ಮನೋರಂಜನೆ

ಸದ್ಯ ಇನ್ಕ್ರೆಡಿಬಲ್ ಇಂಡಿಯಾಗೆ ರಾಯಭಾರಿ ನೇಮಕ ಮಾಡುವ ಯೋಚನೆ ಇಲ್ಲ: ಕೇಂದ್ರ

Pinterest LinkedIn Tumblr

amitabh-aamir

ನವದೆಹಲಿ: ಇನ್‌ಕ್ರೆಡಿಬಲ್ ಇಂಡಿಯಾ ಪ್ರಚಾರ ರಾಯಭಾರಿ ಹುದ್ದೆಗೆ ಬಾಲಿವುಡ್ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನು ನೇಮಕ ಮಾಡಲಾಗಿದೆ ಎಂಬ ವದಂತಿಗಳಿಗೆ ಸೋಮವಾರ ತೆರೆ ಎಳೆದಿರುವ ಕೇಂದ್ರ ಸರ್ಕಾರ, ಸದ್ಯ ಪ್ರವಾಸೋದ್ಯಮ ರಾಯಭಾರಿಯನ್ನು ನೇಮಕ ಮಾಡುವ ಯೋಚನೆ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಇಂದು ಲೋಕಸಭೆಗೆ ಲಿಖಿತ ಪ್ರತಿಕ್ರಿಯೆ ನೀಡಿದ ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಅವರು, ಇನ್‌ಕ್ರೆಡಿಬಲ್ ಇಂಡಿಯಾ ಪ್ರಚಾರ ರಾಯಭಾರಿ ನೇಮಕಕ್ಕೆ ಸಂಬಂಧಿಸಿದಂತೆ ತಮ್ಮ ಸಚಿವಾಲಯ ಯಾವುದೇ ಸಮಿತಿ ರಚಿಸಿಲ್ಲ ಎಂದರು. ಅಲ್ಲದೆ ಇನ್‌ಕ್ರೆಡಿಬಲ್ ಇಂಡಿಯಾ ಪ್ರಚಾರ ರಾಯಭಾರಿಯನ್ನು ನೇಮಕ ಮಾಡುವ ಪ್ರಸ್ತಾಪ ಪ್ರವಾಸೋದ್ಯಮ ಸಚಿವಾಲಯದ ಮುಂದೆ ಇಲ್ಲ ಎಂದರು.

ಕಳೆದ ತಿಂಗಳು, ಸರ್ಕಾರ ಇನ್‌ಕ್ರೆಡಿಬಲ್ ಇಂಡಿಯಾ ಪ್ರಚಾರ ರಾಯಭಾರಿಯಾಗಿ ಅಮಿತಾಭ್ ಬಚ್ಚನ್ ಅವರನ್ನು ಆಯ್ಕೆ ಮಾಡಿದೆ. ಆದರೆ ಬಚ್ಚನ್ ಹಾಗೂ ಅವರ ಕುಟುಂಬಸ್ಥರು ತೆರಿಗೆ ವಂಚಿಸಿ ವಿದೇಶದ ಕಂಪನಿಗಳಲ್ಲಿ ಹೂಡಿಕೆ ಮಾಡಿದ ವಿಚಾರ ‘ಪನಾಮಾ ಪೇಪರ್ಸ್’ನಲ್ಲಿ ಬಹಿರಂಗವಾದ ಹಿನ್ನೆಲೆಯಲ್ಲಿ ಅವರ ನೇಮಕವನ್ನು ತಡೆ ಹಿಡಿಯಲಾಗಿದೆ ಎಂದು ವರದಿ ಮಾಡಲಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಬಿಗ್ ಬಿ, ಇನ್‌ಕ್ರೆಡಿಬಲ್ ಇಂಡಿಯಾ ರಾಯಭಾರಿ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಲಾಗಿದೆ ಎಂದು ಮಾಧ್ಯಮಗಳ ವರದಿ ಮಾಡುತ್ತಿವೆ. ಆದರೆ ಆ ಸ್ಥಾನಕ್ಕಾಗಿ ಸರ್ಕಾರ ಅಧಿಕೃತವಾಗಿ ತಮ್ಮ ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಆಮೀರ್ ಖಾನ್ ಸ್ಥಾನಕ್ಕೆ ಈಗಾಗಲೇ ಅಮಿತಾಭ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಪನಾಮಾ ಪೇಪರ್ಸ್ನಲ್ಲಿ ಬಿಗ್ಬಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ರಾಯಭಾರಿ ಮಾಡುವ ಪ್ರಸ್ತಾಪಕ್ಕೆ ಇದುವರೆಗೆ ಸಹಿಬಿದ್ದಿಲ್ಲ. ಪ್ರಕರಣದಲ್ಲಿ ಕ್ಲೀನ್ಚಿಟ್ ಸಿಗುವ ತನಕ ಈ ರಾಯಭಾರಿಯಾಗಿ ಆಯ್ಕೆ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಹ ವರದಿ ಮಾಡಲಾಗಿತ್ತು.

Write A Comment