ಕರಾವಳಿ

ಇಂಡಿಯನ್ ಗ್ರ್ಯಾನ್‌ಪ್ರಿ ಅಥ್ಲೆಟಿಕ್ಸ್: ಮಂಗಳೂರು ಮೂಲದ ಎಂ.ಆರ್‌.ಪೂವಮ್ಮಗೆ ಚಿನ್ನ

Pinterest LinkedIn Tumblr

M R Poovamma from ONGC won the Gold medal in Women’s 400m at a19th Federation Cup, National Senior Athletics Championship at Mangala Stadium in Mangaluru on Monday. –Photo/ Govindraj Javali

ಪಟಿಯಾಲ: ಒಎನ್‌ಜಿಸಿ ತಂಡವನ್ನು ಪ್ರತಿನಿಧಿಸಿದ್ದ ಮಂಗಳೂರು ಮೂಲದ ಎಂ.ಆರ್. ಪೂವಮ್ಮ ಶುಕ್ರವಾರ ಇಲ್ಲಿ ಆರಂಭವಾದ ಇಂಡಿಯನ್ ಗ್ರ್ಯಾನ್‌ಪ್ರಿ (ಹಂತ 2) ಅಥ್ಲೆಟಿಕ್ಸ್ ಕೂಟದ ಮಹಿಳೆಯರ 400 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗೆದ್ದರು. ಆದರೆ ಅವರು ಒಲಿಂಪಿಕ್ಸ್‌ಅರ್ಹತಾ ಮಟ್ಟವನ್ನು ತಲುಪಲು ವಿಫಲರಾದರು.

ಗುರುವಾರವಷ್ಟೇ ತಮ್ಮ 26ನೇ ಜನ್ಮದಿನವನ್ನು ಆಚರಿಸಿದ್ದ ಪೂವಮ್ಮ ಇಲ್ಲಿಯ ಎನ್‌ಐಎಸ್‌ಟ್ರ್ಯಾಕ್‌ನಲ್ಲಿ ಚಿನ್ನದ ಖುಷಿಯಲ್ಲಿ ಮಿಂದರು. 400 ಮೀಟರ್ಸ್ ಗುರಿಯನ್ನು ಅವರು 52.67 ಸೆಕೆಂಡುಗಳಲ್ಲಿ ಮುಟ್ಟಿದರು. ಅವರ ಪ್ರತಿಸ್ಪರ್ಧಿ ಕೇರಳದ ಅನಿಲ್ಡಾ ಥಾಮಸ್ 53.10 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನ ಪಡೆದರು.

ಇತ್ತೀಚೆಗೆ ನಡೆದಿದ್ದ ಫೆಡರೇಷನ್ ಕಪ್ ಅಥ್ಲೆಟಿಕ್ಸ್‌ನಲ್ಲಿ ಅನಿಲ್ಡಾ ಅವರು 52.40 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಆದರೆ ಈ ಬಾರಿ ಪೂವಮ್ಮ ಕೇರಳದ ಓಟಗಾರ್ತಿಯನ್ನು ಹಿಂದಿಕ್ಕಿದ್ದರು.

ಮುಂದಿನ ವಾರ ಪೋಲೆಂಡ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಅಥ್ಲೆ ಟಿಕ್ ಕೂಟದಲ್ಲಿ ಪಾಲ್ಗೊಳ್ಳಲು ಪೂವಮ್ಮ ಅವರು ಶನಿವಾರ ತೆರಳುತ್ತಿ ದ್ದಾರೆ. ಅಲ್ಲಿ ಒಲಿಂಪಿಕ್ ಅರ್ಹತಾ ಮಟ್ಟ ತಲುಪುವ ಹೆಗ್ಗುರಿಯನ್ನು ಅವರು ಹೊಂದಿದ್ದಾರೆ.

ದ್ಯುತಿ ಚಾಂದ್‌ಗೆ ಚಿನ್ನ: ಒಡಿಶಾದ ದ್ಯುತಿ ಚಾಂದ್ ಶುಕ್ರವಾರ ಮಹಿಳೆಯರ 100 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದರು.

ದ್ಯುತಿ 11.37 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಕೆನರಾ ಬ್ಯಾಂಕ್‌ತಂಡವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಎಚ್‌.ಎಂ. ಜ್ಯೋತಿ (11.57ಸೆ) ಮತ್ತು ಶ್ರಬಾನಿ ನಂದಾ (11.60ಸೆ) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.

ಇತ್ತೀಚೆಗೆ ನಡೆದಿದ್ದ ಫೆಡರೇಷನ್ ಕಪ್ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ದ್ಯುತಿ ಚಾಂದ್ 11.33 ಸೆಕೆಂಡುಗಳಲ್ಲಿ 100 ಮೀಟರ್ಸ್ ಗುರಿ ಮುಟ್ಟಿ ದಾಖಲೆ ನಿರ್ಮಿಸಿದ್ದರು. ಆದರೆ ಇಲ್ಲಿ ಅವರು ಆ ಹಂತವನ್ನು ಮುಟ್ಟಲಿಲ್ಲ.

ಜಾವೆಲಿನ್ ಥ್ರೋನಲ್ಲಿ ಉತ್ತರ ಪ್ರದೇಶದ ಅನುರಾಣಿ (ದೂರ: 56.77ಮೀ) ಚಿನ್ನದ ಪದಕ ಗೆದ್ದರು. ಅವ ರ ರಾಜ್ಯದವರೇ ಆದ ಸುಮನ್ ದೇವಿ ಎರಡನೇ ಸ್ಥಾನ ಪಡೆದರು.

ಮಹಿಳೆಯರ ಡಿಸ್ಕಸ್‌ಥ್ರೋ ಸ್ಪರ್ಧೆಯಲ್ಲಿ ಕೃಷ್ಣ ಪುನಿಯಾ (ದೂರ: 56.02ಮೀ) ಅವರು ಚಿನ್ನದ ಪದಕ ಗೆದ್ದರು. ಅವರು 2010ರ ಕಾಮನ್‌ವೆಲ್ತ್‌ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

‍ಪುರುಷರ ವಿಭಾಗದಲ್ಲಿ ಹರಿಯಾಣದ ಅಂಕಿತ್ ಶರ್ಮಾ ಅವರು ಲಾಂಗ್‌ಜಂಪ್‌ನಲ್ಲಿ (ದೂರ: 7.92ಮೀ) ಚಿನ್ನದ ಪದಕ ಗೆದ್ದರು. ತಮಿಳುನಾಡಿನ ಕುಮಾರವೇಲ್ ಪ್ರೇಮಕುಮಾರ್ ಎರಡನೇ ಸ್ಥಾನ ಪಡೆದರು.

1500 ಮೀ ಓಟದಲ್ಲಿ ಅಜಯಕುಮಾರ್ ಸರೋಜ್ ಮತ್ತು 5000 ಮೀ ಓಟದಲ್ಲಿ ಜಿ. ಲಕ್ಷ್ಮಣನ್ ಬಂಗಾರದ ಪದಕ ಗೆದ್ದರು.

ಟ್ರಿಪಲ್ ಜಂಪ್‌ನಲ್ಲಿ ಅರ್ಪಿಂದರ್ ಸಿಂಗ್ (15.93ಮೀ) ಮೊದಲ ಸ್ಥಾನ ಗಳಿಸಿದರು.

Write A Comment