ರಾಷ್ಟ್ರೀಯ

ತನ್ನನ್ನು ಹುತಾತ್ಮ ಯೋಧನಿಗೆ ಹೋಲಿಸಿಕೊಂಡ ಸೂರತ್‌ನಲ್ಲಿ ಜೈಲಿನಲ್ಲಿರುವ ಹಾರ್ದಿಕ್ ಪಟೇಲ್

Pinterest LinkedIn Tumblr

hardik_patel

ಗುಜರಾತ್: ದೇಶದ್ರೋಹದ ಆರೋಪದಲ್ಲಿ ಅಕ್ಟೋಬರ್ ತಿಂಗಳಿನಿಂದ ಸೂರತ್‌ನಲ್ಲಿ ಜೈಲು ವಾಸ ಅನುಭವಿಸುತ್ತಿರುವ 22ರ ಹರೆಯದ ಹಾರ್ದಿಕ್ ಪಟೇಲ್ ತನ್ನನ್ನು ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟಿರುವ ಯೋಧನಿಗೆ ಹೋಲಿಸಿಕೊಂಡಿದ್ದಾನೆ.

ಅಮ್ಮಂದಿನ ದಿನದ ಪ್ರಯುಕ್ತ ತನ್ನ ಹೆತ್ತವರಿಗೆ ಬರೆದ ಪತ್ರವೊಂದರಲ್ಲಿ ನೀನು ನಿನ್ನ ಮಗನಿಗಾಗಿ ಕಣ್ಣೀರು ಹಾಕಬೇಡ. ದೇಶಕ್ಕಾಗಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟುಕೊಂಡ ನೂರಾರು ಯೋಧರು ತಮ್ಮ ಅಮ್ಮ ಮತ್ತು ಕುಟುಂಬದಿಂದ ದೂರದಲ್ಲಿದ್ದಾರೆ. ಅವರು ದೇಶ ಸೇವೆ ಮಾಡುತ್ತಾ ಹುತಾತ್ಮರಾಗುತ್ತಾರೆ, ನೀನು ಅಳಬೇಡ ಎಂದು ಹಾರ್ದಿಕ್ ತನ್ನ ಅಮ್ಮನಿಗೆ ಸಾಂತ್ವನ ಹೇಳಿದ್ದಾರೆ.

ತಮಗೆ ಮೀಸಲಾತಿ ನೀಡಬೇಕೆಂದು ಹಾರ್ದಿಕ್ ಪಟೇಲ್, ಪಟೇಲ್ ಸಮುದಾಯರ ಮುಂದಾಳತ್ವ ವಹಿಸಿ ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ ಹಲವಾರು ಪ್ರದೇಶಗಳಲ್ಲಿ ಸಂಘರ್ಷವೇರ್ಪಟ್ಟಿದ್ದು, ಇದರಿಂದ ಗುಜರಾತ್ ಸರ್ಕಾರಕ್ಕೆ ಸುಮಾರು ರು. 100 ಕೋಟಿಯಷ್ಟು ನಷ್ಟವುಂಟಾಗಿತ್ತು. ಹೋರಾಟಗಳು, ಸಂಘರ್ಷಗಳು ತೀವ್ರವಾಗುತ್ತಿದ್ದಂತೆ ರಾಷ್ಟ್ರದ್ರೋಹದ ಆರೋಪದಲ್ಲಿ ಈತನನ್ನು ಬಂಧಿಸಲಾಗಿತ್ತು.

Write A Comment