ್ತದೆ. ಅಂತೆಯೇ ಬೇಸಿಗೆಯಲ್ಲಿ ದಾಸವಾಳ ಟೀಯ ಪರಿಮಳ ಕೂದಲಿಗೆ ಒಳ್ಳೆಯದಾಗಿದೆ. ಕೂದಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬ್ಲ್ಯಾಕ್ ಟೀ ಪರಿಣಾಮಕಾರಿಯಾದುದು. ಬ್ಲ್ಯಾಕ್ ಟೀಯು ಡೀಹೈಡ್ರೊಟೆಸ್ಟ್ರೊನ್ ಹಾರ್ಮೋನು ಅನ್ನು ಒಳಗೊಂಡಿದ್ದು ಇದು ಕೂದಲುದುರುವುದನ್ನು ತಡೆಗಟ್ಟುತ್ತದೆ. ಆದ್ದರಿಂದ ವಾರದಲ್ಲಿ ಎರಡು ಬಾರಿ ನಿಮ್ಮ ಕೂದಲನ್ನು ಉಗುರು ಬೆಚ್ಚನೆಯ ಬ್ಲ್ಯಾಕ್ ಟೀಯಿಂದ ತೊಳೆದುಕೊಳ್ಳಿ ಮತ್ತು ಹೊಳೆಯುವ ಕೂದಲನ್ನು ಪಡೆಯಿರಿ.

Write A Comment