ಕರ್ನಾಟಕ

ಬೆಂಗಳೂರಿನಲ್ಲಿ ಅಶ್ಲೀಲ ನೃತ್ಯ ಆಯೋಜಿಸಿದ್ದ ಬಾರ್ ಮೇಲೆ ದಾಳಿ ನಡೆಸಿದ ಸಿಸಿಬಿ : 37 ಮಂದಿ ಬಂಧನ

Pinterest LinkedIn Tumblr

bang

ಬೆಂಗಳೂರು: ಬೆಂಗಳೂರಿನಲ್ಲಿ ಯುವತಿಯರಿಂದ ಅಶ್ಲೀಲ ನೃತ್ಯ ಆಯೋಜಿಸಿದ್ದ ಟೈಮ್ಸ್ ಬಾರ್ ಆಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, 37 ಮಂದಿಯನ್ನು ಬಂಧಿಸಿದ್ದಾರೆ.

ಸಿಸಿಬಿ ಪೊಲೀಸರು ಖಚಿತ ಮಾಹಿತಿ ಆಧರಿಸಿ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೆಸಿಡೆನ್ಸಿ ರಸ್ತೆಯ ಗೋಲ್ಡ್ ಟವರ್ ನಲ್ಲಿರುವ ಟೈಮ್ಸ್ ಬಾರ್ ಆಂಡ್ ರೆಸ್ಟೋರೆಂಟ್ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಯುವತಿಯರು ಅಶ್ಲೀಲ ನೃತ್ಯ ಮಾಡುತ್ತಿದ್ದದ್ದು ಮತ್ತು ಅವರ ಮೇಲೆ ಗ್ರಾಹಕರು ಹಣ ಎಸೆಯುತ್ತಿದ್ದದ್ದು ಪತ್ತೆಯಾಗಿದೆ.

ಬಿಹಾರ ಮತ್ತು ನೇಪಾಳದಿಂದ ಯುವತಿಯರನ್ನು ಮಾನವ ಕಳ್ಳಸಾಗಣೆ ಮೂಲಕ ಕರೆತಂದು ಬಾರ್ ಗರ್ಲ್ ಗಳಾಗಿ ಕೆಲಸಕ್ಕಿಟ್ಟುಕೊಂಡಿದ್ದರು. ಅಲ್ಲದೆ ಅವರಿಗೆ ಅಶ್ಲೀಲ ಉಡುಗೆಗಳನ್ನು ತೊಡಿಸಿ, ಅಶ್ಲೀಲ ನೃತ್ಯ ಮಾಡಿಸಿ, ಗಿರಾಕಿಗಳಿಗೆ ಲೈಂಗಿಕ ಪ್ರಚೋದನೆ ನೀಡಲಾಗುತ್ತಿತ್ತು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ 37 ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ಯುವತಿಯರ ಮೇಲೆಎಸೆಯಲಾಗಿದ್ದ 1,95,750 ರುಪಾಯಿ ನಗದನ್ನು ವಶಪಡಿಸಿಕೊಳ್ಳಾಲಗಿದೆ ಮತ್ತು ಲೈಂಗಿಕ ಶೋಷಣೆಗೆ ಒಳಗಾಗಿದ್ದ ಬೇರೆ ಬೇರೆ ರಾಜ್ಯದ ಒಟ್ಟು 77 ಯುವತಿಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯ ನಂತರ ಟೈಮ್ಸ್ ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕರಾದ ಎಚ್.ಗಂಶೆಟ್ಟಿ ಹಾಗೂ ಪಾಲುದಾರರಾದ ಧನೇಂದ್ರ, ಸೈಯದ್ ಸಮೀರ್, ನಾಗೇಶ್ ಸಿ.ಎಲ್. ಚೇತನ್, ಓಂ ಪ್ರಕಾಶ್, ವನಿತಾ, ಶಾಂತಿ ಸ್ವರೂಪ್ ಮತ್ತು ಮೂರ್ತಿ ಎಂಬುವವರು ತಲೆಮರೆಸಿಕೊಂಡಿದ್ದಾರೆ.

ಬಂಧಿತ 37 ಆರೋಪಿಗಳ ವಿರುದ್ಧ ಹಾಗೂ ತಲೆಮರೆಸಿಕೊಂಡಿರುವ ಮಾಲೀಕರ ವಿರುದ್ಧ ಐಪಿಸಿ ಸೆಕ್ಸೆನ್ 370(ಎ), (2), 370(3) ಹಾಗೂ 294ರಡಿ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.

Write A Comment